ಬೆಂಗಳೂರು (ಮಾ.01):   ದೇಶದಲ್ಲಿ ತೈಲ ಬೆಲೆ ಹಾಗೂ ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ದರ ಏರಿಕೆಗೆ ಮನವಿ ಮಾಡಲಾಗಿದೆ. ಇದರಿಂದ ಜನಸಾಮಾನ್ಯರ ಜೀವನದ ಮೇಲೆ ಮತ್ತೊಂದು ದರ ಏರಿಕೆ ಬಿಸಿ ತಗುಲುವ ಸಾಧ್ಯತೆ ಇದೆ. 

ತೈಲ ಹಾಗೂ ಗ್ಯಾಸ್ ದರ ಏರಿಕೆಯಿಂದ ಆಟೋ ಚಾಲಕರು ತತ್ತರಿಸಿದ್ದು, ಆಟೋಗಳ ದರ ಪರಿಷ್ಕರಣೆ ಗೆ ಚಾಲಕರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ  ಬೆಂಗಳೂರಿನಲ್ಲಿ ಶೀಘ್ರದಲ್ಲೇ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.  

ಪೆಟ್ರೋಲ್, ಡಿಸೇಲ್, ಹಾಗೂ ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ 2 ಲಕ್ಷ ಆಟೋ ಚಾಲಕರು ನಿತ್ಯ ಸಂಚಾರ ಮಾಡುತ್ತಾರೆ.   ಪ್ರಸ್ತುತ ಪ್ರಯಾಣ ದರ 25 ರು. ಇದ್ದು ಇದನ್ನ  36 ರು.ಗಳಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. 

ಮೊಮ್ಮಗಳ ಕನಸು ಈಡೇರಿಸಲು ಮನೆ ಮಾರಿ ಆಟೋದಲ್ಲಿ ಜೀವನ ನಡೆಸುತ್ತಿರುವ ಅಜ್ಜ! ..

2013 ರಲ್ಲಿ 1.9 ಕಿ ಮೀಟರ್ ಗೆ ಕನಿಷ್ಟ ಪ್ರಯಾಣ ದರ 20 ರಿಂದ 25 ರು. ಹೆಚ್ಚಳವಾಗಿತ್ತು.  2019 ರಲ್ಲಿ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಆಟೋ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ.  ಆದ್ರೆ ಇದೀಗ ತೈಲ ಹಾಗೂ ಗ್ಯಾಸ್ ದರ ಹೆಚ್ಚಳ ಬೆನ್ನಲ್ಲೇ ದರ ಪರಿಷ್ಕರಣೆ ಮಾಡುವಂತೆ ಆಟೋ ಚಾಲಕರು ಮನವಿ ಮಾಡಿದ್ದಾರೆ. 

ಗ್ಯಾಸ್ ಸಿಲಿಂಡರ್ ದರ ಇಂದು 25 ರೂ ಏರಿಕೆ, ಗ್ರಾಹಕರಿಗೆ ಬರೆ ಮೇಲೆ ಬರೆ!
 
ಬೆಂಗಳೂರಿನಲ್ಲಿ ಸಾವಿರಾರು ಆಟೋಗಳು ನಿತ್ಯ ಕಾರ್ಯನಿರ್ವಹಿಸುತ್ತಿದ್ದು, ಆಟೋಗಳ ದರ ಪರಿಷ್ಕರಣೆ ಮಾಡುವಂತೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಣಣ್ ಸವದಿ ಹಾಗೂ  ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ಆಟೋ ಚಾಲಕರು ಮನವಿ ಮಾಡಿದ್ದಾರೆ. 

ಒಂದು ವೇಳೆ ದರ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್ ನೀಡಿದಲ್ಲಿ ಸದ್ಯ ಇರುವ ಕನಿಷ್ಟ 25 ರು ಬದಲಿಗೆ 36ರು.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ.  ಆಟೋಗಳ ದರ ಪರಿಷ್ಕರಣೆ ಮಾಡುವ ಅಧಿಕಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ಇದ್ದು, ಅಂಕಿತ ದೊರೆತಲ್ಲಿ ಜನಸಾಮಾನ್ಯರ ಜೀವನದ ಮೇಲೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಲಿದೆ.