ಬೆಳ್ತಂಗಡಿಯ ಮನೆಯೊಂದರ ಗೋಡೆಯಲ್ಲಿ ಸಿಕ್ಕ 16 ನಾಗರ ಹಾವಿನ ಮೊಟ್ಟೆಗಳನ್ನು ಉರಗ ಮಿತ್ರ ಸ್ನೇಕ್ ಅನಿಲ್ ರಕ್ಷಿಸಿದ್ದಾರೆ. ಇರುವೆಗಳಿಂದ ಅಪಾಯದಲ್ಲಿದ್ದ ಮೊಟ್ಟೆಗಳಿಗೆ ಕೃತಕ ಕಾವು ನೀಡಿ, ಯಶಸ್ವಿಯಾಗಿ 16 ಮರಿಗಳನ್ನು ಹೊರತಂದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.

ಮಂಗಳೂರು: ಬೆಳ್ತಂಗಡಿಯ ಮನೆಯ ಗೋಡೆಯೊಂದರಲ್ಲಿ ಸಿಕ್ಕಿದ ನಾಗರ ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ರಕ್ಷಿಸಿ 16 ಮರಿಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.

Add Asianetnews Kannada as a Preferred SourcegooglePreferred

ನೆರಿಯ ಗ್ರಾಮದ ಗುಂಡಿಕಂಡ ಬೊಮ್ಮಣ್ಣ ಗೌಡ ಎಂಬವರ ಮನೆಯ ಗೋಡೆಯ ಒಳಗಡೆ ಕಳೆದ ಕೆಲವು ದಿನಗಳ ಹಿಂದೆ ನಾಗರಹಾವು ಕಂಡುಬಂದಿತ್ತು. ಇದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲು ಸಮಾಜ ಸೇವಕ, ಉರಗ ಮಿತ್ರ ಕಕ್ಕಿಂಜೆಯ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಲಾಗಿತ್ತು.

16 ಮೊಟ್ಟೆಗಳ ರಕ್ಷಣೆ

ಗೋಡೆಯ ಒಳಗಡೆ ಇದ್ದ ನಾಗರಹಾವನ್ನು ಹಿಡಿದಾಗ ಸುಮಾರು 16 ಮೊಟ್ಟೆಗಳು ಪತ್ತೆಯಾಗಿದ್ದವು. ಈ ಮೊಟ್ಟೆಗಳಿಗೆ ಇರುವೆಗಳು ಮುತ್ತಿಕೊಂಡಿದ್ದು ಅವುಗಳ ಸ್ಥಿತಿ ಅಪಾಯಕಾರಿಯಾಗಿತ್ತು‌. ಇದನ್ನು ಗಮನಿಸಿ ಅವುಗಳನ್ನು ಗೋಡೆಯಿಂದ ಹೊರ ತೆಗೆದು ಅಗತ್ಯ ಇರೈಕೆ ನೀಡಿ ಕೃತಕ ಕಾವು ನೀಡುವ ಕೆಲಸವನ್ನು ಮಾಡಿದರು. ಇದೀಗ 16 ಮರಿಗಳು ಮೊಟ್ಟೆಯಿಂದ ಹೊರಬಂದಿವೆ. ಆರೋಗ್ಯವಾಗಿದ್ದ ಈ ನಾಗರಹಾವಿನ ಮರಿಗಳನ್ನು ಅರಣ್ಯ ಇಲಾಖೆಯ ಸಹಕಾರದಲ್ಲಿ ಚಾರ್ಮಾಡಿ ಘಾಟಿ ವಿಭಾಗದ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಉರಗ ಮಿತ್ರ ಕಕ್ಕಿಂಜೆ ಸ್ನೇಕ್ ಅನಿಲ್

ಕಳೆದ ತಿಂಗಳು ತೋಟತ್ತಾಡಿ ಗ್ರಾಮದಲ್ಲಿ ಪತ್ತೆಯಾಗಿದ್ದ 28 ನೀರು ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮರಿಗಳಿಗೆ ಜೀವದಾನ ನೀಡಲಾಗಿತ್ತು. ಇದೀಗ ನೆರಿಯದಲ್ಲಿ ಇರುವೆಗಳ ಗಾಳಿ ಒಳಗಾಗಿದ್ದ ನಾಗರಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಕೃತಕ ಕಾವು ನೀಡಿ ಮರಿಗಳನ್ನು ಅರಣ್ಯಕ್ಕೆ ಬಿಡಲಾಗಿದೆ ಎಂದು ಉರಗ ಮಿತ್ರ ಕಕ್ಕಿಂಜೆ ಸ್ನೇಕ್ ಅನಿಲ್ ಹೇಳಿದ್ದಾರೆ.