Asianet Suvarna News

ಘಟಾನುಘಟಿ ಮುಖಂಡರ ಕ್ಷೇತ್ರದಲ್ಲಿ ಭಾರೀ ಬದಲಾವಣೆ : ಮೂವರಿಗೆ ಮೀಸಲಾತಿ ಅಡ್ಡಿ

ಕರ್ನಾಟಕ ಸರ್ಕಾರ ಬೆಂಗಳೂರಿನ ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸಿದೆ. ಇದೀಗ ಮೂವರು ಮಾಜಿ ಮೇಯರ್‌ಗಳಿಗೆ ಮೀಸಲಾತಿ ಅಡ್ಡಿಯಾಗಿದೆ. 

Bengaluru ward reservation list released Ram
Author
Bengaluru, First Published Sep 15, 2020, 10:36 AM IST
  • Facebook
  • Twitter
  • Whatsapp

ಬೆಂಗಳೂರು (ಸೆ.15):  ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ 1976ಗೆ ಅನುಗುಣವಾಗಿ ರಾಜ್ಯ ಸರ್ಕಾರವು ಬಿಬಿಎಂಪಿಯ 198 ವಾರ್ಡ್‌ಗಳಿಗೆ ಹೊಸ ಮೀಸಲಾತಿ ಕರಡು ಪಟ್ಟಿ ಪ್ರಕಟಿಸಿದ್ದು ಆಕ್ಷೇಪಣೆ ಸಲ್ಲಿಕೆಗೆ ಏಳು ದಿನ ಕಾಲಾವಕಾಶ ನೀಡಿದೆ.

ಮತ್ತೊಂದೆಡೆ ಬೆಂಗಳೂರು ಮಹಾನಗರಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸುವ ಬಗ್ಗೆ ಶಾಸಕ ಎಸ್‌. ರಘು ನೇತೃತ್ವದ ಸದನ ಸಮಿತಿಗೆ ಅಂತಿಮ ವರದಿ ಸಲ್ಲಿಸಲು ನವೆಂಬರ್‌ 10 ರವರೆಗೆ ಕಾಲಾವಕಾಶ ನೀಡಿ ವಿಧಾನಸಭೆ ಅಧ್ಯಕ್ಷರು ಆದೇಶಿಸಿದ್ದಾರೆ.

ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 225ಕ್ಕೆ ಹೆಚ್ಚಳ, ಮೇಯರ್‌, ಉಪ ಮೇಯರ್‌ ಅಧಿಕಾರಾವಧಿ 30 ತಿಂಗಳಿಗೆ ಏರಿಕೆ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಇದರ ನಡುವೆ ನಿಗದಿತ ಕಾಲಾವ​ಧಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಬಿಬಿಎಂಪಿ ಮಾಜಿ ಸದಸ್ಯರಾದ ಶಿವರಾಜ್‌, ವಾಜೀದ್‌, ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ಕರಡು ಮೀಸಲಾತಿ ಪ್ರಕಟಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಮಳೆ ಕಾಟ, ಕಾರ್ಪೊರೇಟರ್‌ಗಳಿಗೆ ಫೋಟೋ ಸೆಷನ್‌ನಲ್ಲಿ ನಲಿದಾಟ! ...

ಮೀಸಲಾತಿ ತಂತ್ರ:  ವಾರ್ಡ್‌ ಮರು ವಿಂಗಡಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಜಿ ಮೇಯರ್‌ಗಳಾದ ಗಂಗಾಂಬಿಕೆ ಹಾಗೂ ಪದ್ಮಾವತಿ ಅವರ ವಾರ್ಡ್‌ಗಳನ್ನು ಬೇರೆ ಬೇರೆ ವಾರ್ಡ್‌ಗೆ ಸೇರ್ಪಡೆ ಮಾಡಿರುವುದರಿಂದ ಆ ವಾರ್ಡ್‌ಗಳ ಹೆಸರುಗಳು ಇಲ್ಲ.

ಅದೇ ರೀತಿ ಮೀಸಲಾತಿ ನಿಗದಿಯಲ್ಲಿ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಅವರು ಪ್ರತಿನಿಧಿಸುವ ಮಡಿವಾಳ ವಾರ್ಡ್‌ನ್ನು ಈಗ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಆಡಳಿತ ಪಕ್ಷದ ಮಾಜಿ ನಾಯಕ ಎಂ. ಶಿವರಾಜು ಪ್ರತಿನಿಧಿಸುತ್ತಿದ್ದ ಶಂಕರಮಠ ವಾರ್ಡ್‌ ಹಿಂದುಳಿದ ವರ್ಗ-ಎ ಮೀಸಲಾತಿಯಿಂದ ಹಿಂದುಳಿದ ವರ್ಗ ಬಿ ವರ್ಗಕ್ಕೆ ಹಾಗೂ ಅಬ್ದುಲ್‌ ವಾಜಿದ್‌ ಅವರ ಮನೋರಾಯನ ಪಾಳ್ಯ ವಾರ್ಡ್‌ನ್ನು ಸಾಮಾನ್ಯ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ಮುನಿರತ್ನ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಜಿ.ಕೆ ವೆಂಕಟೇಶ್‌, ವೇಲು ನಾಯಕರ್‌ ಹಾಗೂ ಶ್ರೀನಿವಾಸ್‌ ಅವರು ಪ್ರತಿನಿಧಿಸುವ ವಾರ್ಡ್‌ಗಳ ಮೀಸಲಾತಿ ಸಹ ಬದಲಾಗಿದೆ.

ವಾರ್ಡ್‌ ಸಂಖ್ಯೆ, ಹೆಸರು ಹಾಗೂ ಮೀಸಲಾತಿ

ವಾರ್ಡ್‌ 1- ಕೆಂಪೆಗೌಡ ವಾರ್ಡ್‌ (ಹಿಂದುಳಿದ ವರ್ಗ ಬಿ ಮಹಿಳೆ), 2- ಚೌಡೇಶ್ವರಿ (ಹಿಂದುಳಿದ ವರ್ಗ-ಬಿ), 3- ಅಟ್ಟೂರು (ಹಿಂದುಳಿದ ವರ್ಗ -ಎ), 4 ಯಲಹಂಕ ಉಪನಗರ (ಸಾಮಾನ್ಯ ಮಹಿಳೆ), 5- ಕೋಗಿಲು (ಹಿಂದುಳಿದ ವರ್ಗ-ಎ ಮಹಿಳೆ), 6- ಥಣಿಸಂದ್ರ (ಸಾಮಾನ್ಯ ಮಹಿಳೆ), 7- ಜಕ್ಕೂರು (ಸಾಮಾನ್ಯ), 8- ಗುಡ್ಡದ ಆಂಜನೇಯ ದೇವಸ್ಥಾನ (ಪರಿಶಿಷ್ಟಪಂಗಡ), 9- ಅಮೃತಹಳ್ಳಿ (ಸಾಮಾನ್ಯ), 10- ಕೊಡಿಗೇಹಳ್ಳಿ (ಹಿಂದುಳಿದ ವರ್ಗ-ಎ), 11- ವಿದ್ಯಾರಣ್ಯಪುರ (ಸಾಮಾನ್ಯ), 12- ದೊಡ್ಡಬೊಮ್ಮಸಂದ್ರ (ಹಿಂದುಳಿದ ವರ್ಗ ಬಿ), 13- ರಾಮಚಂದ್ರಪುರ (ಹಿಂದುಳಿದ ಮಹಿಳೆ-ಎ), 14- ಶೆಟ್ಟಿಹಳ್ಳಿ (ಪರಿಶಿಷ್ಟಜಾತಿ), 15- ಚಿಕ್ಕಸಂದ್ರ (ಸಾಮಾನ್ಯ ಮಹಿಳೆ), 16- ಬಾಗಲಕುಂಟೆ (ಸಾಮಾನ್ಯ ಮಹಿಳೆ)

ಡಿಸೆಂಬರ್‌ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ? ..

17-ಮಲ್ಲಸಂದ್ರ (ಸಾಮಾನ್ಯ), 18- ದಾಸರಹಳ್ಳಿ (ಪರಿಶಿಷ್ಟಜಾತಿ ಮಹಿಳೆ), 19- ಜಾಲಹಳ್ಳಿ (ಪರಿಶಿಷ್ಟಜಾತಿ), 20- ಬೃಂದಾವನನಗರ (ಸಾಮಾನ್ಯ ಮಹಿಳೆ), 21- ಜೆ.ಪಿ.ಪಾರ್ಕ್ (ಪರಿಶಿಷ್ಟಪಂಗಡ), 22- ಯಶವಂತಪುರ (ಪರಿಶಿಷ್ಟಜಾತಿ), 23 -ಮತ್ತಿಕೆರೆ (ಹಿಂದುಳಿದ ವರ್ಗ ಎ), 24- ರಾಧಾಕೃಷ್ಣ ದೇವಸ್ಥಾನ ( ಸಾಮಾನ್ಯ), 25- ಸಂಜಯನಗರ (ಸಾಮಾನ್ಯ ಮಹಿಳೆ), 26-ಹೆಬ್ಬಾಳ (ಹಿಂದುಳಿದ ವರ್ಗ-ಎ), 27-ವಿಶ್ವನಾಥ ನಾಗೇನಹಳ್ಳಿ (ಹಿಂದುಳಿದ ವರ್ಗ ಬಿ ಮಹಿಳೆ), 28- ಗೋವಿಂದಪುರ (ಹಿಂದುಳಿದ ವರ್ಗ- ಬಿ ಮಹಿಳೆ), 29- ಹೆಣ್ಣೂರು (ಹಿಂದುಳಿದ ವರ್ಗ ಎ), 30 -ಚೆಳ್ಳಕೆರೆ (ಸಾಮಾನ್ಯ), 31 -ಹೊರಮಾವು (ಸಾಮಾನ್ಯ ಮಹಿಳೆ).

32- ಕಲ್ಕೆರೆ (ಹಿಂದುಳಿದ ವರ್ಗ-ಎ ಮಹಿಳೆ), 33 -ಬಾಣಸವಾಡಿ (ಸಾಮಾನ್ಯ), 34 -ಕಮ್ಮನಹಳ್ಳಿ (ಸಾಮಾನ್ಯ), 35 -ಕಾಚರಕನಹಳ್ಳಿ (ಸಾಮಾನ್ಯ), 36-ಎಚ್‌ಬಿಆರ್‌ ಬಡಾವಣೆ (ಸಾಮಾನ್ಯ ಮಹಿಳೆ), 37 -ಕಾಡುಗೊಂಡನಹಳ್ಳಿ (ಸಾಮಾನ್ಯ ಮಹಿಳೆ), 38- ಕುಶಾಲನಗರ (ಸಾಮಾನ್ಯ ಮಹಿಳೆ), 39- ಕಾವಲ್‌ ಬೈರಸಂದ್ರ (ಸಾಮಾನ್ಯ ಮಹಿಳೆ), 40 - ಚಾಮುಂಡಿನಗರ (ಹಿಂದುಳಿದ ವರ್ಗ-ಎ ಮಹಿಳೆ), 41- ಗಂಗಾನಗರ (ಸಾಮಾನ್ಯ), 42- ಅರಮನೆ ನಗರ (ಸಾಮಾನ್ಯ ಮಹಿಳೆ), 43-ಚೊಕ್ಕಸಂದ್ರ (ಸಾಮಾನ್ಯ), 44-ದೊಡ್ಡಬಿದರಕಲ್ಲು (ಹಿಂದುಳಿದ ವರ್ಗ ಎ ಮಹಿಳೆ), 45- ಪೀಣ್ಯ ಕೈಗಾರಿಕಾ ಪ್ರದೇಶ (ಸಾಮಾನ್ಯ), 46- ಲಕ್ಷಿತ್ರ್ಮೕದೇವಿನಗರ (ಸಾಮಾನ್ಯ ಮಹಿಳೆ), 47-ನಂದಿನಿ ಬಡಾವಣೆ (ಹಿಂದುಳಿದ ವರ್ಗ ಎ ಮಹಿಳೆ), 48- ಮಾರಪ್ಪನ ಪಾಳ್ಯ (ಹಿಂದುಳಿದ ವರ್ಗ ಎ ಮಹಿಳೆ).

49- ಮಲ್ಲೇಶ್ವರ (ಸಾಮಾನ್ಯ ಮಹಿಳೆ), 50 -ಜಯಚಾಮರಾಜೇಂದ್ರನಗರ (ಸಾಮಾನ್ಯ), 51 ದೇವರಜೀವನಹಳ್ಳಿ (ಸಾಮಾನ್ಯಮಹಿಳೆ), 52 ಮುನೇಶ್ವರ ನಗರ (ಸಾಮಾನ್ಯ ಮಹಿಳೆ), 53-ಲಿಂಗರಾಜಪುರ (ಪರಿಶಿಷ್ಟಪಂಗಡ ಮಹಿಳೆ), 54- ಬೆನ್ನಿಗನಹಳ್ಳಿ (ಪರಿಶಿಷ್ಟಜಾತಿ), 55- ವಿಜ್ಞಾನಪುರ (ಪರಿಶಿಷ್ಟಜಾತಿ), 56 -ರಾಮಮೂರ್ತಿನಗರ (ಹಿಂದುಳಿದ ವರ್ಗ-ಎ), 57-ಕೆ.ಆರ್‌.ಪುರ (ಸಾಮಾನ್ಯ), 58-ಬಸವನಪುರ (ಪರಿಶಿಷ್ಟಜಾತಿ ಪರಿಶಿಷ್ಟಜಾತಿ), 59-ದೇವಸಂದ್ರ (ಸಾಮಾನ್ಯ), 60- ಎ.ನಾರಾಯಣಪುರ (ಪರಿಶಿಷ್ಟಜಾತಿ), 61-ಸಿ.ವಿ.ರಾಮನ್‌ ನಗರ (ಹಿಂದುಳಿದ ವರ್ಗ ಬಿ), 62-ಸರ್ವಜ್ಞ ನಗರ (ಪರಿಶಿಷ್ಟಜಾತಿ ಮಹಿಳೆ), 63-ಮಾರುತಿಸೇವಾನಗರ (ಸಾಮಾನ್ಯ ಮಹಿಳೆ), 64 -ಸಗಾಯಪುರಂ (ಪರಿಶಿಷ್ಟಜಾತಿ ಮಹಿಳೆ).

65 -ಪುಲಕೇಶಿನಗರ (ಸಾಮಾನ್ಯ ಮಹಿಳೆ), 66- ರಾಮಸ್ವಾಮಿಪಾಳ್ಯ (ಸಾಮಾನ್ಯ ಮಹಿಳೆ), 67-ರಾಜಮಹಲ್‌ ಗುಟ್ಟಳ್ಳಿ (ಸಾಮಾನ್ಯ), 68-ಸುಬ್ರಹ್ಮಣ್ಯನಗರ (ಸಾಮಾನ್ಯ), 69-ನಾಗಪುರ (ಹಿಂದುಳಿದ ವರ್ಗ ಎ), 70- ಮಾರುತಿನಗರ (ಹಿಂದುಳಿದ ವರ್ಗ ಎ), 71-ಲಗ್ಗೆರೆ (ಸಾಮಾನ್ಯ), 72-ರಾಜಗೋಪಾಲನಗರ (ಸಾಮಾನ್ಯ ಮಹಿಳೆ), 73-ಹೆಗ್ಗನಹಳ್ಳಿ (ಹಿಂದುಳಿದ ವರ್ಗ ಎ ಮಹಿಳೆ), 74-ಸುಂಕದಕಟ್ಟೆ(ಸಾಮಾನ್ಯಮಹಿಳೆ), 75-ಜಿ.ಹೊಸಹಳ್ಳಿ (ಸಾಮಾನ್ಯ), 76-ಹೇರೋಹಳ್ಳಿ (ಸಾಮಾನ್ಯ), 77-ಸರ್‌ ಎಂ ವಿಶ್ವೇಶ್ವರಯ್ಯ (ಸಾಮಾನ್ಯ), 78-ಕೊಟ್ಟಿಗೆ ಪಾಳ್ಯ ( ಸಾಮಾನ್ಯ), 79- ಶಕ್ತಿಗಣಪತಿನಗರ (ಸಾಮಾನ್ಯ ಮಹಿಳೆ), 80- ಶಂಕರಮಠ (ಹಿಂದುಳಿದ ವರ್ಗ ಬಿ), 81-ಮಂಜುನಾಥ ನಗರ (ಸಾಮಾನ್ಯ), 82 - ಶ್ರೀರಾಮಮಂದಿರ (ಹಿಂದುಳಿದ ವರ್ಗ-ಎ ಮಹಿಳೆ).

83 -ದಯಾನಂದನಗರ (ಪರಿಶಿಷ್ಟಜಾತಿ), 84- ಗಾಯತ್ರಿ ನಗರ (ಹಿಂದುಳಿದ ವರ್ಗ ಎ ಮಹಿಳೆ), 85-ದತ್ತಾತ್ರೇಯ ದೇವಸ್ಥಾನ ( ಸಾಮಾನ್ಯ ಮಹಿಳೆ), 86 -ಶೇಷಾದ್ರಿಪುರಂ (ಸಾಮಾನ್ಯ ಮಹಿಳೆ), 87-ವಸಂತನಗರ (ಸಾಮಾನ್ಯ), 88 -ಭಾರತಿನಗರ (ಹಿಂದುಳಿದ ವರ್ಗ ಎ ಮಹಿಳೆ), 89-ಹಲಸೂರು (ಎಸ್‌ಸಿ-ಮಹಿಳೆ), 90 -ಹೊಯ್ಸಳನಗರ (ಹಿಂದುಳಿದ ವರ್ಗ ಎ ಮಹಿಳೆ), 91 -ಹೊಸ ತಿಪ್ಪಸಂದ್ರ (ಹಿಂದುಳಿದ ವರ್ಗ ಎ ಮಹಿಳೆ), 92-ವಿಜ್ಞಾನ ನಗರ (ಸಾಮಾನ್ಯ ಮಹಿಳೆ), 93-ಗರುಡಾಚಾರ್‌ ಪಾಳ್ಯ (ಸಾಮಾನ್ಯ), 94 -ಹೂಡಿ (ಹಿಂದುಳಿದ ವರ್ಗ ಬಿ), 95-ಕಾಡುಗೋಡಿ (ಹಿಂದುಳಿದ ವರ್ಗ ಎ ಮಹಿಳೆ), 96-ಹಗದೂರು (ಪರಿಶಿಷ್ಟಜಾತಿ ಮಹಿಳೆ), 97 -ವೈಟ್‌ ಫೀಲ್ಡ್‌ (ಹಿಂದುಳಿದ ವರ್ಗ ಎ), 98-ದೊಡ್ಡನೆಕುಂದಿ (ಸಾಮಾನ್ಯ ಮಹಿಳೆ).

99- ಎಚ್‌.ಎ.ಎಲ್‌ ಏರ್‌ಪೋರ್ಟ್‌ (ಸಾಮಾನ್ಯ), 100-ಕೋನೇನ ಅಗ್ರಹಾರ (ಸಾಮಾನ್ಯ ಮಹಿಳೆ), 101-ಜೀವನ ಭೀಮಾನಗರ (ಸಾಮಾನ್ಯ ಮಹಿಳೆ), 102 -ಜೋಗುಪಾಳ್ಯ (ಸಾಮಾನ್ಯ), 103 ಶಾಂತಲನಗರ (ಹಿಂದುಳಿದ ವರ್ಗ ಎ ಮಹಿಳೆ), 104-ಸಂಪಂಗಿರಾಮನಗರ (ಸಾಮಾನ್ಯ ಮಹಿಳೆ), 105-ಗಾಂಧಿನಗರ (ಸಾಮಾನ್ಯ ಮಹಿಳೆ), 106-ಓಕುಳಿಪುರಂ (ಹಿಂದುಳಿದ ವರ್ಗ ಎ ಮಹಿಳೆ), 107-ರಾಜಾಜಿನಗರ ( ಸಾಮಾನ್ಯ), 108-ಬಸವೇಶ್ವರ ನಗರ(ಸಾಮಾನ್ಯ), 109-ವೃಷಭಾವತಿ ನಗರ (ಸಾಮಾನ್ಯ), 110-ಕಾವೇರಿಪುರ (ಹಿಂದುಳಿದ ವರ್ಗ ಎ),111-ಅಗ್ರಹಾರ ದಾಸರಹಳ್ಳಿ ( ಹಿಂದುಳಿದ ವರ್ಗ ಎ ಮಹಿಳೆ), 112-ಡಾ. ರಾಜ್‌ ಕುಮಾರ್‌ ವಾರ್ಡ್‌ (ಸಾಮಾನ್ಯ), 113-ಚಿಕ್ಕಪೇಟೆ (ಸಾಮಾನ್ಯ), 114-ಛಲವಾದಿಪಾಳ್ಯ (ಎಸ್‌ಸಿ), 115-ಬಿನ್ನಿಪೇಟೆ (ಹಿಂದುಳಿದ ವರ್ಗ ಎ ಮಹಿಳೆ)

116-ಜಗಜೀವನರಾಮ ನಗರ (ಸಾಮಾನ್ಯ), 117-ಕೆಂಪಾಪುರ ಅಗ್ರಹಾರ (ಹಿಂದುಳಿದ ವರ್ಗ ಎ), 118-ವಿಜಯನಗರ (ಸಾಮಾನ್ಯ), 119- ಹೊಸಹಳ್ಳಿ (ಹಿಂದುಳಿದ ವರ್ಗ ಎ ಮಹಿಳೆ), 120-ಮಾರೇನಹಳ್ಳಿ (ಹಿಂದುಳಿದ ವರ್ಗ ಎ), 121-ಹನುಮಗಿರಿ ದೇವಸ್ಥಾನ (ಹಿಂದುಳಿದ ವರ್ಗ ಎ), 122- ಕಲ್ಯಾಣನಗರ ( ಹಿಂದುಳಿದ ವರ್ಗ ಬಿ), 123-ಮಾರುತಿ ಮಂದಿರ (ಸಾಮಾನ್ಯ), 124-ಅತ್ತಿಗುಪ್ಪೆ (ಸಾಮಾನ್ಯ), 125-ಹಂಪಿನಗರ (ಹಿಂದುಳಿದ ವರ್ಗ-ಎ), 126-ಬಾಪೂಜಿನಗರ (ಎಸ್‌ಸಿ ಮಹಿಳೆ), 127- ಪಾದರಾಯನಪುರ (ಸಾಮಾನ್ಯ ಮಹಿಳೆ), 128- ಕೆ.ಆರ್‌.ಮಾರುಕಟ್ಟೆ(ಸಾಮಾನ್ಯ), 129- ಧರ್ಮರಾಯಸ್ವಾಮಿ ದೇವಸ್ಥಾನ (ಹಿಂದುಳಿದ ವರ್ಗ ಎ ಮಹಿಳೆ), 130- ಹೊಂಬೇಗೌಡ ನಗರ (ಸಾಮಾನ್ಯ ಮಹಿಳೆ), 131- ಶಾಂತಿನಗರ (ಸಾಮಾನ್ಯ ಮಹಿಳೆ), 132- ನೀಲಸಂದ್ರ(ಹಿಂದುಳಿದ ವರ್ಗ ಎ)

133-ವನ್ನಾರಪೇಟೆ (ಪರಿಶಿಷ್ಟಜಾತಿ ಮಹಿಳೆ), 134- ಈಜಿಪುರ (ಸಾಮಾನ್ಯ), 135- ಕೋರಮಂಗಲ (ಎಸ್‌ಸಿ ಮಹಿಳೆ), 136-ಲಕ್ಕಸಂದ್ರ (ಎಸ್‌ಸಿ ಮಹಿಳೆ), 137-ಸಿದ್ದಾಪುರ (ಸಾಮಾನ್ಯ ಮಹಿಳೆ), 138- ವಿಶ್ವೇಶ್ವರಪುರ (ಸಾಮಾನ್ಯ ಮಹಿಳೆ), 139 -ಸುಂಕೇನಹಳ್ಳಿ (ಸಾಮಾನ್ಯ), 140-ಅಜಾದ್‌ ನಗರ (ಸಾಮಾನ್ಯ), 141-ಗಾಳಿ ಆಂಜನೇಯ ದೇವಸ್ಥಾನ (ಪರಿಶಿಷ್ಟಜಾತಿ), 142- ದೀಪಾಂಜಲಿನಗರ (ಸಾಮಾನ್ಯ), 143 -ನಾಯಂಡಹಳ್ಳಿ (ಸಾಮಾನ್ಯ), 144 -ನಾಗರಬಾವಿ (ಸಾಮಾನ್ಯ), 145-ಜ್ಞಾನಭಾರತಿ (ಸಾಮಾನ್ಯ ಮಹಿಳೆ), 146-ಉಲ್ಲಾಳು ( ಹಿಂದುಳಿದ ವರ್ಗ ಎ), 147-ನಾಗದೇವನಹಳ್ಳಿ (ಸಾಮಾನ್ಯ ಮಹಿಳೆ), 148-ಕೆಂಗೇರಿ (ಸಾಮಾನ್ಯ ಮಹಿಳೆ), 149- ರಾಜರಾಜೇಶ್ವರಿನಗರ (ಸಾಮಾನ್ಯ).

150​- ಹೊಸಕೆರೆಹಳ್ಳಿ (ಸಾಮಾನ್ಯ ಮಹಿಳೆ), 151-ಗಿರಿನಗರ(ಸಾಮಾನ್ಯ), 152-ಶ್ರೀನಗರ (ಹಿಂದುಳಿದ ವರ್ಗ ಬಿ ಮಹಿಳೆ), 153-ಹನುಮಂತನಗರ,(ಹಿಂದುಳಿದ ವರ್ಗ ಎ), 154-ಕತ್ರಿಗುಪ್ಪೆ, (ಸಾಮಾನ್ಯ ಮಹಿಳೆ), 155-ವಿದ್ಯಾಪೀಠ,(ಹಿಂದುಳಿದ ವರ್ಗ ಎ), 156-ಬಸವನಗುಡಿ(ಸಾಮಾನ್ಯ ಮಹಿಳೆ), 157-ಯಡಿಯೂರು(ಹಿಂದುಳಿದ ವರ್ಗ ಎ), 158-ಬೈರಸಂದ್ರ(ಸಾಮಾನ್ಯ ಮಹಿಳೆ), 159-ಜಯನಗರ ಪೂರ್ವ(ಹಿಂದುಳಿದ ವರ್ಗ ಎ ಮಹಿಳೆ), 160-ಗುರಪ್ಪನಪಾಳ್ಯ(ಸಾಮಾನ್ಯ), 161-ಸದ್ದುಗುಂಟೆ ಪಾಳ್ಯ(ಹಿಂದುಳಿದ ವರ್ಗ ಎ ಮಹಿಳೆ), 162-ಬಿಟಿಎಂ ಬಡಾವಣೆ (ಸಾಮಾನ್ಯ), 163-ಮಡಿವಾಳ(ಸಾಮಾನ್ಯ ಮಹಿಳೆ), 164-ಜಕ್ಕಸಂದ್ರ(ಹಿಂದುಳಿದ ವರ್ಗ ಎ), 165-ದೊಮ್ಮಲೂರು(ಹಿಂದುಳಿದ ವರ್ಗ ಎ), 166-ಮಾರತ್‌ಹಳ್ಳಿ(ಸಾಮಾನ್ಯ), 167-ವರ್ತೂರು(ಹಿಂದುಳಿದ ವರ್ಗ ಎ), 168-ದೊಡ್ಡ ಕನ್ನಹಳ್ಳಿ(ಪರಿಶಿಷ್ಟಜಾತಿ), 169-ಬೆಳ್ಳಂದೂರು(ಸಾಮಾನ್ಯ), 170-ಅಗರ (ಪರಿಶಿಷ್ಟಜಾತಿ ಮಹಿಳೆ), 171-ಎಚ್‌ಎಸ್‌ಆರ್‌ ಲೇಔಟ್‌ (ಸಾಮಾನ್ಯ ಮಹಿಳೆ), 172-ಬೊಮ್ಮನಹಳ್ಳಿ(ಸಾಮಾನ್ಯ ಮಹಿಳೆ), 173-ಬಿಳೇಕಹಳ್ಳಿ (ಸಾಮಾನ್ಯ ಮಹಿಳೆ), 174-ಸಾರಕ್ಕಿ (ಸಾಮಾನ್ಯ ಮಹಿಳೆ), 175-ರಾಗಿಗುಡ್ಡ (ಹಿಂದುಳಿದ ವರ್ಗ ಎ), 176- ಕರಿಸಂದ್ರ (ಹಿಂದುಳಿದ ವರ್ಗ ಎ), 177​​​- ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ (ಹಿಂದುಳಿದ ವರ್ಗ ಬಿ), 178- ಪದ್ಮನಾಭನಗರ (ಸಾಮಾನ್ಯ ಮಹಿಳೆ), 179- ಇಟ್ಟುಮಡು (ಸಾಮಾನ್ಯ), 180- ಉತ್ತರಹಳ್ಳಿ (ಪರಿಶಿಷ್ಟಪಂಗಡ ಮಹಿಳೆ), 181- ಸುಬ್ರಹ್ಮಣ್ಯಪುರ (ಹಿಂದುಳಿದು ವರ್ಗ ಎ), 182- ವಸಂತಪುರ (ಹಿಂದುಳಿದ ವರ್ಗ ಎ), 183- ಕುಮಾರಸ್ವಾಮಿ ಬಡಾವಣೆ (ಸಾಮಾನ್ಯ), 184- ಬನಶಂಕರಿ ದೇವಸ್ಥಾನ (ಹಿಂದುಳಿದ ವರ್ಗ ಎ ಮಹಿಳೆ), 185- ಯಲಚೇನಹಳ್ಳಿ (ಸಾಮಾನ್ಯ ಮಹಿಳೆ), 186- ಜರಗನ ಹಳ್ಳಿ (ಸಾಮಾನ್ಯ ಮಹಿಳೆ), 187- ಚುಂಚನಘಟ್ಟ(ಸಾಮಾನ್ಯ), 188- ಪುಟ್ಟೇನಹಳ್ಳಿ (ಹಿಂದುಳಿದ ವರ್ಗ ಎ), 189- ಹೊಂಗಸಂದ್ರ (ಹಿಂದುಳಿದ ವರ್ಗ ಬಿ ಮಹಿಳೆ), 190- ಸಿಂಗಸಂದ್ರ (ಹಿಂದುಳಿದ ವರ್ಗ ಎ ಮಹಿಳೆ), 191- ಕೂಡ್ಲು (ಪರಿಶಿಷ್ಟಜಾತಿ ಮಹಿಳೆ), 192- ಬೇಗೂರು (ಹಿಂದುಳಿದ ವರ್ಗ ಎ ಮಹಿಳೆ), 193- ದೇವರಚಿಕ್ಕನಹಳ್ಳಿ (ಹಿಂದುಳಿದ ವರ್ಗ ಎ), 194- ಅರಕೆರೆ (ಸಾಮಾನ್ಯ), 195- ಕಾಳೇನ ಅಗ್ರಹಾರ (ಹಿಂದುಳಿದ ವರ್ಗ ಬಿ), 196- ಗೊಟ್ಟಿಗೆರೆ (ಸಾಮಾನ್ಯ ಮಹಿಳೆ), 197- ಅಂಜನಾಪುರ (ಸಾಮಾನ್ಯ ಮಹಿಳೆ), 198- ಹೆಮ್ಮಿಗೆಪುರ (ಸಾಮಾನ್ಯ ಮಹಿಳೆ).

Follow Us:
Download App:
  • android
  • ios