Asianet Suvarna News Asianet Suvarna News

ತೋಟಗಾರಿಕಾ ಇಲಾಖೆಯಿಂದ ರೈತರ ನೆರವಿಗೆ ಹೊಸ ಕೇಂದ್ರ

ಅಗತ್ಯವಿರುವ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಆಯ್ದ ತೋಟಗಾರಿಕಾ ಕ್ಷೇತ್ರಗಳು ಮತ್ತು ನ​ರ್ಸ​ರಿ​ಗ​ಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.

Horticulture department plan For Open New Center To help Farmers snr
Author
Bengaluru, First Published Mar 29, 2021, 9:13 AM IST

ಬೆಂಗಳೂರು (ಮಾ.29):  ರೈತರು ಬೆಳೆಯಬಹುದಾದ ಬೆಳೆಗಳು ಮತ್ತು ಅವುಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಆಯ್ದ ತೋಟಗಾರಿಕಾ ಕ್ಷೇತ್ರಗಳು ಮತ್ತು ನ​ರ್ಸ​ರಿ​ಗ​ಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಭಾ​ರತೀಯ ತೋ​ಟ​ಗಾ​ರಿಕಾ ಸಂಶೋ​ಧನಾ ಸಂಸ್ಥೆ (​ಐ​ಐ​ಎ​ಚ್‌​ಆ​ರ್‌​) ಮ​ತ್ತು ​ಬೆಂಗ​ಳೂ​ರು ಕೃಷಿ ವಿವಿಯ ಸಹಯೋಗದೊಂದಿಗೆ ‘ಅಗ್ರೊ ಕ್ಲೈಮೆ​ಟಿಕ್‌ ಝೋನ್‌​’ (ಕೃಷಿ ಭೌ​ಗೋ​ಳಿಕ ವಲಯ) ಕೇಂದ್ರಗ​ಳನ್ನು ತೆ​ರೆ​ಯಲು ನಿ​ರ್ಧ​ರಿ​ಸಿದ್ದು, ಈ ಕೇಂದ್ರಗಳಲ್ಲಿ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.

ಆ ಮೂಲಕ ಐ​ಐ​ಎ​ಚ್‌​ಆರ್‌ ಮತ್ತು ಕೃಷಿ ವಿವಿಗಳಲ್ಲಿ ಅ​ಭಿ​ವೃದ್ಧಿ ಪ​ಡಿ​ಸಿದ ಹೊಸ ಹೊಸ ತಂತ್ರ​ಜ್ಞಾ​ನ​ಗಳು, ಅ​ಧಿಕ ಇ​ಳು​ವರಿ ಕೊ​ಡುವ ಹೊಸ ತ​ಳಿ​ಗಳ (​ಹೂವು, ಹಣ್ಣು, ತ​ರ​ಕಾರಿ ಬೆ​ಳೆ​ಗ​ಳು​) ಬಗ್ಗೆ ಈ ಕೇಂದ್ರಗಳ ಮೂ​ಲಕ ರೈ​ತ​ರಿಗೆ ಮಾಹಿತಿಯನ್ನು ಒದಗಿಸಲಿದೆ. ಜೊತೆಗೆ, ಕೃಷಿ ವಿ​ವಿಯ ವಿ​ಜ್ಞಾ​ನಿ​ಗಳು ಮ​ತ್ತು ತ​ಜ್ಞರು ​ರಾ​ಜ್ಯದ ಯಾವ ಭಾ​ಗದ ರೈ​ತ​ರು ಯಾವ ಮಾ​ದ​ರಿಯ ಭೂಮಿ ಹೊಂದಿ​ದ್ದಾರೆ. ಅ​ಲ್ಲಿನ ವಾ​ತಾ​ವ​ರಣ ಎಂಥ​ದ್ದು, ಆ ಭೂ​ಮಿ​ಯಲ್ಲಿ ಎಂತಹ ಬೆಳೆ ಸೂಕ್ತ ಎಂಬು​ದನ್ನು ರೈ​ತ​ರಿಗೆ ವಿವರಿಸಲಿದ್ದಾರೆ.

ತೋಟಗಾರಿಕೆಯಿಂದ ರೈತರಿಗೆ ವರ್ಷವಿಡೀ ಭರ್ಜರಿ ಆದಾಯ ..

ರಾಜ್ಯದಲ್ಲಿ ಸು​ಮಾರು 400ಕ್ಕೂ ಹೆಚ್ಚು ತೋ​ಟ​ಗಾ​ರಿಕೆ ಕ್ಷೇ​ತ್ರ​ಗ​ಳಿವೆ. ಇವುಗಳ ಪೈಕಿ ಮೊ​ದಲ ಹಂತ​ದಲ್ಲಿ ಹತ್ತು ತೋಟಗಾರಿಕಾ ಕ್ಷೇ​ತ್ರ​ಗ​ಳಲ್ಲಿ ಕಿ​ಯೋಸ್ಕ್‌ಗ​ಳ​ನ್ನು​ ಅಳವಡಿಸಲಾಗುವುದು. ಈ ಕಿಯೋಸ್ಕ್‌ಗಳ ಮೂಲಕ ರೈ​ತ​ರಿಗೆ ಬೇ​ಕಾದ ಮಾಹಿತಿಗಳನ್ನು ಒ​ದ​ಗಿ​ಸ​ಲಾ​ಗು​ವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೋ​ಟ​ಗಾ​ರಿಕೆ ಕ್ಷೇತ್ರ ಮತ್ತು ನ​ರ್ಸ​ರಿ​ಗ​ಳಲ್ಲಿ ಈ​ಗಾ​ಗಲೇ ರೈ​ತ​ರಿಗೆ ಬೇ​ಕಾದ ಸ​ಸಿ​ಗಳನ್ನು ನೀ​ಡ​ಲಾ​ಗು​ತ್ತಿ​ದೆ. ಆ​ದರೆ, ಐ​ಐ​ಎ​ಚ್‌​ಆರ್‌ ಮತ್ತು ಕೃಷಿ ವಿವಿ ಜೊತೆಗೆ ಹೊಸ ತಂತ್ರ​ಜ್ಞಾ​ನ​ಗಳು ಮತ್ತು ಅ​ಧಿಕ ಇ​ಳು​ವರಿ ಕೊ​ಡುವ ಹೊಸ ತ​ಳಿ​ಗಳ ಬಗ್ಗೆ ಮಾ​ಹಿತಿ ಸಿ​ಗು​ತ್ತಿ​ರ​ಲಿಲ್ಲ. ಇದೀಗ ಈ ಮಾ​ಹಿ​ತಿಯೊಂದಿಗೆ ರೈ​ತ​ರಿಗೆ ಅ​ಗತ್ಯ ತ​ರ​ಬೇ​ತಿ​ಗ​ಳನ್ನು ಕೂಡ ನೀ​ಡ​ಲಾ​ಗು​ವುದು ಎಂದು ತೋಟಗಾರಿಕೆ ಇ​ಲಾಖೆ ನಿ​ರ್ದೇ​ಶಕಿ ಬಿ. ಫೌ​ಜಿಯಾ ತ​ರುನ್ನಂ ತಿ​ಳಿ​ಸಿ​ದರು.

ತೋಟಗಾರಿಕಾ ಕ್ಷೇತ್ರ ಮತ್ತು ನ​ರ್ಸ​ರಿ​ಗ​ಳಲ್ಲಿ ಮಾ​ದರಿ ತಾ​ಕು​ಗ​ಳನ್ನೂ ನಿ​ರ್ಮಿ​ಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಐ​ಐ​ಎ​ಚ್‌​ಆ​ರ್‌​ನೊಂದಿಗೆ ಪ್ರಾ​ಥ​ಮಿಕ ಹಂತದ ಮಾ​ತು​ಕತೆ ನ​ಡೆ​ದಿದೆ ಎಂದು ಅವರು ವಿವರಿಸಿದರು.

ಯಾವ ಮಾಹಿತಿ ಲಭ್ಯ?:

ಈ ಕಿಯೋಸ್ಕ್‌ಗಳಲ್ಲಿ ರೈ​ತ​ರಿಗೆ ಅ​ಧಿಕ ಇ​ಳು​ವರಿ ಕೊ​ಡುವ ಬಿ​ತ್ತನೆ ಬೀ​ಜಗಳು, ಹ​ಣ್ಣಿನ ಸ​ಸಿ​ಗಳು, ಬೆಳೆ ಕೊಯ್ಲು ಮಾ​ಡಲು ಬೇ​ಕಾದ ಯಂತ್ರೋಪಕರಣಗಳ ಮಾ​ಹಿತಿ, ರೈ​ತ ಉ​ದ್ಯ​ಮಿ​ಗ​ಳಿ​ಗಾಗಿ ಹೊಸ ತಂತ್ರ​ಜ್ಞಾ​ನ​ಗಳು, ಅಂತರ ಬೆಳೆ ಬೇ​ಸಾಯ ಪ​ದ್ಧ​ತಿ, ಕೀಟನಾ​ಶ​ಕ​ಗಳನ್ನು ಹೇಗೆ ಬ​ಳ​ಸ​ಬೇಕು ಮತ್ತು ಎ​ಷ್ಟುಪ್ರಮಾಣದಲ್ಲಿ ಬ​ಳ​ಸ​ಬೇ​ಕು ಎಂಬದರ ಕುರಿತ ಮಾ​ಹಿತಿ, ಜೊತೆಗೆ ರೈ​ತ​ರಿಗೆ ಬೇ​ಕಾದ ಪ​ರಿ​ಕ​ರ​ಗಳ ಮಾ​ರಾ​ಟಕ್ಕೂ ವ್ಯ​ವಸ್ಥೆ ಮಾ​ಡ​ಲಾ​ಗು​ವುದು ಎಂದು ಅವರು ತಿಳಿಸಿದ್ದಾರೆ.

ಕೃಷಿ ತಂತ್ರ​ಜ್ಞಾನ ಮತ್ತು ವಿವಿಧ ಬೆಳೆಗಳ ತ​ಳಿ​ಗಳ ಕುರಿತು ಮಾ​ಹಿತಿ ಪ​ಡೆ​ಯಲು ದೂ​ರದ ಪ್ರ​ದೇ​ಶ​ಗ​ಳಿಂದ ರೈ​ತರು ಬೆಂಗ​ಳೂರು ನಗರಕ್ಕೆ ಬರುವುದನ್ನು ತಪ್ಪಿಸಲಾಗುವುದು. ಅಲ್ಲದೆ, ರೈತರಿಗೆ ​ತಾವು ಇ​ರು​ವ​ಲ್ಲಿಗೇ ಮಾ​ಹಿತಿ ತ​ಲು​ಪಿ​ಸು​ವುದು ಅಗ್ರೊ ಕ್ಲೈ​ಮೆ​ಟಿಕ್‌ ವ​ಲ​ಯ​ ಸ್ಥಾ​ಪನೆಯ ಮುಖ್ಯ ಉ​ದ್ದೇಶ.

-ಬಿ.ಫೌ​ಜಿಯಾ ತ​ರುನ್ನಂ, ನಿ​ರ್ದೇ​ಶಕಿ, ರಾಜ್ಯ ತೋಟಗಾರಿಕೆ ಇ​ಲಾಖೆ

Follow Us:
Download App:
  • android
  • ios