ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಖಾತೆದಾರರಿಗೆ ಸಂಪರ್ಕರಹಿತ ಮತ್ತು ಪಾರದರ್ಶಕ ಸೇವೆಯನ್ನು ಒದಗಿಸುವ ಸಲುವಾಗಿ ಇ-ಖಾತಾ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಈ ವ್ಯವಸ್ಥೆಯ ಮೂಲಕ, ನಾಗರಿಕರು ತಮ್ಮ ಆಸ್ತಿ ದಾಖಲೆಗಳಾದ 'ಎ ಖಾತಾ' ಮತ್ತು 'ಬಿ ಖಾತಾ'ಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದು.

ಬೆಂಗಳೂರು (ಅ.04): ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಖಾತೆದಾರರಿಗೆ ಸಂಪರ್ಕರಹಿತ ಮತ್ತು ಪಾರದರ್ಶಕ ಸೇವೆಯನ್ನು ಒದಗಿಸುವ ಸಲುವಾಗಿ ಇ-ಖಾತಾ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಈ ವ್ಯವಸ್ಥೆಯ ಮೂಲಕ, ನಾಗರಿಕರು ತಮ್ಮ ಆಸ್ತಿ ದಾಖಲೆಗಳಾದ 'ಎ ಖಾತಾ' ಮತ್ತು 'ಬಿ ಖಾತಾ'ಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ0 ವ್ಯಾಪ್ತಿಯಲ್ಲಿ ಹೊಸದಾಗಿ ಅನುಷ್ಠಾನಗೊಳಿಸಲಾಗಿರುವ ಫೇಸ್‌ಲೆಸ್, ಸಂಪರ್ಕರಹಿತ ಆನ್ಲೈನ್ ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ಈಗಾಗಲೇ ಪ್ರಾಯೀಗಿಕವಾಗಿ ಜಾರಿಗೊಳಿಸಲಾಗಿದೆ. ಮುಂದುವರೆದು ಬಿಬಿಎಂಪಿಯ ವಹಿಗಳಲ್ಲಿ ದಾಖಲಾಗಿರುವ ಎಲ್ಲಾ ಖಾತಾಗಳನ್ನು ಅಂದರೆ 'ಎ ಖಾತಾ' ಮತ್ತು 'ಬಿ ಖಾತಾ' ಎರಡನ್ನೂ ಡಿಜಿಟಲೀಕರಣ ಮಾಡಲಾಗಿದೆ. ಒಟ್ಟು 21 ಲಕ್ಷಕ್ಕೂ ಹೆಚ್ಚು ಕರಡು ಇ-ಖಾತಾಗಳನ್ನು ಮಾಡಲಾಗಿದ್ದು, ಯಾರಾದರೂ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಆನ್ಲೈನ್ ಮೂಲಕ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ: ಹೊಸ ವ್ಯವಸ್ಥೆ ಅ.1ರಿಂದ ಆರಂಭ

ಕರಡು ಇ-ಖಾತ (eKhata) ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್: http://bbmpeaasthi.karnataka.gov.in ಇಲ್ಲಿದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಯ ಡಿಜಿಟಲೀಕರಣದ ಕರಡು ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು 'ಎ ಖಾತಾ ಮತ್ತು ಬಿ ಖಾತಾ ಸ್ವತ್ತುಗಳಿಗೆ ಸಂಬಂಧಿಸಿದ ಕರಡು ಇ-ಖಾತಾಗಳನ್ನು ಆನ್‌ಲೈನ್ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ಇ ಹೊಂದಿದ ನಾಗರೀಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆ ಮತ್ತು ಸಂಪರ್ಕರಹಿತವಾಗಿದೆ ಎಂದು ಪಾಲಿಕೆಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂತಿಮ ಇ-ಖಾತ ಪಡೆಯಲು ನಾಗರಿಕರು ಆನ್‌ಲೈನ್‌ನಲ್ಲಿ ಒದಗಿಸಬೇಕಿರುವ ದಾಖಲೆಗಳು:
ಇ-ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ.
ದಿನಾಂಕ: 01.04.2004 ರಿಂದ ಇಲ್ಲಿಯವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಋಣಭಾರ ಪ್ರಮಾಣ ಪತ್ರ ಸಂಖ್ಯೆಯನ್ನು ಮಾತ್ರ ನಮೂದಿಸಿ ಮತ್ತು ಇ-ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುತ್ತದೆ.
ಆಸ್ತಿತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ ಹಾಗೂ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪಡೆಯಲಾಗುತ್ತದೆ.
ಮಾಲೀಕರ ಆಧಾರ್ ಇ-ಕೆವೈಸಿ
ಬೆಸ್ಕಾಂ 10-ಅಂಕಿಯ ಖಾತಾ ಸಂಖ್ಯೆಯನ್ನು ನಮೂದಿಸಿ ಹಾಗೂ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗುವುದು.
ಆಸ್ತಿಯ ಜಿಪಿಎಸ್‌ ಮತ್ತು ಆಸ್ತಿ ಭಾವಚಿತ್ರ ನೀಡಿ.
ಎ-ಖಾತಾಗಾಗಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ(ನಾಗರೀಕರು ದಾಖಲೆಗಳು ಲಭ್ಯವಿಲ್ಲವೆಂದು ಘೋಷಿಸಬಹುದು ಆದರು ಸಹ ಅಂತಿಮ ಇ-ಖಾತಾವನ್ನು ನೀಡಲಾಗುವುದು).

ಇದನ್ನೂ ಓದಿ: ಬಿಎಂಟಿಸಿ ಸಿಬ್ಬಂದಿಗೆ ಗನ್ ಲೈಸೆನ್ಸ್ ಕೋರಿಕೆ: ಕಂಡಕ್ಟರ್ ಹಣದ ಬ್ಯಾಗ್‌ನಲ್ಲಿ ಬಂದೂಕು!

ಮೇಲಿನ ವಿವರಗಳನ್ನು ವಿದ್ಯುನ್ಮಾನವಾಗಿ ಒದಗಿಸಿದ ನಂತರ ತಂತ್ರಾಂಶವು ಸ್ವತಃ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ಅಂತಿಮ ಇ-ಖಾತವನ್ನು ನೀಡುತ್ತದೆ. ನಮೂದಿಸಿದ ಮಾಹಿತಿಯು ಅಪೂರ್ಣವಾಗಿದ್ದರೆ ಅಥವಾ ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ಅಥವಾ ಅಂತಿಮ ಇ-ಖಾತಾವನ್ನು ನೀಡದಿರಲು ಯಾರಾದರೂ ಆಕ್ಷೇಪಣೆ ಸಲ್ಲಿಸಿದ್ದರೆ ಮಾತ್ರ ನಾಗರೀಕರು ಬಿಬಿಎಂಪಿಗೆ ಭೇಟಿ ನೀಡಬಹುದು. ಇದು ಅತ್ಯಂತ ಪಾರದರ್ಶಕ ಮತ್ತು ನಾಗರೀಕ ನಿಯಂತ್ರಣದಲ್ಲಿರುವ ಇ-ಖಾತಾ ವ್ಯವಸ್ಥೆ ಆಗಿದೆ. ಈ ಸಂಬಂಧ ತರಬೇತಿ ವೀಡಿಯೊಗಳನ್ನು ಬಿಡುಗಡೆ ಮಾಡಲಾಗುವುದು ಹಾಗೂ ಸಂಬಂಧಿಸಿದ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.