ಐಟಿ ದಾಳಿ ವೇಳೆ ಸಿಕ್ಕಿದ್ದು 42 ಕೋಟಿಯಲ್ಲ, ಕೇವಲ 20 ಕೋಟಿ ರೂ.: ಅಂಬಿಕಾಪತಿ ಪುತ್ರ ಪ್ರದೀಪ್
ಐಟಿ ದಾಳಿಯ ವೇಳೆ ಸಿಕ್ಕಿದ್ದು 42 ಕೋಟಿಯಲ್ಲ, ಕೇವಲ 20 ಕೋಟಿ ರೂ ಮಾತ್ರ. ಭೂಮಿ ಮಾರಾಟ ಮಾಡಿದ ಹಣವಾಗಿದೆ ಎಂದು ಅಂಬಿಕಾಪತಿ ಪುತ್ರ ಪ್ರದೀಪ್ ಹೇಳಿದ್ದಾರೆ.

ಬೆಂಗಳೂರು (ಅ.17): ರಾಜ್ಯದ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಐಟಿ ದಾಳಿಯ ವೇಳೆ ಸಿಕ್ಕಿದ್ದು 42 ಕೋಟಿ ರೂ. ಹಣವಲ್ಲ. ಕೇವಲ 20 ಕೋಟಿ ರೂ. ಹಣವಾಗಿದೆ. ಅದು ಭೂಮಿ ಮಾರಾಟ ಮಾಡಿದ ಹಣವಾಗಿದೆ ಎಂದು ಅಂಬಿಕಾಪತಿ ಪುತ್ರ ಪ್ರದೀಪ್ ಹೇಳಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗುತ್ತಿಗೆದಾರ ಅಂಬಿಕಾಪತಿ ಮನೆಯ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಬರೋಬ್ಬರಿ 42 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿತ್ತು. ಸತತ ಎರಡೂವರೆ ದಿನಗಳ ಕಾಲ ದಾಳಿ ಮುಂದುವರೆಸಿದ್ದ ಐಟಿ ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಅಂಬಿಕಾಪತಿ ಪುತ್ರ ಪ್ರದೀಪ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಇಂದು ಮಧ್ಯಾಹ್ನದ ವೇಳೆ ಐಟಿ ವಿಚಾರಣೆಗೆ ಹಾಜರಾದ ಪ್ರದೀಪ್ ಸತತ 8 ಗಂಟೆಗಳ ವಿಚಾರಣೆಯನ್ನು ಎದುರಿಸಿ ಹೊರಗೆ ಬಂದಿದ್ದಾರೆ.
ಅಂಬಿಕಾಪತಿ 45 ವರ್ಷದ ಸ್ನೇಹಿತ, ಆರೋಪ ಸಾಬೀತಾದ್ರೆ ಕಾಲ್ಕೆಳಗೆ ನುಗ್ಗುತ್ತೇನೆ: ಡಿ. ಕೆಂಪಣ್ಣ ಆಕ್ರೋಶ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಅವರು, ಐಟಿ ಅಧಿಕಾರಿಗಳು ನೋಟಿಸ್ ನೀಡಿದಂತೆ ವಿಚಾರಣೆಗೆ ಹಾಜರಾಗಿದ್ದು, ಇಂದು ಸತತ 8 ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳು ಕೇಳಿದ ದಾಖಲೆ ಒದಗಿಸಿದ್ದೇನೆ. ದಾಳಿಯ ವೇಳೆ ಅಧಿಕಾರಿಗಳಿಗೆ ಸಿಕ್ಕಿದ್ದು 42 ಕೋಟಿ ರೂಪಾಯಿಯಲ್ಲ. ಅಲ್ಲಿ ಸಿಕ್ಕಿದ್ದು 20 ಕೋಟಿ ರೂಪಾಯಿ ಮಾತ್ರ. ಇನ್ನು ಮನೆಯಲ್ಲಿ ಪತ್ತೆಯಾದ ಹಣ ಭೂ ವ್ಯವಹಾರಕ್ಕೆ ಸಂಬಂಧಪಟ್ಟ ಹಣವಾಗಿದೆ ಎಂದು ತಿಳಿಸಿದರು.
ಮತ್ತೊಂದೆಡೆ ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಐಟಿ ಇಲಾಖೆಯಿಂದ ನನ್ನ ಸೋದರ ಪ್ರಮೋಸ್ ಅವರಿಗೂ ನೋಟೀಸ್ ನೀಡಿದ್ದಾರೆ. ಅ.21 ನೇ ತಾರೀಖು ಪ್ರಮೋದ್ ಸಹ ವಿಚಾರಣೆಗೆ ಬರ್ತಾರೆ. ಮತ್ತೆ ನನಗೆ ಅ.26 ರಂದು ವಿಚಾರಣೆಗೆ ಬರಲು ಸೂಚಿಸಿದ್ದಾರೆ ಎಂದು ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್ ಮಾಹಿತಿ ನೀಡಿದರು.
ವಿಚಾರಣೆಯಲ್ಲಿ ದಾಖಲೆ ಕೊಡ್ತೀನೆಂದಿದ್ದ ಪ್ರದೀಪ್: ಐಟಿ ದಾಳಿಯ ನಂತರ ನೋಟಿಸ್ ಕುರಿತು ಕಳೆದೆರಡು ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಂಬಿಕಾಪತಿ ಪುತ್ರ ಪ್ರದೀಪ್ ಅವರು, ಮನೆಯಲ್ಲಿ ಸಿಕ್ಕಿರುವ ಹಣಕ್ಕೂ ನಮ್ಮ ತಂದೆಯವರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ತಂದೆಯವರನ್ನ ಎಳೆದು ತರಬೇಡಿ. ಕಳೆದ 15 ವರ್ಷಗಳಿಂದ ಬಿಸಿನೆಸ್ ಮಾಡ್ತಿದ್ದೀವಿ. ಐಟಿ ಇಲಾಖೆಯಲ್ಲಿ ಉತ್ತರ ಕೊಡ್ತೀವಿ. ಮಂಗಳವಾರ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹೋಗುತ್ತೇನೆ. ಕಳೆದ ಹದಿನೈಸು ವರ್ಷಗಳಿಂದ ಬಿಸಿನೆಸ್, ರಿಯಲ್ ಎಸ್ಟೇಟ್ ವ್ಯವಹಾರದ ಜೊತೆಗೆ ನಮ್ಮ ಕೆಲವು ಆಸ್ತಿಯನ್ನು ಮಾರಾಟ ಮಾಡಿದ ಹಣವನ್ನು ಮನೆಯಲ್ಲಿ ಇಡಲಾಗಿತ್ತು. ಈ ಬಗ್ಗೆ ಮಂಗಳವಾರ ಐಟಿ ಇಲಾಖೆಗೆ ಹೋಗಿ ಉತ್ತರ ನೀಡ್ತೀನಿ ಎಂದು ಪ್ರದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
42 ಕೋಟಿ ಹಣದ ಮೂಲವನ್ನು ಬಾಯ್ಬಿಟ್ಟ ಅಂಬಿಕಾಪತಿ ಪುತ್ರ ಪ್ರದೀಪ್: 15 ವರ್ಷದ ಹಣವಂತೆ ಇದು!
ಅಂಬಿಕಾಪತಿ ಪುತ್ರ ಪ್ರದೀಪ್ ಹಿನ್ನೆಲೆಯೇನು ಗೊತ್ತಾ? ಅಂಬಿಕಪತಿ ಮನೆ ಮೇಲೆ ಐಟಿ ಮೆಗಾ ರೇಡ್ ಪ್ರಕರಣದಲ್ಲಿ ಕೋಟಿ ಕೋಟಿ ರೂಪಾಯಿ ಹಣ ಸಿಕ್ಕ ಫ್ಲಾಟ್‌ನ ಮಾಲೀಕ ಪ್ರದೀಪ್ ಕೂಡ ತಮ್ಮ ತಂದೆ ಅಂಬಿಕಾಪತಿಯಂತೆ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದನು. ಅಂಬಿಕಪತಿ 20 ವರ್ಷದ ಹಿಂದೆಯೇ ಕಂಟ್ರಾಕ್ಟ್ ಕೆಲಸ ಬಿಟ್ಟಿದ್ದರು. ಅವರ ಮಕ್ಕಳಾದ ಪ್ರಮೋದ್ ಮತ್ತು ಪ್ರದೀಪ್ ಇಬ್ಬರು ಒಟ್ಟಿಗೆ ಸೇರಿ ಕಂಟ್ರಾಕ್ಟ್ ಮಾಡುತ್ತಿದ್ದರು. ಕಳೆದೊಂದು ವಾರದಿಂದ ಪ್ರದೀಪ್ ಮನೆಗೆ ಹಣ ಸಂಗ್ರಹ ಆಗುತ್ತಿದ್ದ ಬಗ್ಗೆ ವಾಚ್ ಮಾಡಿದ್ದ ಐಟಿ ಹಣ ಸಂಗ್ರಹಣದ ನಂತರ ದಾಳಿ ಮಾಡಿದ್ದರು. ಈಗ ಪ್ರದೀಪ್ ವಿಚಾರಣೆ ಎದುರಿಸಿದ್ದು, ಎರಡು ದಿನಗಳ ನಂತರ ಅವರ ಸಹೋದರ ಕೂಡ ವಿಚಾರಣೆ ಎದುರಿಸಲಿದ್ದಾರೆ.