Asianet Suvarna News Asianet Suvarna News

ಬೆಂಗಳೂರಿನಲ್ಲಿ ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ: ಹೊಸ ವ್ಯವಸ್ಥೆ ಅ.1ರಿಂದ ಆರಂಭ

ಬೆಂಗಳೂರು ಮಹಾನಗರ ಪಾಲಿಕೆ (BBMP) ಅಕ್ಟೋಬರ್ 1, 2024 ರಿಂದ ಸಂಪರ್ಕರಹಿತ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದೆ. ನಾಗರಿಕರು ತಮ್ಮ ಆಸ್ತಿಗಳ ಕರಡು ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅಂತಿಮ ಇ-ಖಾತಾ ಪಡೆಯಲು ಹೆಚ್ಚುವರಿ ಮಾಹಿತಿಯನ್ನು ಒದಗಿಸಬಹುದು.

Getting E Khata in Bengaluru Easier New System Implemented by BBMP from October sat
Author
First Published Sep 30, 2024, 9:11 PM IST | Last Updated Sep 30, 2024, 9:11 PM IST

ಬೆಂಗಳೂರು (ಸೆ.30): ಉಪ ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ ಶಿವಕುಮಾರ್  ನೇತೃತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಿನಾಂಕ 01-10-2024 ರಿಂದ ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪಾಲಿಕೆಯಲ್ಲಿ ಪರೀಕ್ಷಾರ್ಥವಾಗಿ ಪ್ರಾರಂಭಿಸುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

1) ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ಕರಡು ಇ-ಖಾತಾವನ್ನು ಆನ್‌ಲೈನ್‌, www.bbmpeaasthi.karnataka.gov.in ನಲ್ಲಿ ರಚಿಸಿ, ಇರಿಸಲಾಗಿರುತ್ತದೆ.
2) ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ, ತಮ್ಮ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿರತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬುಧವಾರ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ!

3) ನಾಗರೀಕರು ತಮ್ಮ ಸ್ವತ್ತಿನ ಅಂತಿಮ ಇ-ಖಾತಾವನ್ನು ಪಡೆಯಲು ಆನ್‌ಲೈನ್‌ಮೂಲಕ ಈ ಕೆಳಕಂಡ ಹೆಚ್ಚುವರಿ ಮಾಹಿತಿಗಳನ್ನು ಅಥವಾ ಕರಡು ಇ-ಖಾತಾದಲ್ಲಿರುವ ಅಂಶಗಳನ್ನು ಒಳಗೊಂಡಂತೆ, ಒದಗಿಸಬೇಕಾಗಿರುತ್ತದೆ.
ಆಧಾರ್ ಇ-ಕೆವೈಸಿ
ಸ್ವತ್ತಿನ ಜಿ.ಪಿ.ಎಸ್ 
ಸ್ವತ್ತಿನ ಪೋಟೋ
ಸ್ವತ್ತಿನ ನೋಂದಾಯಿತ ದಸ್ತಾವೇಜು
ಸ್ವತ್ತಿನ ಇ.ಸಿ ದಿನಾಂಕ 01-04-2004 ರಿಂದ ಈ ತಹಲ್‌ವರೆವಿಗೂ
ಬೆಸ್ಕಾಂ ಮೀಟರ್ ಸಂಖ್ಯೆ
ಎ-ಖಾತಾ ಎಂದು ಧೃಡೀಕರಿಸುವ ಸಂಬಂಧ ಹೆಚ್ಚುವರಿ ಇನ್ನಿತರೆ ದಾಖಲಾತಿಗಳು

4) ನಾಗರೀಕರು ಮೇಲಿನ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಯಮಾವಳಂತೆ ಅಂತಿಮ ಇ-ಖಾತಾವನ್ನು ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಭೇಟಿ ಮಾಡಲು ಅವಕಾಶವಿರುತ್ತದೆ.
5) ಸ್ವತ್ತಿನ ಮಾಲೀಕರು ಅಂತಿಮ ಇ ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ಕರಡು ಇ-ಖಾತಾವನ್ನು ರಚಿಸಿದ 7 ದಿನಗಳವರೆಗೆ ಆಕ್ಷೇಪಣೆ ಅವಧಿಯನ್ನು ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳು ಆಕ್ಷೇಪಣೆಯ ವಿಚಾರಣೆ ಕೈಗೊಂಡು ಆದ್ಯತಾನುಸಾರ ನಿರ್ಧರಿಸುತ್ತಾರೆ.

ಇದನ್ನೂ ಓದಿ: ನೀವು ಅಣಬೆ ಬೆಳೆದು ಹಣ ಗಳಿಸಬೇಕಾ? ಈ ಒಂದು ದಿನದ ತರಬೇತಿಗೆ ಹಾಜರಾಗಿ!

6) ಮೇಲಿನ ಕಾರ್ಯವಿಧಾನದಂತೆ ಅಂತಿಮ ಇ-ಖಾತಾವನ್ನು ವಿತರಿಸಲಾಗುತ್ತದೆ. ಮೇಲಿನ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ವಿಡಿಯೋವನ್ನು ಪ್ರತ್ಯೇಕವಾಗಿ ಬಿಡುಗಡೆಗೊಳಿಸಲಾಗುವುದು.
7) ಬೃಹತ್ ಸ್ವರೂಪದಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಾಗಿರುವುದರಿಂದ ಪರೀಕ್ಷಾರ್ಥವಾಗಿ ಪ್ರಾರಂಭಿಸುವ ಮೂಲಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಬಿಬಿಎಂಪಿಯು ತಮಗೆ ಅತ್ಯಮೂಲ್ಯ ಸೇವೆ ನೀಡಲು ಸಹಕರಿಸಲು ಕೋರಿದೆ.

ಇ-ಖಾತಾ ಪಡೆಯುವ ವಿಧಾನಗಳು:
Getting E Khata in Bengaluru Easier New System Implemented by BBMP from October sat

Latest Videos
Follow Us:
Download App:
  • android
  • ios