ಸಾಲ ಮಂಜೂರು ವಿಳಂಬವಾಗಿದ್ದಕ್ಕೆ ನಷ್ಟಹಣ ಪಾವತಿಸಿದ ಬ್ಯಾಂಕ್ ಮ್ಯಾನೇಜರ್!
ಸಾಲ ಮಂಜೂರು ಮಾಡಲು ಬ್ಯಾಕ್ ಸಿಬ್ಬಂದಿ ಜನ ಸಮಾನ್ಯರನ್ನು ಅಲೆದಾಡಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರೈತ ಮಹಿಳೆಗೆ ಸಾಲ ಮಂಜೂರಾತಿಯಲ್ಲಿ ಆದ ಅನ್ಯಾಯವನ್ನು ಖಂಡಿಸುವ ಮೂಲಕ ಬ್ಯಾಂಕ್ ಮ್ಯಾನೇಜರ್ ಅವರಿಂದಲೇ ರೈತ ಮಹಿಳೆಗೆ ಸೇರಬೇಕಾದ ಹಣವನ್ನು ಮಂಜೂರು ಮಾಡಿಸಿದ ಪ್ರಸಂಗ ಗೋಣಿಕೊಪ್ಪದಲ್ಲಿ ನಡೆದಿದೆ.
ಮಡಿಕೇರಿ(ಫೆ.05): ರೈತ ಮಹಿಳೆಗೆ ಸಾಲ ಮಂಜೂರಾತಿಯಲ್ಲಿ ಆದ ಅನ್ಯಾಯವನ್ನು ಖಂಡಿಸುವ ಮೂಲಕ ಬ್ಯಾಂಕ್ ಮ್ಯಾನೇಜರ್ ಅವರಿಂದಲೇ ರೈತ ಮಹಿಳೆಗೆ ಸೇರಬೇಕಾದ ಹಣವನ್ನು ಮಂಜೂರು ಮಾಡಿಸಿದ ಪ್ರಸಂಗ ಗೋಣಿಕೊಪ್ಪದಲ್ಲಿ ನಡೆದಿದೆ. ರೈತ ಸಂಘದವರು ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಣಿಕೊಪ್ಪದ ಹುದಿಕೇರಿ ಹೋಬಳಿಯ ರೈತ ಮಹಿಳೆ ಕಳೆದ ವರ್ಷ ಮಾಚ್‌ರ್ ತಿಂಗಳಿನಲ್ಲಿ ಗೃಹಸಾಲ ಪಡೆಯಲು ಗೋಣಿಕೊಪ್ಪದ ರಾಷ್ಟ್ರೀಕೃತ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. 30 ಲಕ್ಷ ರುಪಾಯಿ ಗೃಹ ಸಾಲಕ್ಕೆ ಮಹಿಳೆಯು ಬ್ಯಾಂಕ್‌ಗೆ ಬೇಕಾದ ದಾಖಲೆಯನ್ನು ಸಲ್ಲಿಸಿದ್ದರು. ನಂತರದಲ್ಲಿ ವಿವಿಧೆಡೆಯಿದ್ದ ಸಾಲವನ್ನು ಬಂಗಾರ ಅಡವಿಟ್ಟು ತೀರಿಸಿ, ಬಳಿಕ ಬೇರೆ ಯಾವುದೇ ಬ್ಯಾಂಕ್‌ನಲ್ಲಿ ಸಾಲ ಇಲ್ಲದಿರುವ ಬಗ್ಗೆಯೂ ದೃಢೀಕರಣ ಪತ್ರವನ್ನು ಸಲ್ಲಿಸಿದ್ದಾರೆ.
ಜಿಪಂ ಅಧ್ಯಕ್ಷರು ರಾಜೀನಾಮೆ ನೀಡಲು ಆರ್.ಅಶೋಕ್ ಸೂಚನೆ
ಅಂತಿಮವಾಗಿ ಸಾಲ ಮಂಜೂರು ಮಾಡಬೇಕಾದ ಮ್ಯಾನೇಜರ್ ಸಮಯಕ್ಕೊಂದು ನೆಪ ಹೇಳುತ್ತಾ ಬಂದರೇ ಹೊರತು ಸಾಲ ಮಂಜೂರಾತಿ ಆಗಲೇ ಇಲ್ಲ. ಇದರಿಂದ ನೊಂದ ಮಹಿಳೆ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಮಾಡ ಮನುಸೋಮಯ್ಯ ಅವರ ಗಮನಕ್ಕೆ ತಂದರು. ಮಹಿಳೆಯ ಅಹವಾಲು ಸ್ವೀಕರಿಸಿದ ರೈತ ಸಂಘದ ಅಧ್ಯಕ್ಷರು ಬ್ಯಾಂಕ್ ಮ್ಯಾನೇಜರ್ ಅವರಿಗೆ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದರು.
ರೈತ ಮುಖಂಡರ ಮಾತಿಗೆ ಮನ್ನಣೆ ನೀಡಿದ ಮ್ಯಾನೇಜರ್ ಬೇಗನೆ ಸಾಲ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿ ತೆರಳಿದ್ದು, ಮೂರು ತಿಂಗಳು ಕಳೆದರೂ ಸಾಲ ಮಂಜೂರು ಮಾಡದೆ ಮತ್ತೆ ವಿಳಂಬ ಧೋರಣೆ ಅನುಸರಿಸಿದ್ದರು. ಇದರಿಂದ ನೊಂದ ಮಹಿಳೆ ಮತ್ತೆ ರೈತ ಸಂಘದ ಗಮನಕ್ಕೆ ಈ ವಿಷಯವನ್ನು ತಂದಿದ್ದರು.
ಮಂಗಳೂರು ಬಂದರಿನಲ್ಲಿ ಕಟ್ಟೆಚ್ಚರ: ಮೂವರು ಚೀನೀಯರ ಆಗಮನ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲೆಯ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಸೋಮವಾರ ಹಲವಾರು ರೈತರು ಬ್ಯಾಂಕ್‌ಗೆ ತೆರಳಿ ಪ್ರತಿಭಟನೆ ನಡೆಸಿದರು. ಮ್ಯಾನೇಜರ್ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಬ್ಯಾಂಕ್ ಮ್ಯಾನೇಜರ್‌ನ್ನು ಪೊಲೀಸ್ ಠಾಣಾಧಿಕಾರಿ ಸರೇಶ್ ಬೋಪಣ್ಣ ಅವರ ಮೂಲಕ ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಆಗಿರುವ ಪ್ರಮಾದಕ್ಕೆ ಮ್ಯಾನೇಜರ್ ಕ್ಷಮೆ ಕೋರಿ ಕೂಡಲೇ ಸಾಲ ಮಂಜೂರು ಮಾಡುತ್ತೇನೆ ಎಂದು ಹೇಳಿದರು. ಆದರೆ ಇದಕ್ಕೆ ಮಹಿಳೆ ಒಪ್ಪದೆ, ಇಲ್ಲಿನ ತನಕ ತನಗೆ ಆಗಿರುವ ನಷ್ಟಪರಿಹಾರ ನೀಡುವಂತೆ ಹಾಗೂ ಬ್ಯಾಂಕ್‌ಗೆ ಸಲ್ಲಿಸಿರುವ ದಾಖಲೆಗಳನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಅಂತಿಮವಾಗಿ ಠಾಣಾಧಿಕಾರಿಯ ಸಮ್ಮುಖದಲ್ಲಿ ಮಹಿಳೆಗೆ ಆದ ನಷ್ಟಪರಿಹಾರ ನೀಡುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ರೈತ ಮುಖಂಡರ ಸಮ್ಮುಖದಲ್ಲಿ ಮ್ಯಾನೇಜರ್ 40 ಸಾವಿರ ರು. ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಹೇಳಿ ಚೆಕ್ ನೀಡಿದರು. ಪ್ರತಿಭಟನೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4.30ರ ವರೆಗೆ ನಡೆಯಿತು.
'ಮಂಗ್ಳೂರು ಗೋಲಿಬಾರ್ ಸಂಬಂಧ ಬಂದ ದೂರುಗಳೆಷ್ಟು..'?.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಸಬಿತಾ, ಪೊನ್ನಂಪೇಟೆ ಹೋಬಳಿ ಸಂಚಾಲಕ ಮಲೆನಾಡ ಮಂಜುನಾಥ್, ಹುದಿಕೇರಿ ಹೋಬಳಿ ಸಂಚಾಲಕ ಚೆಂಗುಲಂಡ ಸೂರಜ್, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೆಪಂಡ ಪ್ರವೀಣ್, ಶ್ರೀಮಂಗಲ ಹೋಬಳಿ ಸಂಚಾಲಕ ಕಂಬ ಕಾರ್ಯಪ್ಪ, ರೈತ ಮುಖಂಡರಾದ ಚಂಗುಲಂಡ ತಮ್ಮಯ್ಯ, ಕೊಟ್ಟಂಗಡ ರಾಜ ಸುಬ್ಬಯ್ಯ, ಬೊಟ್ಟಂಗಡ ಪ್ರತಾಪ್, ತಿಲಕ್, ರವಿ, ಕಿರಿಯಮಾಡ ಮಂದಣ್ಣ, ಈಶ, ಮತ್ರಂಡ ಮನು, ಮೀದೇರಿರ ಕವಿತಾ, ಪುಚ್ಚಿಮಾಡ ರಾಯ್, ಬಿರುನಾಣಿಯ ಕರ್ತಮಾಡ ಸುಜು ಪೊನ್ನಪ್ಪ, ಕಾಯಪಂಡ ಮಧುವ, ಅಣ್ಣಳಮಾಡ ಸುರೇಶ್, ತೀತರಮಾಡ ರಾಜ, ಅಶೋಕ್, ಅರ್ಜುನ್ ಮೊದಲಾದವರು ಉಪಸ್ಥಿತರಿದ್ದರು.