ಬೆಂಗಳೂರು(ಫೆ.07)  ರೌಡಿ ಶೀಟರ್ ಯಶಸ್ವಿನಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಶ್ರೀರಾಮ ಸೇನೆಯ ಬೆಂಗಳೂರು ನಗರ ಮಹಿಳಾ ಅಧ್ಯಕ್ಷೆ ಆಗಿರುವ ಯಶಸಸ್ವಿನಿ ಲಲಿತಾ ರಮೇಶ್ ಎಂಬುವರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಗಂಗಮ್ಮನಗುಡಿ ನೀಲಗಿರಿ ತೊಪ್ಪಿನಲ್ಲಿ ಲಲಿತಾ ಮೇಲೆ ಹಲ್ಲೆ ಮಾಡಿದ್ದಾರೆ. ದಾರಿಯಲ್ಲಿ ಹೋಗುವ ಮಾರ್ಗ ಮಧ್ಯೆ , ಅಡ್ಡಗಟ್ಟಿ ಲಲಿತಾ ರಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಫೆಬ್ರವರಿ 11 ರಂದು ನ್ಯಾಯಾಲಯದಲ್ಲಿ ಪ್ರಕರಣವಿದ್ದು ವಿಚಾರಣೆಗೆ ಹಾಜರಾಗಬಾರದು ಎಂದು ಹಲ್ಲೆ ಮಾಡಿದ್ದಾರೆ.

ನನ್ ಹೆಂಡ್ತಿಗೆ ನೀವೇ ಬುದ್ದಿ ಕಲ್ಸಿ ಸರ್! ಯಶಸ್ವಿನಿ ಗೌಡ ಪತಿ ಗೋಳು

ರೌಡಿ ಯಶಸ್ವಿನಿ ಮತ್ತು 5 ಜನ ಮಹಿಳೆಯರು ಸೇರಿ ಹಲ್ಲೆ ನಡೆಸಿದ್ದಾರೆ.  ಕೇಸ್ ಒಂದರಲ್ಲಿ ಸಾಕ್ಷಿ ಹೇಳದಂತೆ ಹಲ್ಲೆ ಮಾಡಿದ್ದಾರೆ ಎಂದು  ಹಲ್ಲೆಗೊಳಗಾದ ಲಲಿತಾ ಮಾಹಿತಿ ನೀಡಿದ್ದಾರೆ.  ಗಂಗಮ್ಮನಗುಡಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಲೇಡಿ ರೌಡಿಯ 'ರಾಮ ರಾಜ್ಯ'