Asianet Suvarna News Asianet Suvarna News

ರಾಮೇಶ್ವರಂ ಕೆಫೆ ಸ್ಫೋಟದ ಮತ್ತೊಂದು ಎಕ್ಸ್​ಕ್ಲೂಸಿವ್​: ಶಂಕಿತ ಉಗ್ರರ ಟ್ರಾವೆಲ್ ಹಿಸ್ಟರಿ ಹೇಗಿತ್ತು ಗೊತ್ತಾ.!?

ಬೆಂಗಳೂರಲ್ಲಿ ಬಾಂಬ್ ಇಟ್ಟು ಶಂಕಿತರು ಹೋಗಿದ್ದೆಲ್ಲಿಗೆ? ಎಂಬುದು ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಗ್ರರ ಟ್ರಾವೆಲ್ ಹಿಸ್ಟರಿ ತಿಳಿಸಲಾಗಿದೆ. ಆರೋಪಿ ಮುಸಾವೀರ್ ಹುಸೇನ್ ಮಾರ್ಚ್ 1 ರಂದು ಬಾಂಬ್ ಬ್ಲಾಸ್ಟ್ ಮಾಡಿ ಬೆಂಗಳೂರಿಂದ ಎಸ್ಕೇಪ್ ಆಗಿದ್ದನಂತೆ. ಮುಸಾವೀರ್ ಹುಸೇನ್ ಒಬ್ಬನೇ ಬಾಂಬ್ ಸಮೇತ ಬಂದು ಸ್ಫೋಟಿಸಿದ್ದನಂತೆ. 

ಬೆಂಗಳೂರು(ಏ.18):  ನಗರದ ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿಚಾರಣೆ ವೇಳೆ ಟ್ರಾವೆಲ್ ಹಿಸ್ಟರಿ ಬಹಿರಂಗವಾಗಿದೆ. ಇಬ್ಬರು ಉಗ್ರರು ಬಾಂಬ್ ಇಡಲು ಸಂಚು ರೂಪಿಸಿದ್ರು; ಬಾಂಬ್​ ಇಡಲು ಕಾರ್ಯರೂಪಕ್ಕೆ ತಂದಿದ್ದು ಸಿಂಗಲ್​ ಮ್ಯಾನ್. ಒಬ್ಬ ಚೆನ್ನೈನಲ್ಲಿ ಕಮಾಂಡ್ ಮಾಡಿದ್ರೆ, ಇನ್ನೊಬ್ಬ ಬೆಂಗಳೂರಲ್ಲಿ ಸ್ಫೋಟಿಸಿದ್ದ ಅಂತ ತನಿಖೆ ವೇಳೆ ಉಗ್ರರ ಸಂಚು ಬಯಲಾಗಿದೆ. 

ಬೆಂಗಳೂರಲ್ಲಿ ಬಾಂಬ್ ಇಟ್ಟು ಶಂಕಿತರು ಹೋಗಿದ್ದೆಲ್ಲಿಗೆ? ಎಂಬುದು ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಗ್ರರ ಟ್ರಾವೆಲ್ ಹಿಸ್ಟರಿ ತಿಳಿಸಲಾಗಿದೆ. ಆರೋಪಿ ಮುಸಾವೀರ್ ಹುಸೇನ್ ಮಾರ್ಚ್ 1 ರಂದು ಬಾಂಬ್ ಬ್ಲಾಸ್ಟ್ ಮಾಡಿ ಬೆಂಗಳೂರಿಂದ ಎಸ್ಕೇಪ್ ಆಗಿದ್ದನಂತೆ. ಮುಸಾವೀರ್ ಹುಸೇನ್ ಒಬ್ಬನೇ ಬಾಂಬ್ ಸಮೇತ ಬಂದು ಸ್ಫೋಟಿಸಿದ್ದ,  ಮುಸಾವೀರ್ ಹುಸೇನ್ ಬಾಂಬ್ ಪ್ಲಾಂಟ್ ಮಾಡಿದ್ದ, ಅಬ್ದುಲ್ ಮತೀನ್ ಚೆನ್ನೈನಿಂದ ಕಮಾಂಡ್ ಮಾಡ್ತಿದ್ದ, ಬಾಂಬ್ ಪ್ಲಾಂಟ್ ಮಾಡಿ ಬೆಂಗಳೂರಿನಿಂದ ಬಳ್ಳಾರಿಗೆ ಎಸ್ಕೇಪ್ ಆಗಿದ್ದ ಮುಸಾವೀರ್ ಹುಸೇನ್. ಬಳಿಕ ಮುಸಾವೀರ್ ಬಳ್ಳಾರಿಯಿಂದ ತಿರುಪತಿ, ತಿರುಪತಿಯಿಂದ ಚೆನ್ನೈಗೆ ತೆರಳಿದ್ದನು. 

ಜೈ ಶ್ರೀರಾಮ್ ಹೇಳಂಗಿಲ್ಲ, ಕೇವಲ ಅಲ್ಲಾಹು ಅಕ್ಬರ್ ಮಾತ್ರ, ಬೆಂಗಳೂರಲ್ಲಿ ಯವಕರ ವಾರ್ನಿಂಗ್!

ಮತೀನ್ ಹಾಗೂ ಮುಸಾವೀರ್ ಚೆನ್ನೈನಲ್ಲಿ ಭೇಟಿಯಾಗಿದ್ದರು. ಚೆನ್ನೈನಿಂದ ಇಬ್ಬರು ಕೋಲ್ಕತ್ತಾ ಕಡೆಗೆ ಪ್ರಯಾಣ ಬೆಳೆಸಿದ್ದರು. ಒಟ್ಟಿಗೆ ಪ್ರಯಾಣ ಮಾಡಿದ್ರೆ ಕಷ್ಟ ಅಂತಾ ಸಿಂಗಲ್ ಆಗಿ ಹೋಗಿದ್ದರು. ಅಬ್ದುಲ್ ಮತೀನ್ ಹಾಗೂ ಮುಸಾವೀರ್ ಹುಸೇನ್ ಪ್ರತ್ಯೇಕವಾಗಿ ಪ್ರಯಾಣ ಮಾಡಿದ್ದರು. ಒಬ್ಬ ರೈಲಿನಲ್ಲಿ ಪ್ರಯಾಣ ಬೆಳೆಸಿದ್ರೆ, ಇನ್ನೊಬ್ಬ ಬಸ್ ನಲ್ಲಿ ಪ್ರಯಾಣಿಸಿದ್ದರಂತೆ. ಇಬ್ಬರೂ ಉಗ್ರರು ಪ್ರತ್ಯೇಕವಾಗಿ ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದರು. ಅಧಿಕಾರಿಗಳ ವಿಚಾರಣೆ ವೇಳೆ ಎಸ್ಕೇಪ್ ರೂಟ್ ಬಿಚ್ಚಿಟ್ಟಿದ್ದಾರೆ ಶಂಕಿತ ಉಗ್ರರು. 

Video Top Stories