Asianet Suvarna News Asianet Suvarna News

ಬಿಬಿಎಂಪಿ ಹೊಸ ವಾರ್ಡ್‌ಗಳ ಪಟ್ಟಿ ಪ್ರಕಟ: ಆಕ್ಷೇಪ ಆಹ್ವಾನ

*    ವಾರ್ಡ್‌ ಪುನರ್‌ ವಿಂಗಡಣೆ ಕರಡು ಬಿಡುಗಡೆ
*   ಜೂ.9ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ವಾರ್ಡ್‌ ವಿಂಗಡಣಾ ಸಮಿತಿ
*   ಮುಂದಿನ 15 ದಿನದಲ್ಲಿ ಆಕ್ಷೇಪಣೆ, ಸಲಹೆ ನೀಡಲು ಅವಕಾಶ
 

BBMP Released New List of Wards grg
Author
Bengaluru, First Published Jun 24, 2022, 7:47 AM IST

ಬೆಂಗಳೂರು(ಜೂ.24):  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ವಾರ್ಡ್‌ವಾರು ಮರು ವಿಂಗಡಣೆ ಕರಡು ವರದಿಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದ್ದು, ಮುಂದಿನ 15 ದಿನದೊಳಗಾಗಿ (ಜುಲೈ 8) ಈ ಬಗ್ಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡಲು ಕಾಲಾವಕಾಶ ನೀಡಿದೆ.

ರಾಜ್ಯ ಸರ್ಕಾರವು ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಮಂಡಳಿ ಹಾಗೂ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ 2021ರ ಜನವರಿಯಲ್ಲಿ ವಾರ್ಡ್‌ಗಳ ಪುನರ್‌ ವಿಂಗಡಣಾ ಸಮಿತಿ ರಚನೆ ಮಾಡಿ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಮರು ವಿಂಗಡಿಸಿ ವರದಿ ನೀಡುವಂತೆ ಸೂಚಿಸಿತ್ತು. ಸಮಿತಿಯು ಕಳೆದ ಜೂನ್‌ 9ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕರಡು ವರದಿ ಒಪ್ಪಿರುವ ರಾಜ್ಯ ಸರ್ಕಾರವು ವಾರ್ಡ್‌ ಮರು ವಿಂಗಡಣೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿದೆ.

ಎಚ್ಚರ.. ಬೆಂಗ್ಳೂರಿನಲ್ಲಿವೆ ರೇಬಿಸ್‌ ಲಸಿಕೆ ಪಡೆಯದ 2ಲಕ್ಷ ಬೀದಿನಾಯಿಗಳು..!

2011ರ ಜನಗಣತಿಯ ಆಧಾರದ ಮೇರೆಗೆ ವಾರ್ಡ್‌ ಮರು ವಿಂಗಡಣೆ ಮಾಡಲಾಗಿದೆ. ಕರಡು ವರದಿಯಲ್ಲಿ ಈವರೆಗೆ ಇದ್ದ 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದ್ದು, ಪ್ರತಿ ವಾರ್ಡ್‌ಗಳ ಸಂಖ್ಯೆ ಮತ್ತು ವಾರ್ಡ್‌ಗಳ ಹೆಸರು ಹಾಗೂ ಪ್ರತಿ ವಾರ್ಡ್‌ಗಳ ವ್ಯಾಪ್ತಿಯ ಗಡಿಗಳ ಚಕ್ಕಬಂದಿಯ ವಿವರಗಳನ್ನು ಕರಡಿನಲ್ಲಿ ನಿಗದಿಪಡಿಸಲಾಗಿದೆ.

ವಾರ್ಡ್‌ ಮರು ವಿಂಗಡಣೆ ಕರಡು ಬಗ್ಗೆ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು, ಸಂಸ್ಥೆಗಳು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ ಮತ್ತು ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು-56001 ಇವರಿಗೆ 15 ದಿನಗಳೊಳಗಾಗಿ ಸಲ್ಲಿಸಬಹುದು. ನಿಗಧಿತ ಅವಧಿಯ ನಂತರ ಸ್ವೀಕೃತಗೊಂಡ ಆಕ್ಷೇಪಣೆ ಅಥವಾ ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹೊಸದಾಗಿ 2 ಗ್ರಾಮ ಸೇರ್ಪಡೆ

ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೇಪುರ ಗ್ರಾಮ, ಕಾಂಚಿರಾಮ್‌ ನಗರ (ಅಂಬೇಡ್ಕರ್‌ ನಗರ) ಎಂಬ ಗ್ರಾಮಗಳು ಬಿಬಿಎಂಪಿಗೆ ಸೇರ್ಪಡೆಯಾಗಲಿವೆ. ಇದರಿಂದ 6 ಸಾವಿರ ಜನಸಂಖ್ಯೆ ಹೆಚ್ಚಲಿದೆ. ಉಳಿದಂತೆ ಹಳೆಯ 198 ವಾರ್ಡ್‌ ಗಡಿಯೊಳಗೆ ಬಿಬಿಎಂಪಿ ವಾರ್ಡ್‌ ಮರುವಿಂಗಡಿಸಿ 243ಕ್ಕೆ ಹೆಚ್ಚಿಸಲಾಗಿದೆ.

ವೆಬ್‌ಸೈಟ್‌ನಲ್ಲೂ ಆಕ್ಷೇಪಣೆ ಸಲ್ಲಿಸಿ

ವಿಂಗಡಣೆಯಾದ ಎಲ್ಲ 243 ವಾರ್ಡ್‌ಗಳ ಸಮಗ್ರ ಮಾಹಿತಿಯನ್ನು http://bbmpdelimitation2022.com ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ಹಾಲಿ ಇರುವ ಮತ್ತು ಪುನರ್‌ ವಿಂಗಡಣೆಯಾಗಿರುವ ವಾರ್ಡ್‌ಗಳ ಸೀಮೆಯನ್ನು ಮತ್ತು ಅದರೊಳಗೊಂಡಂತೆ ಇರುವ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆ ಅಥವಾ ಸಲಹೆಗಳನ್ನು ಈ ಅಂತರ್ಜಾಲದ ತಾಣದ ಮೂಲಕವೂ ಸಲ್ಲಿಸಬಹುದು.

BBMP ಚುನಾವಣೆ ಗೆಲ್ಲಲು ಜೆಡಿಎಸ್‌ 'ಜನತಾ ಮಿತ್ರ' ಕಾರ್ಯಕ್ರಮ, ಎಲ್ಲಾ ವಾರ್ಡ್‌ಗಳಲ್ಲೂ ಸಭೆ

ಹೊಸ ವಾರ್ಡ್‌ಗೆ ಇತಿಹಾಸ ಪುರುಷರ ಹೆಸರು

ಹೊಸ ವಾರ್ಡ್‌ಗಳಲ್ಲಿ ಬಹುತೇಕ ವಾರ್ಡ್‌ಗಳಿಗೆ ಸ್ವಾತಂತ್ರ್ಯ ಹೊರಾಟಗಾರರು, ಅರಸರ ಹೆಸರನ್ನು ಇಡಲಾಗಿದೆ. ಪ್ರಮುಖವಾಗಿ ಛತ್ರಪತಿ ಶಿವಾಜಿ(40), ವೀರ ಮದಕರಿ(17), ಚಾಣಕ್ಯ(39), ರಣಧೀರ ಕಂಠೀರವ(43), ವೀರಸಿಂಧೂರ ಲಕ್ಷಣ(44), ವಿಜಯ ನಗರ ಕೃಷ್ಣದೇವರಾಯ(45), ಸರ್‌ ಎಂ.ವಿಶ್ವೇಶ್ವರಯ್ಯ(46), ನಾಲ್ವಡಿ ಕೃಷ್ಣರಾಜ ಒಡೆಯರ್‌(47) ಹೆಸರನ್ನು ವಾರ್ಡ್‌ಗೆ ಇಡಲಾಗಿದೆ.

ವಿಧಾನಸಭಾ ಕ್ಷೇತ್ರವಾರು ವಾರ್ಡ್‌ ವಿಂಗಡಣೆ
ವಿಧಾನಸಭಾ ಕ್ಷೇತ್ರ ಹಾಲಿ ವಾರ್ಡ್‌ಗಳು ಮರು ವಿಂಗಡಣೆ

ಯಲಹಂಕ 4 5
ಕೆ.ಆರ್‌.ಪುರ 9 13
ಬ್ಯಾಟರಾಯನಪುರ 7 10
ಯಶವಂತಪುರ 5 8
ರಾಜರಾಜೇಶ್ವರಿ ನಗರ 9 14
ದಾಸರಹಳ್ಳಿ 8 12
ಮಹಾಲಕ್ಷ್ಮಿಲೇಔಟ್‌ 7 9
ಮಲ್ಲೇಶ್ವರ 7 7
ಹೆಬ್ಬಾಳ 8 8
ಪುಲಕೇಶಿನಗರ 7 7
ಸರ್ವಜ್ಞ ನಗರ 8 10
ಸಿ.ವಿ.ರಾಮನ್‌ ನಗರ 7 9
ಶಿವಾಜಿ ನಗರ 7 6
ಶಾಂತಿ ನಗರ 7 7
ಗಾಂಧಿ ನಗರ 7 7
ರಾಜಾಜಿ ನಗರ 7 7
ಗೋವಿಂದರಾಜ ನಗರ 9 10
ವಿಜಯ ನಗರ 8 9
ಚಾಮರಾಜಪೇಟೆ 7 6
ಚಿಕ್ಕಪೇಟೆ 7 7
ಬಸವನಗುಡಿ 6 7
ಪದ್ಮನಾಭ ನಗರ 8 10
ಬಿಟಿಎಂ ಲೇಔಟ್‌ 8 9
ಜಯ ನಗರ 7 6
ಮಹದೇವಪುರ 8 13
ಬೊಮ್ಮನಹಳ್ಳಿ 8 14
ಬೆಂಗಳೂರು ದಕ್ಷಿಣ 7 12
ಆನೇಕಲ್‌ 1 1
ಒಟ್ಟು 198 243
ವಾರ್ಡ್‌ ಸಂಖ್ಯೆ ಮತ್ತು ಹೆಸರು
1.ಕೆಂಪೇಗೌಡ ವಾರ್ಡ್‌
2.ಚೌಡೇಶ್ವರಿ ವಾರ್ಡ್‌
3.ಸೋಮೇಶ್ವರ ವಾರ್ಡ್‌
4.ಅಟ್ಟೂರು ಲೇಔಟ್‌
5.ಯಲಹಂಕ ಸ್ಯಾಟಲೈಟ್‌ ಟೌನ್‌
6.ಕೋಗಿಲು
7.ಥಣಿಸಂದ್ರ
8.ಜಕ್ಕೂರು
9 ಅಮೃತಹಳ್ಳಿ
10.ಕೆಂಪಾಪುರ
11.ಬ್ಯಾಟರಾಯನಪುರ
12.ಕೊಡಿಗೇಹಳ್ಳಿ
13.ದೊಡ್ಡ ಬೊಮ್ಮಸಂದ್ರ
14.ವಿದ್ಯಾರಣ್ಯಪುರ
15.ಕುವೆಂಪು ನಗರ
16.ಕೆಮ್ಮಗೊಂಡನಹಳ್ಳಿ
17.ಶೆಟ್ಟಿಹಳ್ಳಿ
18.ಬಾಗಲಕುಂಟೆ
19.ಡಿಫೆನ್ಸ್‌ ಕಾಲೋನಿ
20.ಮಲ್ಲಸಂದ್ರ
21.ಟಿ.ದಾಸರಹಳ್ಳಿ
22.ಚೊಕ್ಕಸಂದ್ರ
23.ನೆಲಗದರೇನಹಳ್ಳಿ
24.ರಾಜಗೋಪಾಲ್‌ ನಗರ
25.ರಾಜೇಶ್ವರಿ ನಗರ
26.ಹೆಗ್ಗನಹಳ್ಳಿ
27.ಸುಂಕದಕಟ್ಟೆ
28.ಹಂದ್ರಹಳ್ಳಿ
29.ವಿದ್ಯಾಮಾನ್ಯ ನಗರ
30.ಹೇರೋಹಳ್ಳಿ
31.ದೊಡ್ಡಗೊಲ್ಲರಹಟ್ಟಿ
32.ಉಳ್ಳಾಲ
33.ಕೆಂಗೇರಿ ಉಪನಗರ
34.ಬಂಡೆ ಮಠ
35.ತಲಘಟ್ಟಪುರ
36.ಕನ್ನೇಶ್ವರ ರಾಮ
37.ವೀರಮದಕರಿ
38.ಜೆ.ಪಿ.ಪಾರ್ಕ್
39.ಚಾಣಕ್ಯ
40.ಛತ್ರಪತಿಶಿವಾಜಿ
41.ಪೀಣ್ಯ
42.ಲಕ್ಷ್ಮೇದೇವಿ ನಗರ
43.ರಣಧೀರ ಕಂಠೀರವ
44.ವೀರಸಿಂಧೂರ ಲಕ್ಷಣ
45.ವಿಜಯನಗರ ಕೃಷ್ಣದೇವರಾಯ
46.ಸರ್‌.ಎಂ.ವಿಶ್ವೇಶ್ವರಯ್ಯ
47.ನಾಲ್ವಡಿ ಕೃಷ್ಣರಾಜ ಒಡೆಯರ್‌ ಪಾರ್ಕ್
48.ಜ್ಞಾನಭಾರತಿ
49.ಆರ್‌.ಆರ್‌. ನಗರ
50.ಮಾರಪ್ಪನ ಪಾಳ್ಯ
51.ನಾಗಪುರ
52.ಮಹಲಕ್ಷ್ಮೇಪುರ
53.ನಂದಿನಿ ಲೇಔಟ್‌
54.ಜೈ ಮಾರುತಿ ನಗರ
55.ಕಾವೇರಿ ನಗರ
56.ಶಂಕರಮಠ
57. ಶಕ್ತಿಗಣಪತಿ ನಗರ
58. ವೈಷಭಾವತಿ ನಗರ
59. ಮತ್ತಿಕೆರೆ
60.ಅರಮನೆ ನಗರ
61.ಮಲ್ಲೇಶ್ವರ
62.ಸುಬ್ರಹ್ಮಣ್ಯ ನಗರ
63.ಗಾಯಿತ್ರಿ ನಗರ
64. ಕಾಡು ಮಲ್ಲೇಶ್ವರ
65.ರಾಜ ಮಹಲ್‌ ಗುಟ್ಟಹಳ್ಳಿ
66.ರಾಧಾಕೃಷ್ಣ ದೇವಸ್ಥಾನ ವಾರ್ಡ್‌
67.ಸಂಜಯ್‌ ನಗರ
68. ವಿಶ್ವನಾಥ ನಾಗೇನಹಳ್ಳಿ
69.ಚೋಳ ನಗರ
70.ಹೆಬ್ಬಾಳ
71.ಚಾಮುಂಡಿ ನಗರ
72.ಗಂಗಾ ನಗರ
73.ಜಯಚಾಮರಾಜೇಂದ್ರ ನಗರ
74.ಕಾವಲು ಬೈರಸಂದ್ರ
75.ಕುಶಾಲ್‌ ನಗರ
76.ಮುನೇಶ್ವರ ನಗರ
77. ಮೋದಿ ಗಾರ್ಡ್‌ನ್‌
78. ಎಸ್‌ಕೆ ಗಾರ್ಡ್‌ನ್‌
79.ಸಂಗಯರಪುರ
80.ಪುಲಕೇಶಿ ನಗರ
81.ಹೊರಮಾವು
82.ಬಾಬುಸಾಬ್‌ ಪಾಳ್ಯ
83. ಕಲ್ಕೆರೆ
84. ಕೌದೆಕೆನಹಳ್ಳಿ
85.ವಿಜ್ಞಾನಪುರ
86.ಕೆ,ಆರ್‌.ಪುರ
87.ತಂಬುಚಟ್ಟಿಪಾಳ್ಯ
88.ಬಸವನಪುರ
89.ದೇವಸಂದ್ರ
90.ಮದೇವಪುರ
91.ಎ.ನಾರಾಯಣಪುರ
92.ವಿಜ್ಞಾನ ನಗರ
93.ಎಚ್‌ಎಎಲ್‌ (ವಿಮಾನ ನಿಲ್ದಾಣ)
94.ಹೆಣ್ಣೂರು
95. ಗೋವಿಂದನಪುರ
96.ಕಾಡುಗೊಂಡನಹಳ್ಳಿ
97.ವೆಂಕಟೇಶಪುರ
98.ಕಾಚರಕನಹಳ್ಳಿ
99.ಎಚ್‌ಆರ್‌ಬಿಆರ್‌ ಲೇಔಟ್‌
100.ಬಾಣಸವಾಡಿ
101 ಕಮ್ಮನಹಳ್ಳಿ
102 ಲಿಂಗರಾಜಪುರ
103 ಮಾರುತಿಸೇವಾ ನಗರ
104. ಕಾಡುಗೋಡಿ
105 ಬೆಳತ್ತೂರು
106. ಹೂಡಿ
107.ಗರುಡಾಚಾರ್‌ಪಾಳ್ಯ
108.ದೊಡ್ಡನೆಕುಂದಿ
109.ಎಇಸಿಎಸ್‌ ಲೇಔಟ್‌
110 ವೈಟ್‌ಫೀಲ್ಡ್‌
111.ಹಗದೂರು
112. ವರ್ತೂರು
113.ಮುನ್ನೆಕೊಳ್ಳಾಲ
114.ಮಾರತಹಳ್ಳಿ
115.ಬೆಳ್ಳಂದೂರು
116.ದೊಡ್ಡಕನಹಳ್ಳಿ
117. ಸಿವಿ ರಾಮನ್‌ನಗರ
118.ಲಾಲ್‌ಬಹದ್ದೂರ್‌ ನಗರ
119.ಹೊಸ ಬೈಯಪ್ಪನಹಳ್ಳಿ
120.ಹೊಯ್ಸಳ ನಗರ
121.ಹಳೇ ತಿಪ್ಪಸಂದ್ರ
122.ಹೊಸ ತಿಪ್ಪಸಂದ್ರ
123.ಜಲಕಂಠೇಶ್ವರ ನಗರ
124. ಜೀವನಭೀಮಾ ನಗರ
125. ಕೋನೇನ ಅಗ್ರಹಾರ
126.ರಾಮಸ್ವಾಮಿ ಪಾಳ್ಯ
127. ಜಯಮಹಲ್‌
128 ವಸಂತ ನಗರ
129 ಸಂಪಂಗಿರಾಮ ನಗರ
130 ಭಾರತಿ ನಗರ
131 ಹಲಸೂರು
132 ದತ್ತಾತ್ರೇಯ ದೇವಸ್ಥಾನ
133 ಗಾಂಧಿ ನಗರ
134 ಸುಭಾಷ್‌ ನಗರ
135 ಓಕಳಿಪುರ
136.ಬಿನ್ನಿಪೇಟೆ
137.ಕಾಟನ್‌ಪೇಟೆ
138 ಚಿಕ್ಕಪೇಟೆ
139 ದಯಾನಂದ ನಗರ
140 ಪ್ರಕಾಶ ನಗರ
141 ರಾಜಾಜಿ ನಗರ
142 ಶ್ರೀರಾಮ ಮಂದಿರ
143 ಶಿವ ನಗರ
144 ಬಸವೇಶ್ವರ ನಗರ
145 ಕಾಮಾಕ್ಷಿಪಾಳ್ಯ
146 ಡಾ. ರಾಜ್‌ಕುಮಾರ್‌
147 ಅಗ್ರಹಾರ ದಾಸರಹಳ್ಳಿ
148 ಗೋವಿಂದರಾಜ ನಗರ
149 ಕಾವೇರಿಪುರ
150 ಮಾರೇನಹಳ್ಳಿ,
151 ಮಾರುತಿ ಮಂದಿರ
152 ಮೂಡಲಪಾಳ್ಯ
153 ಕಲ್ಯಾಣ ನಗರ
154 ನಾಗರಬಾವಿ
155 ನಾಯಂಡಹಳ್ಳಿ
156 ಕೆಂಪಾಪುರ ಅಗ್ರಹಾರ
157 ವಿಜಯ ನಗರ
158 ಹೊಸಹಳ್ಳಿ
159 ಹಂಪಿ ನಗರ
160 ಬಾಪೂಜಿ ನಗರ
161ಅತ್ತಿಗುಪ್ಪೆ
162 ಗಾಳಿ ಆಂಜನೇಯ ದೇವಸ್ಥಾನ,
163 ವೀರಭದ್ರ ನಗರ
164 ಆವಲಹಳ್ಳಿ
165 ಚಾಮರಾಜಪೇಟೆ
166 ಚಲವಾದಿಪಾಳ್ಯ
167 ಜಗಜೀವನರಾಮ್‌ ನಗರ
168 ಪಾದರಾಯನಪುರ
169 ದೇವರಾಜ್‌ ಅರಸ್‌ ನಗರ
170 ಆಜಾದ್‌ ನಗರ
171 ಸುಧಾಮ ನಗರ
172 ಧರ್ಮರಾಯಸ್ವಾಮಿ ದೇವಸ್ಥಾನ
173 ಸುಂಕೇನಹಳ್ಳಿ
174 ವಿಶ್ವೇಶ್ವರಪುರ
175 ಅಶೋಕ ಸ್ತಂಭ
176 ಸೊಮೇಶ್ವರ ನಗರ
177 ಹೊಂಬೇಗೌಡ ನಗರ
178ದೊಮ್ಮಲೂರು
179 ಜೋಗುಪಾಳ್ಯ
180 ವನ್ನಾರ್‌ಪೇಟೆ
181 ಶಾಂತಲಾ ನಗರ
182 ಶಾಂತಿ ನಗರ
183 ಆಸ್ಟಿನ್‌ಟೌನ್‌
184 ನೀಲಸಂದ್ರ
185 ಈಜೀಪುರ
186 ಕೋರಮಂಗಲ
187 ಆಡುಗೋಡಿ
188 ಲಕ್ಕಸಂದ್ರ
189 ಸುದ್ದಗುಂಟೆಪಾಳ್ಯ
190 ಮಡಿವಾಳ
191 ಜಕ್ಕಸಂದ್ರ
192 ಬಿಟಿಎಂ ಲೇಔಟ್‌
193 ಎನ್‌ಎಸ್‌ ಪಾಳ್ಯ
194 ಗುರಪ್ಪನಪಾಳ್ಯ
195 ತಿಲಕ ನಗರ
196 ಬೈರಸಂದ್ರ
197 ಶಾಕಾಂಬರಿ ನಗರ
198 ಜೆಪಿ ನಗರ
199 ಸಾರಕ್ಕಿ
200 ಯಡಿಯೂರು
201ಉಮಾಮಹೇಶ್ವರಿ ವಾರ್ಡ್‌
202ಗಣೇಶ ಮಂದಿರ ವಾರ್ಡ್‌
203 ಬನಶಂಕರಿ ದೇವಸ್ಥಾನ
204 ಕುಮಾರಸ್ವಾಮಿ ಲೇಔಟ್‌
205 ವಿಕ್ರಮ್‌ ನಗರ
206 ಪದ್ಮನಾಭ ನಗರ
207 ಕಾಮಾಕ್ಯ ನಗರ
208 ದೀನ್‌ದಯಾಳು ನಗರ
209 ಹೊಸಕರೆಹಳ್ಳಿ
210 ಬಸವನಗುಡಿ
211 ಹನುಮಂತ ನಗರ
212 ಶ್ರೀನಿವಾಸ ನಗರ
213 ಶ್ರೀ ನಗರ
214 ಗಿರಿ ನಗರ
215 ಕತ್ರಿಗುಪ್ಪೆ
216 ವಿದ್ಯಾಪೀಠ
217 ಉತ್ತರಹಳ್ಳಿ
218 ಸುಬ್ರಹ್ಮಣ್ಯಪುರ
219 ವಸಂತಪುರ
220 ಕನಕ ನಗರ
221ಯಲಚೇನಹಳ್ಳಿ
222 ಆರ್‌ಬಿಐ ಲೇಔಟ್‌
223 ಚುಂಚಘಟ್ಟ
224 ಅಂಜನಾಪುರ
225 ಗೊಟ್ಟಿಗೆರೆ
226 ಕಾಳೇನ ಅಗ್ರಹಾರ
227 ಬೇಗೂರು
228 ನಾಗನಾಥಪುರ
229 ಇಬ್ಲೂರು
230 ಅಗರ
231 ಮಂಗಮ್ಮನಪಾಳ್ಯ
232 ಎಚ್‌ಎಸ್‌ಆರ್‌ ಲೇಔಟ್‌
233 ರೂಪೇನ ಅಗ್ರಹಾರ
234 ಹೊಂಗಸಂದ್ರ
235 ಬೊಮ್ಮನಹಳ್ಳಿ,
236 ದೇವರಚಿಕ್ಕನಹಳ್ಳಿ
237 ಬಿಳೇಕಹಳ್ಳಿ
238 ಅರಕೆರೆ
239 ಹುಳಿಮಾವು
240 ವಿನಾಯಕ ನಗರ
241 ಸಾರಕ್ಕಿ ಕೆರೆ
242 ಜರಗನಹಳ್ಳಿ
243 ಕೂಡ್ಲು
 

Follow Us:
Download App:
  • android
  • ios