ಶ್ರೀರಾಮುಲು ಗೆಲ್ಲಿಸುವುದೇ ಬಳ್ಳಾರಿ ಲೋಕಸಭೆ: ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾದ್ರೆ, ಕಾಂಗ್ರೆಸ್‌ಗೆ ಪ್ರತಿಷ್ಠೆ ಕಣ
ಬಳ್ಳಾರಿ ಲೋಸಕಭಾ ಕ್ಷೇತ್ರದ ಚುನಾವಣೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾದರೆ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಳ್ಳಾರಿ (ನ.14): ಬಳ್ಳಾರಿ ಲೋಕಸಭೆ ಚುನಾವಣೆ ಕ್ಷೇತ್ರಕ್ಕೊಂದು ಇತಿಹಾಸವಿತ್ತು. ಇಲ್ಲಿ ಕಾಂಗ್ರೆಸ್ ನಿಂದ ಯಾರೇ ಸ್ಪರ್ಧೆ ಮಾಡಿದ್ರು. ಗೆಲ್ಲುತ್ತಾರೆನ್ನುವ ಪ್ರತೀತಿ ಇತ್ತು. ಇದೇ ಉದ್ದೇಶದಿಂದಲೇ 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಗೆದ್ದಿದ್ರು. ಆದ್ರೇ, ಅದೇ ಕೊನೆ ಅಲ್ಲಿಂದ ಒಂದು ಉಪಚುನಾವಣೆ ಬಿಟ್ರೇ ಈವರೆಗೂ ಕಾಂಗ್ರೆಸ್ ಬಳ್ಳಾರಿಯಲ್ಲಿ ಗೆಲ್ಲಲೇ ಇಲ್ಲ. ಹೀಗಾಗಿ ಈ ಬಾರಿ ಮತ್ತೊಮ್ಮೆ ಕಾಂಗ್ರೆಸ್ ಬಳ್ಳಾರಿಯನ್ನು ಪ್ರತಿಷ್ಟೇಯನ್ನಾಗಿಸಿ ಕೊಂಡಿದ್ದು, ಗೆಲ್ಲುವ ಹಠದಲ್ಲಿದೆ. ಆದ್ರೇ, ಬಿಜೆಪಿ ಮಾತ್ರ ಶ್ರೀರಾಮುಲು ಅವರನ್ನು ಕಣಕ್ಕಿಳಿಸೋ ಬಗ್ಗೆ ಚರ್ಚೆ ನಡೆಸಿದೆ.
ಒಂದು ಕಾಲದಲ್ಲಿ ಬಳ್ಳಾರಿಯಂದ್ರೇ, ಕಾಂಗ್ರೆಸ್, ಕಾಂಗ್ರೆಸ್ ಅಂದ್ರೇ ಬಳ್ಳಾರಿ ಅನ್ನೋ ಸ್ಥಿತಿ ಇತ್ತು… 2004ರ ಬಳಿಕ ನಿಧಾನನವಾಗಿ ಚಿಗುರಿದ ಬಿಜೆಪಿ ಲೋಕಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲದಂತೆ ಮಾಡಿತ್ತು.. ಹೌದು, ಈ ಬಾರಿ ರಾಜ್ಯ ಸರ್ಕಾರವಷ್ಟೇ ಅಲ್ಲದೇ ಸ್ಥಳೀಯ ನಾಯಕರಿಗೂ ಈ ಬಾರಿ ಬಳ್ಳಾರಿ ಲೋಕಸಭೆ ಪ್ರತಿಷ್ಟೆ ಯಾಗಿದೆ. ಯಾಕಂದ್ರೇ, 2018ರ ಒಂದು ಉಪಚುನಾವಣೆ ಬಿಟ್ಟರೇ, 1999 ಸೋನಿಯಾ ಗಾಂಧಿ ಅವರ ಚುನಾವಣೆ ಬಳಿಕ ಕಾಂಗ್ರೆಸ್ ಬಳ್ಳಾರಿಯಲ್ಲಿ ಗೆದ್ದಿಲ್ಲ.
ಈ ಬಾರಿ ಕಾಂಗ್ರೆಸ್ ಸರ್ಕಾರವಿದೆ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಬಳ್ಳಾರಿ ಕಾಂಗ್ರೆಸ್ ತವರೂರು ಎನ್ನುವದನ್ನು ಸಾಭಿತು ಮಾಡಬೇಕಿದೆ.
ಉಡುಪಿಯ ಒಂದೇ ಕುಟುಂಬದ ನಾಲ್ವರ ಹತ್ಯೆಗೈದ ಆರೋಪಿ ಬೆಳಗಾವಿಯಲ್ಲಿ ಅರೆಸ್ಟ್!
ಅಲ್ಲದೇ ಭಾರತ್ ಜೋಡೋ ಯಾತ್ರೆ ಮತ್ತು ವಿಧಾನ ಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಾಗ ರಾಹುಲ್ ಗಾಂಧಿ ಕೂಡ ಬಳ್ಳಾರಿ ಮತ್ತು ತಮ್ಮ ತಾಯಿಗೆ ಇರೋ ನಂಟಿನ ಬಗ್ಗೆ ಮಾತನಾಡಿದ್ರು. ಹೀಗಾಗಿ ಸ್ಥಳೀಯ ನಾಯಕರೆಲ್ಲರೂ ಸೇರಿಕೊಂಡು ಈ ಬಾರಿ ಯಾವುದೇ ಕಾರಣಕ್ಕೂ ಬಳ್ಳಾರಿ ಲೋಕಸಭೆ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಅಲ್ಲದೇ ಸಚಿವ ನಾಗೇಂದ್ರ ಈ ಬಾರಿ ಬಳ್ಳಾರಿ ಲೋಕಸಭೆ ಗೆಲ್ಲವು ಮೂಲಕ ಸೋನಿಯಾ ಗಾಂಧಿ ಅವರಿಗೆ ಉಡುಗೊರೆ ನೀಡೋದಾಗಿ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಮಾಜಿ ಸಂಸದ ಉಗ್ರಪ್ಪ, ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಮತ್ತು ನಾಗೇಂದ್ರ ಅವರ ಸೋದರಳಿಯ ಮುರಳಿ ಕೃಷ್ಠ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರಿಗೆ ಇದೀಗ ಸಮರ್ಥವಾಗಿ ಪೈಪೋಟಿ ನೀಡಲಿರೋದು ಅಂದ್ರೇ, ಅದು ಮಾಜಿ ಸಚಿವ ಶ್ರೀರಾಮುಲು ಎನ್ನುವುದು ಬಿಜೆಪಿಯ ಲೆಕ್ಕಾಚಾರ ವಾಗಿದೆ. ಈಗಾಗಲೇ ವಿಧಾನಸಭೆಯಲ್ಲಿ ಸೋತಿರೋ ಶ್ರೀರಾಮುಲು ಸದ್ಯ ಲೋಕಸಭೆ ಸ್ಪರ್ಧೆ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ. ಆದ್ರೇ, ಬಳ್ಳಾರಿ ಜೊತೆ ರಾಯಚೂರಿನಲ್ಲಿ ಸ್ಪರ್ಧೆ ಮಾಡೋ ಬಗ್ಗೆ ಚಿಂತನೆ ನಡೆಸಿದ್ದಾರೆ. ಇನ್ನೂ ಬಳ್ಳಾರಿಯಿಂದ ಸ್ಪರ್ಧೆ ಮಾಡಿದ್ರೇ ಮಾತ್ರ ಶ್ರೀರಾಮುಲು ಗೆಲ್ತಾರೆ ಅವರನ್ನು ಹೈಕಮೆಂಡ್ ಮನವೊಲಿಸುತ್ತದೆ ಎನ್ನುತ್ತಿದ್ದಾರೆ ಮಾಜಿ ಶಾಸಕ ಸೋಮಶೇಖರ ರೆಡ್ಡಿ.
ಜಿ.ಟಿ. ದೇವೇಗೌಡ ಪ್ರಾಭಲ್ಯ ಕುಗ್ಗಿಸಲು ಚಕ್ರವ್ಯೂಹ ಹೆಣೆದ ಸಿದ್ದರಾಮಯ್ಯ: ಮೊದಲ ಬಾಣಕ್ಕೇ ಜಿಟಿಡಿ ಕಕ್ಕಾಬಿಕ್ಕಿ!
ಆದರೆ ಶ್ರೀರಾಮುಲು ಪಾಳ್ಯಯ ಮಾತ್ರ ಬಳ್ಳಾರಿ ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರದಲ್ಲಿ ಆರರಲ್ಲಿ ಕಾಂಗ್ರೆಸ್ ಶಾಸಕರಿದ್ರೇ, ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಗೆದ್ದಿದೆ. ಹೀಗಾಗಿ ಬಳ್ಳಾರಿಗಿಂತ ರಾಯಚೂರು ಉತ್ತಮ ಎನ್ನುತ್ತಿದ್ಧಾರೆ. ಬಳ್ಳಾರಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಗೆ ಪ್ರತಿಷ್ಠೆಯಾದ್ರೇ, ಬಿಜೆಪಿಗೆ ಮತ್ತು ಶ್ರೀರಾಮುಲು ( ಸ್ಪರ್ಧೆ ಮಾಡಿದ್ರೇ,) ಅವರ ಅಸ್ಥಿತ್ವದ ಪ್ರಶ್ನೆಯಾಗಲಿದೆ.. ಹೀಗಾಗಿ ಈ ಬಾರಿ ಬಳ್ಳಾರಿ ಲೋಕಸಭೆ ಚುನಾವಣೆ ಹೈವೋಲ್ಟೆಜ್ ಕಣವಾಗೋದ್ರಲ್ಲಿ ಎರಡು ಮಾತಿಲ್ಲ ಎನ್ನಲಾಗುತ್ತಿದೆ.