Asianet Suvarna News Asianet Suvarna News

ಬೆಂಗಳೂರು ಕದಂಬ ಹೋಟೆಲ್‌ಗೆ ಬಾಂಬ್ ಬೆದರಿಕೆ ; ರಾಮೇಶ್ವರಂ ಕೆಫೆಗೂ ಬಾಂಬ್ ಇಟ್ಟಿದ್ದು ನಾನೇ ಎಂದ ಅನಾಮಿಕ!

ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಘಟನೆ ಮಾಸುವ ಮುನ್ನವೇ ಈಗ ಜಾಲಹಳ್ಳಿ ಬಳಿಯ ಕದಂಬ ಹೋಟೆಲ್‌ನಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸರಿಗೆ ಪತ್ರ ಬರೆಯಲಾಗಿದೆ.

Bengaluru  Kadamba Hotel get Bomb Threat after Rameshwaram Cafe blast sat
Author
First Published Apr 22, 2024, 2:14 PM IST

ಬೆಂಗಳೂರು (ಏ.22): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಘಟನೆ ಮಾಸುವ ಮುನ್ನವೇ ಈಗ ಜಾಲಹಳ್ಳಿ ಬಳಿಯ ಕದಂಬ ಹೋಟೆಲ್‌ನಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸರಿಗೆ ಪತ್ರ ಬರೆಯಲಾಗಿದೆ.

ಹೆಚ್ಎಮ್‌ಟಿ ಗ್ರೌಂಡ್ ಬಳಿ ಇರುವ ಕದಂಬ ಹೋಟೆಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಜಾಲಹಳ್ಳಿ ಪೊಲೀಸ್ ಸ್ಟೇಷನ್ ಗೆ ಅನಾಮದೇಯ ಪತ್ರ ಕೊಡಲಾಘಿದೆ. ಹೊಟೆಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಸ್ಟೇಷನ್ ಗೆ ಪತ್ರ ಬರೆಯಲಾಗಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಜಾಲಹಳ್ಳಿ ಪೊಲೀಸರು, ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳವನ್ನು ಕರೆಸಿ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಪೊಲೀಸ್ ಠಾಣೆಗೆ ನೀಡಲಾದ ಪತ್ರದಲ್ಲಿ ಪೊಲೀಸರಿಗೆ ಬೈದು ಪತ್ರ ಬೈಯಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೊಲೀಸರಿಗೆ ಪತ್ರ ಬರೆದಿದ್ದಾನೆ.

ರಾಮೇಶ್ವರಂ ಕೆಫೆ ಸ್ಫೋಟದ ಮತ್ತೊಂದು ಎಕ್ಸ್​ಕ್ಲೂಸಿವ್​: ಶಂಕಿತ ಉಗ್ರರ ಟ್ರಾವೆಲ್ ಹಿಸ್ಟರಿ ಹೇಗಿತ್ತು ಗೊತ್ತಾ.!?

ಮುಂದುವರೆದು ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಮಾಡಿದ್ದು ನಾನೇ. ಈಗ ಈ ಕದಂಬ ಹೊಟೇಲ್ ನಲ್ಲಿ ಬಾಂಬ್ ಇಟ್ಟಿರುವುದು ಕೂಡ ನಾನೇ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾನೆ. ಪೊಲೀಸರಿಗೆ ಕೆಟ್ಟದಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಪೊಲೀಸರು ಮೊದಲು ಕದಂಬ ಹೋಟೆಲ್‌ನಲ್ಲಿದ್ದ ಎಲ್ಲ ಗ್ರಾಹಕರು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಬಾಂಬ್ ಇಟ್ಟ ಬಗ್ಗೆ ಬೆದರಿಕೆ ಪತ್ರ ಬಂದರಿವುದನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಬಾಂಬ್ ಬೆದರಿಕೆ ಪತ್ರವು ಇಂದು (ಸೋಮವಾರ) ಮಧ್ಯಾಹ್ನ 12 ಸುಮಾರಿಗೆ ಜಾಲಹಳ್ಳಿ ಪೊಲೀಸ್ ಸ್ಟೇಷನ್ ತಲುಪಿದೆ. ಈ ಪತ್ರ ಸಿಕ್ಕಿದ ಕೂಡಲೇ ಪೊಲೀಸರು ಅಲರ್ಟ್ ಆಗಿ ಪರಿಶೀಲನೆ ಮುಂದಾಗಿದ್ದಾರೆ.

ಕರ್ನಾಟಕ ಬರ ಪರಿಹಾರಕ್ಕೆ ಒಂದೇ ಮೆಟ್ಟಿಲು ಬಾಕಿ; ಸುಪ್ರೀಂ ಮುಂದೆ 7 ದಿನ ಗಡುವು ಪಡೆದ ಕೇಂದ್ರ ಸರ್ಕಾರ

ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ಮಾತನಾಡಿ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಹೋಟೆಲ್‌ಗೆ ಬಂದರು. ಬಾಂಬ್ ಬೆದರಿಕೆ ಬಂದಿದೆ  ಎಲ್ಲರೂ ಹೋಟೆಲ್‌ನಿಂದ ಖಾಲಿ ಮಾಡಿ ಅಂದರು. ತಕ್ಷಣ ಪೊಲೀಸರಿಗೆ ಸಹಕಾರ ಕೊಟ್ಟಿದ್ದೇವೆ. ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೀತಾ ಇದೆ. ಹೋಟೆಲ್ ಹಾಲ್‌ನಲ್ಲಿ ಒಂದು ಸೀಮಂತ ಕಾರ್ಯಕ್ರಮ ನಡೀತಾ ಇತ್ತು. ತಕ್ಷಣ ಕಾರ್ಯಕ್ರಮ ನಿಲ್ಲಿಸಿ ಎಲ್ಲಾ ಹೊರಗೆ ಬಂದಿದ್ದಾರೆ. ಪೊಲೀಸರ ಕ್ಲಿಯರೆನ್ಸ್ ಗಾಗಿ ಕಾರ್ಯಾ ಇದ್ದೇವೆ ಎಂದು ತಿಳಿಸಿದರು.

Follow Us:
Download App:
  • android
  • ios