42 ಕೋಟಿ ಹಣದ ಮೂಲವನ್ನು ಬಾಯ್ಬಿಟ್ಟ ಅಂಬಿಕಾಪತಿ ಪುತ್ರ ಪ್ರದೀಪ್: 15 ವರ್ಷದ ಹಣವಂತೆ ಇದು!
ಐಟಿ ದಾಳಿ ವೇಳೆ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಸಿಕ್ಕ 42 ಕೋಟಿ ರೂ. ಹದಿನೈದು ವರ್ಷದ ದುಡಿಮೆಯ ಆದಾಯವಾಗಿದೆ ಪ್ರದೀಪ್ ಹಣದ ಮೂಲವನ್ನು ತಿಳಿಸಿದ್ದಾರೆ.
ಬೆಂಗಳೂರು (ಅ.14): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 42 ಗಂಟೆಗಳ ಕಾಲ ಆದಾಯ ತೆರಿಗೆ ಇಲಾಖೆಯು (ಐಟಿ) ಗುತ್ತಿಗೆದಾರ ಅಂಬಿಕಾಪತಿ ಮನೆಯ ಮೇಲೆ ದಾಳಿ ಮಾಡಲಾಗಿದ್ದು, 42 ಕೋಟಿ ರೂ. ಲಭ್ಯವಾಗಿದೆ. ಈ 42 ಕೋಟಿ ರೂ. ಕಪ್ಪು ಹಣವನ್ನು 15 ವರ್ಷದ ವ್ಯವಹಾರದಿಂದ ಬಂದ ಆದಾಯವಾಗಿದೆ ಎಂದು ಅಂಬಿಕಾಪತಿ ಪುತ್ರ ಪ್ರದೀಪ್ ಹಣದ ಮೂಲವನ್ನು ತಿಳಿಸಿದ್ದಾರೆ.
ಕಳೆದ ಗುರುವಾರದಿಂದ ಗುತ್ತಿಗೆದಾರ ಅಂಬಿಕಾಪತಿ ಮನೆಯ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಸತತ 42 ಗಂಟೆಗಳ ನಂತರ ಶನಿವಾರ ಮಧ್ಯಾಹ್ನ ಪೂರ್ಣಗೊಳಿಸಿದ್ದಾರೆ. ಪಂಚನಾಮೆ ಕಾರ್ಯ ಪೂರ್ಣಗೊಳಿಸಿ ಐಟಿ ಅಧಿಕಾರಿಗಳು ಮನೆಯಿಂದ ಹೊರಟಿದ್ದಾರೆ. ಮಹತ್ವದ ದಾಖಲೆಗಳನ್ನು ಎರಡು ವಾಹನಗಳಲ್ಲಿ ತುಂಬಿಕೊಂಡು ಐಟಿ ಅಧಿಕಾರಿಗಳು ಕಚೇರಿಯತ್ತ ಮರಳಿದ್ದಾರೆ. ಇನೋವಾ ಹಾಗು ಮತ್ತೊಂದು ಕಾರಿನಲ್ಲಿ ತೆರಳುವ ಮುನ್ನ, ಮನೆಯ ಸದಸ್ಯರಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
IT Raid: ಅಂಬಿಕಾಪತಿ ಮನೆಯಲ್ಲಿ ಸಿಕ್ಕ 42 ಕೋಟಿ ರೂ. ಮೂಲವನ್ನು ಬಹಿರಂಗಡಿಸಿದ ಶಾಸಕ ಯತ್ನಾಳ್!
ಐಟಿ ದಾಳಿಯಿಂದ ಸಿಕ್ಕ 42 ಕೋಟಿ ಹಣದ ಮೂಲದ ಬಗ್ಗೆ ಮಾತನಾಡಿದ ಅಂಬಿಕಾಪತಿ ಪುತ್ರ ಪ್ರದೀಪ್ ಅವರು, ಮನೆಯಲ್ಲಿ ಸಿಕ್ಕಿರುವ ಹಣಕ್ಕೂ ನಮ್ಮ ತಂದೆಯವರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ತಂದೆಯವರನ್ನ ಎಳೆದು ತರಬೇಡಿ. ಕಳೆದ 15 ವರ್ಷಗಳಿಂದ ಬಿಸಿನೆಸ್ ಮಾಡ್ತಿದ್ದೀವಿ. ಐಟಿ ಇಲಾಖೆಯಲ್ಲಿ ಉತ್ತರ ಕೊಡ್ತೀವಿ. ಮಂಗಳವಾರ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹೋಗುತ್ತೇನೆ. ಕಳೆದ ಹದಿನೈಸು ವರ್ಷಗಳಿಂದ ಬಿಸಿನೆಸ್, ರಿಯಲ್ ಎಸ್ಟೇಟ್ ವ್ಯವಹಾರದ ಜೊತೆಗೆ ನಮ್ಮ ಕೆಲವು ಆಸ್ತಿಯನ್ನು ಮಾರಾಟ ಮಾಡಿದ ಹಣವನ್ನು ಮನೆಯಲ್ಲಿ ಇಡಲಾಗಿತ್ತು. ಈ ಬಗ್ಗೆ ಮಂಗಳವಾರ ಐಟಿ ಇಲಾಖೆಗೆ ಹೋಗಿ ಉತ್ತರ ನೀಡ್ತೀನಿ ಎಂದು ಪ್ರದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಅಂಬಿಕಾಪತಿ ಪುತ್ರರಾದ ಪ್ರದೀಪ್ ಹಾಗೂ ಆತನ ಸ್ನೇಹಿತ ಪ್ರಮೋದ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ನೋಟೀಸ್ ನೀಡಿದೆ. ಇವರು ಮೆಟ್ರೋ ಕಾರ್ಪ್ ಕಂಪನಿಯ ಮಾಲೀಕರಾಗಿದ್ದಾರೆ. ಮಂಗಳವಾರ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದ್ದು, ಈ ಪೈಕಿ ಪ್ರದೀಪ್ ಅವರನ್ನು ಐಟಿ ಅಧಿಕಾರಿಗಳು ಬ್ಯಾಂಕ್‌ಗೆ ಕರೆದೊಯ್ಯುತ್ತಿದ್ದಾರೆ. ಬ್ಯಾಂಕ್ ಲಾಕರ್ ಓಪನ್ ಮಾಡಲು ಹಾಗೂ ಕೆಲ ಮಾಹಿತಿಗಾಗಿ ಕರೆದೊಯ್ಯುತ್ತಿದ್ದಾರೆ. ಇನ್ನು ಪ್ರದೀಪ್ ಮಾನ್ಯತಾ ಟಿಕ್ ಪಾರ್ಕ್ ಮನೆಯಿಂದ ಸುಲ್ತಾನ್ ಪಾಳ್ಯಕ್ಕೆ ಬಂದಿದ್ದಾರೆ. ಸುಲ್ತಾನ್ ಪಾಳ್ಯದಲ್ಲಿರುವ ಸನ್ನಿದಿ ಅಪಾರ್ಟ್ ಮೆಂಟ್ ಗೆ ಬಂದಿದ್ದಾರೆ.
ಬಿಜೆಪಿಯವರ ಮನೆ ಮೇಲೆ ಯಾಕೆ ದಾಳಿ ಆಗೋದಿಲ್ಲ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ
ಅಂಬಿಕಾಪತಿ ಪುತ್ರ ಪ್ರದೀಪ್ ಹಿನ್ನೆಲೆಯೇನು ಗೊತ್ತಾ? ಅಂಬಿಕಪತಿ ಮನೆ ಮೇಲೆ ಐಟಿ ಮೆಗಾ ರೇಡ್ ಪ್ರಕರಣದಲ್ಲಿ ಕೋಟಿ ಕೋಟಿ ರೂಪಾಯಿ ಹಣ ಸಿಕ್ಕ ಫ್ಲಾಟ್‌ನ ಮಾಲೀಕ ಪ್ರದೀಪ್ ಯಾರು ಗೊತ್ತಾ.? ಈತ ತಮ್ಮ ತಂದೆ ಅಂಬಿಕಾಪತಿಯಂತೆ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದನು. ಪ್ರಮೋದ್ ಹಾಗೂ ಪ್ರದೀಪ್ ಇಬ್ಬರು ಕೂಡ ಮೊದಲಿಂದಲೂ ಸ್ನೇಹಿತರು. ಪ್ರದೀಪ್ ಮೊದಲಿಂದಲೂ ಕೂಡ ಕಂಟ್ರಾಕ್ಟ್ ಮಾಡ್ತಿದ್ದರು. ಅಂಬಿಕಪತಿ 20 ವರ್ಷದ ಹಿಂದೆಯೇ ಕಂಟ್ರಾಕ್ಟ್ ಕೆಲಸ ಬಿಟ್ಟಿದ್ದರು. ಪ್ರಮೋದ್ ಮತ್ತು ಪ್ರದೀಪ್ ಇಬ್ಬರು ಒಟ್ಟಿಗೆ ಸೇರಿ ಕಂಟ್ರಾಕ್ಟ್ ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ಪ್ರದೀಪ್ ಮನೆಗೆ ಹಣ ಸಂಗ್ರಹ ಆಗುತ್ತಿದ್ದ ಬಗ್ಗೆ ಸಂಪೂರ್ಣವಾಗಿ ವಾಚ್ ಮಾಡಿದ್ದ ಅಧಿಕಾರಿಗಳು, ಎಲ್ಲಾ ಕಡೆಯಿಂದ ಒಂದು ಕಡೆ ಬಂದು ಹಣ ಸೇರಲಿ ಎಂದು ಕಾಯುತ್ತಿದ್ದರು. ಹಣ ಬಂದು ಸೇರಿದ ನಂತರ ಅಲ್ಲಿಂದ ಹಣವನ್ನು ಸಾಗಿಸುವ ಮುನ್ನವೇ ದಾಳಿ ಮಾಡಿದ್ದರು.