ಬೆಂಗಳೂರು(ಫೆ.05): ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜುಗೆ ರಾಜೀನಾಮೆ ನೀಡಲು ಸೂಚಿಸಿದ್ದು, ಆ ಸ್ಥಳಕ್ಕೆ ಜಿಪಂ ಸದಸ್ಯ ಮರಿಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಸರ್ಜಾಪುರದಲ್ಲಿ ನಡೆದ ಕಾರ‍್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಮುನಿರಾಜು ಅವರು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ನಂತರ ಅಧ್ಯಕ್ಷನಾಗಿ ಹಾಗೂ ಜಿಲ್ಲಾ ಪಂಚಾಯತ್‌ ಪರಿಷತ್‌ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೇವಲ 4 ವರ್ಷದ ಅವಧಿಯಲ್ಲಿ 3 ಹುದ್ದೆಗಳನ್ನು ಅಲಂಕರಿಸಿರುವ ಅಪರೂಪದ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.

ಆನೇಕಲ್‌ ಅಭಿವೃದ್ಧಿಗೆ ವಿಶೇಷ ಅನುದಾನ: ಬಿಎಸ್‌ವೈ

ಅವರ ಪಕ್ಷ ನಿಷ್ಠೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಉಪನಗರ ವರ್ತುಲ ರಸ್ತೆ ನಿಗಮದ ಅಧ್ಯಕ್ಷರಾಗಿ (ಛೇರ್ಮನ್‌) 3 ವರ್ಷಗಳ ಅವಧಿಗೆ ನೇಮಕ ಮಾಡಲಾಗುವುದು. ಮೋದಿ ಕೋಟ್‌ ತೊಟ್ಟಮುನಿರಾಜು ಇನ್ನು ಮುಂದೆ ಫುಲ್‌ ಸೂಟ್‌ ಹಾಕುವ ಹುದ್ದೆಯನ್ನು ನೀಡಲಾಗುವುದು ಎಂದು ಹಾಸ್ಯಧಾಟಿಯಲ್ಲಿ ಹೇಳಿದ್ದಾರೆ.