ಕ್ಯಾನ್ಸರ್‌ಗೆ ತುತ್ತಾಗಿದ್ದ ಮಗುವನ್ನು ಮನೆ ಬಾಗಿಲಿಗೆ ತಲುಪಿಸಿದ ಟ್ಯಾಕ್ಷಿ ಚಾಲಕ   ಬೆಂಗಳೂರಿನ  ಟ್ಯಾಕ್ಸಿ ಚಾಲಕನಿಂದ ಬಾಲಕಿ ಕುಟುಂಬಕ್ಕೆ ನೆರವು ಹಣ ಪಡೆಯದೆ ಮನೆ ತಲುಪಿಸಿದ ಚಾಲಕಗೆ ಗ್ರಾಮಸ್ಥರ ಸನ್ಮಾನ 

 ಚಾಮರಾಜನಗರ (ಮೇ.23): ಕ್ಯಾನ್ಸರ್‌ಗೆ ತುತ್ತಾಗಿದ್ದ ಮಗುವನ್ನು ರಾತ್ರಿ ವೇಳೆ ಮನೆ ಬಾಗಿಲಿಗೆ ತಲುಪಿಸಿ ಟ್ಯಾಕ್ಷಿ ಚಾಲಕರೋರ್ವರು ಮಾನವೀಯತೆ ಮೆರೆದ ಘಟನೆ ನಡೆದಿದೆ. 

ಬೆಂಗಳೂರಿನ ಟ್ಯಾಕ್ಸಿ ಚಾಲಕ ಮನು ಎಂಬಾತ ಚಾಮರಾಜನಗರ ಜಿಲ್ಲೆ ಯಳಂದೂರಿನ ದಂಪತಿ ಹಾಗೂ ಪುತ್ರಿ ಯನ್ನು (12) ಕಳೆದ ಶನಿವಾರ ರಾತ್ರಿ ಹಣ ಪಡೆಯದೆ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. 

ಬಾಲಕಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ‌ ಕೆ.ಆರ್.ಆಸ್ಪತ್ರೆಯಿಂದ ಶನಿವಾರ ಬೆಂಗಳೂರಿನ ನಿಮ್ಮಾನ್ಸ್ಗೆ ಕರೆತರಲಾಗಿತ್ತು. ಆದರೆ ಅಲ್ಲಿ ಕಿದ್ವಾಯಿಗೆ ಕರೆದಿಕೊಂಡು ಹೋಗಲು ವೈದ್ಯರು ಸೂಚಿಸಿದರು.

ಚಾಮರಾಜನಗರ ದುರಂತ : ಅನಾಥಳಾಗಿದ್ದ ಬಾಲಕಿಗೆ ಮತ್ತೆ ಸಿಕ್ಕ ಪೋಷಕರ ಮಮಕಾರ ..

ವೀಕೆಂಡ್ ಕಾರಣದಿಂದ ಅಲ್ಲಿ ಸೋಮವಾರ ಬರಲು ತಿಳಿಸಿದ್ದು, ಲಾಕ್‌ಡೌನ್ ಕಾರಣದಿಂದ ತಮ್ಮುರಿಗೆ ಬರಲು ಈ ಕುಟುಂಬ ಪರದಾಡುವಂತಾಗಿತ್ತು. ರಾತ್ರಿ ಸಮಯವಾಗಿದ್ದರಿಂದ ವಾಹನಗಳು ಸಿಗುವುದು ದುಸ್ಥರವಾಗಿತ್ತು.

ತಕ್ಷಣ ದಂಪತಿಗಳ ಕಷ್ಟಕ್ಕೆ ಸ್ಪಂದಿಸಿದ ಟ್ಯಾಕ್ಸಿ ಚಾಲಕ ಮನು ಬೆಂಗಳೂರಿನಿಂದ ಬಾಲಕಿಯ ಮನೆಗೆ ಶನಿವಾರ ರಾತ್ರಿ ಉಚಿತವಾಗಿ ಡ್ರಾಪ್ ನೀಡಿದ್ದಾರೆ. ಬಾಡಿಗೆ ನೀಡಿದರು ನಿರಾಕರಿಸಿದ್ದು, ಅವರ ಮಾನವೀಯತೆ ಕಂಡು ಗ್ರಾಮಸ್ಥರು ಮೆಚ್ಚು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ಸೇವೆಗಾಗಿ ಗ್ರಾಮದಲ್ಲೇ ಸನ್ಮಾನವನ್ನೂ ಮಾಡಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona