Asianet Suvarna News Asianet Suvarna News

Delhi Pollution : 6 ಉಷ್ಣ ವಿದ್ಯುತ್ ಸ್ಥಾವರ ಬಂದ್, ರಾಷ್ಟ್ರ ರಾಜಧಾನಿಯಲ್ಲಿ ಮಿನಿ ಲಾಕ್‌ಡೌನ್!

*ದೆಹಲಿಯಲ್ಲಿ ಪ್ರಾಣ ವಾಯುವಿನ ಗುಣಮಟ್ಟ ಕುಸಿತ
*ನವೆಂಬರ್ 21ರ ವರೆಗ ಮಿನಿ ಲಾಕ್‌ಡೌನ್
*ಬುಧವಾರದಿಂದ ಶಾಲಾ ಕಾಲೇಜುಗಳೂ ಬಂದ್
*ಶೇ. 50 ಸರಕಾರಿ ನೌಕರರು ಮನೆಯಿಂದ ಕೆಲಸ
*ನ.30ರವರೆಗೆ ಒಟ್ಟು 6 ಉಷ್ಣ ವಿದ್ಯುತ್ ಸ್ಥಾವರಗಳು ಬಂದ್
 

NCR schools colleges shut construction halt till November 21 in Delhi due to air pollution mnj
Author
Bengaluru, First Published Nov 17, 2021, 2:21 PM IST

ನವದೆಹಲಿ(ನ.17): ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅಕ್ಕ ಪಕ್ಕದ ರಾಜ್ಯಗಳಲ್ಲಿ  (Delhi-NCR) ವಾಯು ಗುಣಮಟ್ಟ ತೀರಾ ಕಳಪೆಯಾಗಿದ್ದು, ಜನರು ಉಸಿರಾಡಲೂ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ವಾಯು ನಿರ್ವಹಣಾ ಆಯೋಗವು (CAQM) ಮಂಗಳವಾರದಿಂದ ಮುಂದಿನ ಸೂಚನೆ ಬರುವವರೆಗೂ ಶಾಲಾ-ಕಾಲೇಜುಗಳು (School and Colleges) ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿದೆ. ಕಳಪೆ ವಾಯು ಮಾಲಿನ್ಯದಿಂದ ಪಾರಾಗಲು ದೆಹಲಿ-ಎನ್‌ಸಿಆರ್‌ನ (Delhi-National Capital Region)  ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನೂ ಸ್ಥಗಿತಗೊಳಿಸುವಂತೆ ಹಾಗೂ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ಹೊರಡಿಸಿದೆ. ನವೆಂಬರ್‌ 21 ವರೆಗೆ ಸರ್ಕಾರಿ ಕಚೇರಿಗಳಲ್ಲಿ 50 ಪ್ರತಿಶತ ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕಾಗಿ ಹೇಳಿದೆ. ದೆಹಲಿ ವಾಯುಮಾಲಿನ್ಯ ಹೆಚ್ಚಳವಾದ ಹಿನ್ನೆಲೆಯಲ್ಲಿ ನಿನ್ನೆ ನಾಲ್ಕು ರಾಜ್ಯಗಳಿಂದ ಸುಪ್ರೀಂ ಕೋರ್ಟ್‌ಗೆ (Supreme Court) ವರದಿ ಸಲ್ಲಿಸಲಾಗಿತ್ತು. ಈ ವರದಿಯ ವಿಚಾರಣೆ ಇಂದು (ಬುಧವಾರ ನ.17) ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ. ಮಾಲಿನ್ಯ ನಿಯಂತ್ರಣ ಕುರಿತು ಸುಪ್ರೀಂ ಕೋರ್ಟ್‌ನಿಂದ ಇಂದು ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ದೆಹಲಿ ಪ್ರವೇಶಕ್ಕೆ ಟ್ರಕ್‌ಗಳಿಗೆ ನಿಷೇಧ!
ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ಟ್ರಕ್‌ಗಳನ್ನು (Truck) ಹೊರತುಪಡಿಸಿ, ಇತರೆ ಟ್ರಕ್‌ ಗಳನ್ನು ನವೆಂಬರ್ 21 ರವರೆಗೆ ದೆಹಲಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ಷರತ್ತುಗಳು ಅನ್ವಯವಾಗಲಿದವೆ. ಸದ್ಯಕ್ಕಿರುವ ಈ ನಿರ್ಬಂಧವನ್ನು ವಿಸ್ತರಿಸ ಸಾಧ್ಯತೆಯೂ ಇದೆ, ಎಂದು ಆಯೋಗ ಹೇಳಿದೆ. CAQM ನಿರ್ವಹಣೆಯಲ್ಲಿರು ಐದು ರಾಜ್ಯಗಳಾದ ದೆಹಲಿ, ಉತ್ತರ ಪ್ರದೇಶ , ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಿಗೆ ನವೆಂಬರ್ 21 ರವರೆಗೆ ಎನ್‌ಸಿಆರ್‌ನಲ್ಲಿ ಬರುವ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ 50 ಪ್ರತಿಶತ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.

ನಿರ್ಮಾಣ ಕಾರ್ಯಗಳು ಸ್ಥಗಿತ! 
ಅಲ್ಲಿಯವರೆಗೆ ರೈಲ್ವೆ, ಮೆಟ್ರೋ, ವಿಮಾನ ನಿಲ್ದಾಣ, ಬಸ್ ಟರ್ಮಿನಲ್‌ಗಳು ಮತ್ತು ರಕ್ಷಣಾ ಸಂಬಂಧಿತ ಯೋಜನೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಹೊರತುಪಡಿಸಿ, ಎಲ್ಲಾ ನಿರ್ಮಾಣಗಳನ್ನು ಸ್ಥಗಿತಗೊಳಿಸಲಾಗುವುದು. ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿರುವ ಆರು ಉಷ್ಣ ಸ್ಥಾವರಗಳು (Thermal power plants) ಸಹ ಮುಚ್ಚಲ್ಪಡಲಿವೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ತುರ್ತು ಸಭೆ ನಡೆಸಿದ ನಂತರ ಮಂಗಳವಾರ ತಡರಾತ್ರಿ ದಿಲ್ಲಿಯಲ್ಲಿ ಮಿನಿ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಆಯೋಗದ ಸದಸ್ಯರು, ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಸಾರಿಗೆ ಮತ್ತು ನಗರಾಭಿವೃದ್ಧಿ ಮುಂತಾದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Air Pollution| ದೆಹಲಿ ಮಾಲಿನ್ಯ ನಿಯಂತ್ರಿಸಲು ಸರ್ಕಾರಗಳಿಗೆ ಸುಪ್ರೀಂ ಗಡುವು!

ಭಾರತ ಹವಾಮಾನ ಇಲಾಖೆಯ ಸಲಹೆಯ ನಂತರ CAQM (Commission for Air Quality Management) ಈ ನಿರ್ದೇಶನಗಳನ್ನು ನೀಡಿದೆ. ಜತೆಗೆ ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವು ಕಳಪೆಯಾಗಿಯೇ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಮತ್ತಷ್ಟು ಹದಗೆಡಬಹುದು ಎಂದು ಊಹಿಸಲಾಗಿದೆ. ನವೆಂಬರ್ 21ರ ವಾಯು ಮಾಲಿನ್ಯ ಸರಿ ಹೋಗು ನಿರೀಕ್ಷೆಯಿದೆ. ಎನ್ನಲಾಗಿದೆ, ರಾಜಧಾನಿಯ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಮಂಗಳವಾರ 'ತೀವ್ರ' ಕಳಪೆ ವರ್ಗಕ್ಕೆ (AQI ಮಟ್ಟ 403) ಮತ್ತೆ ಜಾರಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಉಸಿರಾಡುವ ಗಾಳಿಯೇ ಈ ಪರಿ ಕಲುಷಿತಗೊಂಡರೆ ಮುಂದೇನು ಎನ್ನುವ ಆತಂಕ ದಲ್ಲಿಗರದು. 

6 ಪವರ್ ಪ್ಲಾಂಟ್‌ಗಳು ಬಂದ್!
ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ಥರ್ಮಲ್ ಪವರ್ ಪ್ಲಾಂಟ್‌ಗಳಲ್ಲಿ ಐದು ಪ್ಲಾಂಟ್‌ಗಳಿಗೆ ಕಾರ್ಯನಿರ್ವಹಿಸಲು ಆಯೋಗ ಅವಕಾಶ ನೀಡಿದೆ. ಉಳಿದವುಗಳು ನವೆಂಬರ್ 30 ರವರೆಗೆ ಕಾರ್ಯ ಸ್ಥಗಿತಗೊಳಿಸಲಿದೆ. ಇದರಿಂದ ಉಂಟಾಗುವ ಲೋಡ್ ಅವಶ್ಯಕತೆಗಳನ್ನು ಇತರ ವಿದ್ಯುತ್ ಸ್ಥಾವರಗಳಿಂದ ಸರಬರಾಜು ಮಾಡಲಾಗುವುದು ಎಂದು ವಿದ್ಯುತ್ ಸಚಿವಾಲಯ ಹೇಳಿದೆ.

Tablighi Jamaat ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ? : ದೆಹಲಿ ಹೈಕೋರ್ಟ್!

ವಾಯುಮಾಲಿನ್ಯ ಹೆಚ್ಚಿರುವ ಸ್ಥಳಗಳಲ್ಲಿ ಆಂಟಿ-ಸ್ಮಾಗ್ ಗನ್‌ಗಳು, ನೀರು ಚಿಮುಕಿಸುವುದು ಮತ್ತು ಧೂಳು ನಿವಾರಕಗಳನ್ನು ದಿನಕ್ಕೆ ಮೂರು ಬಾರಿ ನಿಯೋಜಿಸಬೇಕು ಎಂದು CAQM ಹೇಳಿದೆ  ಮತ್ತು ರಸ್ತೆಗಳಲ್ಲಿ ನಿರ್ಮಾಣ ಸಾಮಗ್ರಿಗಳು ಮತ್ತು ತ್ಯಾಜ್ಯವನ್ನು ಬೀಸಾಡುವವರಿಗೆ ಭಾರೀ ದಂಡವನ್ನು ವಿಧಿಸಲಾಗುತವುದು ಹಾಗೂ ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಡೀಸೆಲ್ ಜನರೇಟರ್ ಸೆಟ್‌ಗಳ ಬಳಕೆಯನ್ನು ನಿಷೇಧಿಸಿದೆ. ಸಭೆಯಲ್ಲಿ, ವಾರಾಂತ್ಯ ಸಂಪೂರ್ಣ ಲಾಕ್‌ಡೌನ್‌ನ ಸಾಧ್ಯತೆಯ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ ಅಂತಹ ಯಾವುದೇ ನಿರ್ಧಾರವನ್ನು ಪ್ರಕಟಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios