ಅಂಬಿಕಾಪತಿ 45 ವರ್ಷದ ಸ್ನೇಹಿತ, ಆರೋಪ ಸಾಬೀತಾದ್ರೆ ಕಾಲ್ಕೆಳಗೆ ನುಗ್ಗುತ್ತೇನೆ: ಡಿ. ಕೆಂಪಣ್ಣ ಆಕ್ರೋಶ
ಐಟಿ ದಾಳಿಯಲ್ಲಿ 45 ಕೋಟಿ ರೂ. ಸಿಕ್ಕಿದ ಅಂಬಿಕಾಪತಿ ತಪ್ಪು ಮಾಡಿಲ್ಲ, ಈಗಲೂ ಅವರ ಪರವಾಗಿದ್ದೇನೆ. ಆರೋಪ ಸಾಬೀತಾದರೆ ನಿಮ್ಮ ಕಾಲಿನ ಕೆಳಗೆ ನುಗ್ಗುತ್ತೇನೆ ಎಂದು ಡಿ. ಕೆಂಪಣ್ಣ ಸವಾಲು ಹಾಕಿದರು.

ಬೆಂಗಳೂರು (ಅ.17): ಐಟಿ ದಾಳಿ ನಡೆದು 45 ಕೋಟಿ ರೂ. ಲಭ್ಯವಾಗಿರುವ ಗುತ್ತಿಗೆದಾರ ಅಂಬಿಕಾಪತಿ ಗೊತ್ತಿಲ್ಲಾ ಅಂತ ನಾನು ಹೇಳಿಲ್ಲ. ಅಂಬಿಕಾಪತಿ ಮತ್ತು ನಾನು 45 ವರ್ಷದ ಸ್ನೇಹಿತರು. ಅವರಿಗೆ ಕಿಡ್ನಿ ಸಮಸ್ಯೆಯಿದ್ದು, ಆರೋಗ್ಯ ವಿಚಾರಿಸಿದ್ದೇನೆ. ಅಂಬಿಕಾಪತಿ ಏನು ತಪ್ಪು ಮಾಡಿಲ್ಲ, ಅವರ ಪರವಾಗಿ ನಾನು ಈಗಲೂ ಇದ್ದೇನೆ. ಆರೋಪ ಸಾಬೀತಾದರೆ ನಿಮ್ಮ ಕಾಲಿನ ಕೆಳಗೆ ನುಗ್ಗುತ್ತೇನೆ ಎಂದು ಸಂಸದ ಸದಾನಂದಗೌಡರಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆಂಪಣ್ಣ ಅವರು, ಪೆಮೇಂಟ್ ವಿಚಾರವಾಗಿ ಡಿಸಿಎಂ ಜೊತೆಗೆ ಚರ್ಚೆ ಮಾಡಲಿಲ್ಲ. ಬಿಬಿಎಂಪಿ ವಿಚಾರವಾಗಿ ಮಾತ್ರ ಮಾತನಾಡಿದ್ದೇವೆ. ಜಲಸಂಪನ್ಮೂಲ ವಿಚಾರವಾಗಿ ಇನ್ನೊಂದು ಮೀಟಿಂಗ್ ಮಾಡ್ತೇವೆ ಅಂದಿದ್ದಾರೆ. ಆದಷ್ಟು ಬೇಗ ಹಣ ಬಿಡುಗಡೆ ಬಗ್ಗೆ ಹೇಳಿದ್ದಾರೆ. ಈ ತಿಂಗಳಲ್ಲಿ ಬಿಲ್ ಕೊಡಿಸುತ್ತೇನೆ ಎಂದು ಹೇಳುದ್ದಾರೆ. ನಮ್ಮ ಕಾಮಗಾರಿಗಳ ಬಗ್ಗೆ ಎಸ್ ಐಟಿ ತನಿಖೆಗೆ ಬೇಡವೆಂದಿಲ್ಲ. ಸಮಸ್ಯೆ ಇರುವ ಬಿಲ್ ಇಟ್ಟುಕೊಳ್ಳಿ, ಬೇರೆ ಬಿಲ್ ಬಿಡುಗಡೆ ಮಾಡಿ. ಶೇ.75 ಪರ್ಸೆಂಟ್ ಹಣ ಸಾಕಲ್ಲ ಅಂದಿದ್ದೇವೆ, ಕಮಿಷನರ್ ಕರೆದು ಮಾತನಾಡುತ್ತೇವೆ ಅಂದಿದ್ದಾರೆ. ಸಿನಿಯಾರಿಟಿ ಆಧಾರ ಮೇಲೆ ಬಿಲ್ ಆಗುತ್ತವೆ. ಕೆಲವೊಂದು ಕಾರಣಗಳಿಂದ ಕೆಲವರ ಬಿಲ್ ಆಗಿದೆ. ಡಿ.ಕೆ. ಶಿವಕುಮಾರ್ ಭೇಟಿ ನಮಗೆ ಸಮಾಧಾನ ತಂದಿದೆ. ಇನ್ನು ಪೇಮೆಂಟ್ ಆದ ಮೇಲೆ ಪೂರ್ತಿ ಸಮಾಧಾನ ಆಗಲಿದೆ ಎಂದು ಹೇಳಿದರು.
ಬಿಜೆಪಿಯ ಅಸಮಾಧಾನಿತರು ಬರ್ತಾರೆ, ಅವರನ್ನು ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಭೇಟಿ ಮಾಡಿಸ್ತೀನಿ: ಜಗದೀಶ್ ಶೆಟ್ಟರ್
ಸಂಸದ ಸದಾನಂದಗೌಡ ಅವರು, ಗುತ್ತಿಗೆದಾರ ಅಂಬಿಕಾಪತಿ ಯಾರು ಅಂತ ಗೊತ್ತಿಲ್ಲ ಅಂತ ಕೆಂಪಣ್ಣ ಹೇಳಿದ್ದರು. ಆದ್ರೆ ಸಿಎಂ ಭೇಟಿ ಬಳಿಕ ಕೆಂಪಣ್ಣ ನೇರವಾಗಿ ಅಂಬಿಕಾಪತಿ ಮನೆಗೆ ಹೋಗಿದ್ರಲ್ಲಾ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಕೆಂಪಣ್ಣ, ಅಂಬಿಕಾಪತಿ ಗೊತ್ತಿಲ್ಲಾ ಅಂತ ನಾನು ಹೇಳಿಲ್ಲ. ಅಂಬಿಕಾಪತಿ ನಾನು 45 ವರ್ಷದ ಸ್ನೇಹಿತರು. ನಾನು ಸಿಎಂ ಭೇಟಿಯಾಗಿ ನೇರವಾಗಿ ನನ್ನ ತೋಟಕ್ಕೆ ಹೋಗಿದ್ದೇನೆ. ನಾನು ಸಿಎಂ ಭೇಟಿಯಾಗಿ ನೇರವಾಗಿ ನನ್ನ ತೋಟಕ್ಕೆ ಹೋಗಿದ್ದೇನೆ. ಅಂಬಿಕಾಪತಿಗೆ ಕಿಡ್ನಿ ಸಮಸ್ಯೆ ಇದೆ. ನಾನು ಅವರ ಆರೋಗ್ಯ ವಿಚಾರಿಸಿದ್ದೇನೆ.
ಅಂಬಿಕಾಪತಿ ಏನು ತಪ್ಪು ಮಾಡಿಲ್ಲ, ಅವರ ಪರವಾಗಿ ನಾನು ಈಗಲೂ ಇದ್ದೇನೆ. ಅವರು ತಪ್ಪು ಮಾಡಿದ್ರೆ ಅವರನ್ನ ಜೈಲಿಗೆ ಹಾಕಲಿ. ಯಾವ ಗುತ್ತಿಗೆದಾರರು ಕಮಿಷನ್ ಕೊಟ್ಟಿಲ್ಲ. ಹಾಗೇನಾದ್ರೂ ಕೊಟ್ಟಿರೋದು ನನ್ನ ಗಮನಕ್ಕೆ ಬಂದ್ರೆ ನಾನೇ ನಿಮ್ಮ ಮುಂದೆ ತರುತ್ತೇನೆ. ಮುಂದುವರೆದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರಗೆ ಹೋಗಿದ್ದೆ ಅಂತ ಸದಾನಂದ ಗೌಡ ಹೇಳಿದ್ದಾರೆ. ಆದರೆ, ಅದನ್ನು ಸದಾನಂದಗೌಡರು ಪ್ರೂವ್ ಮಾಡಿದ್ರೆ, ಕಾಲ್ ಕೆಳಗೆ ನುಗ್ಗುತ್ತೇನೆ ಎಂದು ಹೇಳಿದರು.
ಹಳಿ ತಪ್ಪಿದ ಯಶವಂತಪುರ- ಕಾರಟಗಿ ಎಕ್ಸ್‌ಪ್ರೆಸ್ ರೈಲು: ತಪ್ಪಿದ ಭಾರಿ ಅನಾಹುತ
ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರಲ್ಲಿದೆ. ನಮ್ಮ ಮೇಲೆ ಕೇಸ್ ಹಾಕಲಿ. ಕಮಿಷನ್ ದುಡ್ಡು ಅಂತ ಆದ್ರೆ ಕೇಸ್ ಹಾಕಲಿ. ತಪ್ಪಿದ್ರೆ ನಾನು ಒಪ್ಪಿಕೊಳ್ಳುತ್ತೇನೆ, ನಮ್ಮ ಗುತ್ತಿಗೆದಾರರು ತಪ್ಪು ಮಾಡಿದ್ರೆ ಅವರ ವಿರುದ್ಧ ಕ್ರಮ ಆಗಲಿ. ಇದಕ್ಕಾಗಿ 40% ಬಗ್ಗೆ ತನಿಖೆ ಮಾಡಲು ನಾಗಮೋಹನ್ ದಾಸ್ ಆಯೋಗ ರಚನೆ ಆಗಿದೆ. ತನಿಖೆಗೆ ನಾವು ಸಹಕಾರ ಕೊಡುತ್ತೇವೆ, ದಾಖಲೆ ಕೂಡ ಅವರಿಗೆ ಕೊಡುತ್ತೇವೆ. ನಮ್ಮ ಹತ್ತಿರ ಬಿಲ್ ಹಣ ಬಿಡುಗಡೆಗೆ ಪೀಡಿಸಿಲ್ಲ. ಯಾರಾದರೂ ಕಮಿಷನ್ ಕೇಳಿದ್ರೆ ಖಂಡಿತ ವಿರೋಧ ಮಾಡುತ್ತೇನೆ ಎಂದು ಕೆಂಪಣ್ಣ ಹೇಳಿದರು.