Asianet Suvarna News Asianet Suvarna News

ಜಿ.ಟಿ. ದೇವೇಗೌಡ ಪ್ರಾಭಲ್ಯ ಕುಗ್ಗಿಸಲು ಚಕ್ರವ್ಯೂಹ ಹೆಣೆದ ಸಿದ್ದರಾಮಯ್ಯ: ಮೊದಲ ಬಾಣಕ್ಕೇ ಜಿಟಿಡಿ ಕಕ್ಕಾಬಿಕ್ಕಿ!

ಮೈಸೂರು ನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರ ರಾಜಕೀಯ ಪ್ರಾಭಲ್ಯ ಕುಗ್ಗಿಸಲು ಸಿಎಂ ಸಿದ್ದರಾಮಯ್ಯ  ಚಕ್ರವ್ಯೂಹವನ್ನು ಹೆಣೆದಿದ್ದಾರೆ.

CM Siddaramaiah created Chakravyuha about MLA GT Devegowda Political dominance decrease sat
Author
First Published Nov 14, 2023, 7:37 PM IST

ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್‌ ಸುವರ್ಣ ನ್ಯೂಸ್
ಮೈಸೂರು (ನ.14):
ಮಳೆ ನಿಂತರೂ ಮರದ ಹನಿ ನಿಲ್ತಿಲ್ಲ ಅನ್ನುವಂತಾಗಿದೆ ಸಿದ್ದರಾಮಯ್ಯ ಹಾಗೂ ಜಿಟಿ.ದೇವೇಗೌಡ ನಡುವಿನ ಮೈಸೂರಿನ ರಾಜಕಾರಣ. ಚುನಾವಣೆ ಮುಗಿದ್ರೂ, ಸಿದ್ದರಾಮಯ್ಯ ಸಿಎಂ ಆದ್ರೂ ಜಿ.ಟಿ. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ವಾರ್ ಮುಂದುವರೆದಿದೆ. ಸಹಕಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿದ್ರು ಅಂತ ಜಿ.ಟಿ.ದೇವೇಗೌಡ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದಾರೆ.

ಚಾಮುಂಡೇಶ್ವರಿ ಸೋಲಿನ ಮುಯ್ಯಿಗೆ ನಿಂತಿರುವ ಸಿದ್ದರಾಮಯ್ಯ, ಜಿಟಿಡಿ ವಿರುದ್ಧ ಸಮರ ಸಾರಿದಂತಿದೆ. ಸಹಕಾರ ಕ್ಷೇತ್ರದಲ್ಲಿನ ಜಿಟಿಡಿ ಪಾರುಪಥ್ಯ ತಡೆಯೊಕೆ ಮುಂದಾಗಿದ್ದು ಚಾಮರಾಜನಗರ ಮೈಸೂರು ಜಿಲ್ಲೆ ಸಹಕಾರ ಕ್ಷೇತ್ರದ ಚುನಟವಣೆ ಮುಂದೂಡಿದ್ದಾರೆ. ಇದರಿಂದ ಕಳೆದ ಬಾರಿಯ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ಜಿಟಿದೇವೇಗೌಡ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ್ರಾ ಸಿದ್ದರಾಮಯ್ಯ ಅನ್ನೋ ಮಾತು ಸದ್ಯಕ್ಕೆ ಮುಂಚೂಣಿಗೆ ಬಂದಿದೆ. ಸ್ವತಃ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರೇ ಈ ವಿಚಾರ ಪ್ರಸ್ತಾಪ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ್ದಾರೆ. ಸಹಕಾರ ಕ್ಷೇತ್ರದ ಚುನಾವಣೆಯನ್ನ ಬೇಕು ಬೇಕಂತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಮಡು ಮುಂದೂಡಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿದ್ರೂ ನಮ್ಮೊಟ್ಟಿಗೆ ಸಹಕಾರಿಗಳು ಇದ್ದಾರೆ ಅಂತಾ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ಉಡುಪಿಯ ಒಂದೇ ಕುಟುಂಬದ ನಾಲ್ವರ ಹತ್ಯೆಗೈದ ಆರೋಪಿ ಬೆಳಗಾವಿಯಲ್ಲಿ ಅರೆಸ್ಟ್‌!

ಸಹಕಾರಿ ಕ್ಷೇತ್ರದಲ್ಲಿ ಶಾಸಕ ಜಿ.ಟಿ. ದೇವೇಗೌಡ ಕುಟುಂಬ  ತನ್ನದೇ ಹಿಡಿದ ಹೊಂದಿದೆ. ಈ ಹಿಡಿತವನ್ನ ತಪ್ಪಿಸಲು ಸಿದ್ದರಾಮಯ್ಯ ಚುನಾವಣೆ ಮುಂದೂಡಿದ್ದಾರೆ ಅನ್ನೋದು ಜಿಡಿಟಿ ಆರೋಪ. ಇನ್ನೂ ಮೈಸೂರಿನ ಎಂಡಿಸಿಸಿ ಬ್ಯಾಂಕ್ ಚುನಾವಣೆ ಗೆ ದಿನಾಂಕ ನಿಗಧಿ ಮಾಡಲಾಗಿತ್ತು‌. ಆದ್ರೆ ಮತದಾರರ ಪಟ್ಟಿ ಪರಿಷ್ಕರಣೆಯಾಗಿಲ್ಲ. ಚುನಾವಣೆಗೆ 45 ದಿನ ಮೊದಲೇ ಮತದಾರರ ಪಟ್ಟಿಪರಿಷ್ಕರಣೆ ಮಾಡಬೇಕು. ಹೀಗಾಗಿ ಬ್ಯಾಂಕ್ ಚುನಾವಣೆ ಮಾಡುವಂತಿಲ್ಲ ಅಂತಾ ಸಹಕಾರ ಇಲಾಖೆಯ ಮುಖ್ಯ ನಿಬಂಧಕರು ಚುನಾವಣೆಯನ್ನು 6 ತಿಂಗಳ ಕಾಮ ಮುಂದೂಡಿದ್ದಾರೆ. ಆದರೆ ಇದನ್ನ ಸಿದ್ದರಾಮಯ್ಯ ಅವರೇ ಮಾಡಿಸಿದ್ದಾರೆ ಅಂತಾ ಜಿಟಿಡಿ  ಸಿದ್ದರಾಮಯ್ಯ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ಸಂತೋಷ್‌ಗೆ ಕ್ಲೋಸ್ ಆಗಿದ್ದ ತನಿಷಾ ಮೇಲೂ ಇದೀಗ FIR ದಾಖಲು!

ಒಟ್ಟಿನಲ್ಲಿ ಚುನಾವಣೆಯಲ್ಲಿ ಸೋಲು ಗೆಲುವು ಕಾಮನ್ ಆದ್ರೆ ಚುನಾವಣಾ ಮುಗಿದು ಹಲವು ವರ್ಷಗಳೇ ಉರುಳಿದ್ರೂ ಬದ್ಧವೈರಿಗಳ ಮನಸ್ಥಾಪ ಮುಂದುವರೆಯುತ್ತಲೇ ಇದೆ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಅನ್ನೋದನ್ನ ಅರಿತುಕೊಂಡ್ರೆ ಒಳಿತು ಅನ್ನೊದೆ ಸತ್ಯವಾಗಿದೆ.

Follow Us:
Download App:
  • android
  • ios