Asianet Suvarna News Asianet Suvarna News

ಬೆಂಗಳೂರು ಮೈಸೂರು ಹೆದ್ದಾರಿ ಸರಣಿ ಅಪಘಾತದಲ್ಲಿ ಸುಟ್ಟು ಭಸ್ಮವಾದ ಕಾರು: ಮಂಡ್ಯ ಎಸ್‌ಪಿ ಕಾರಿಗೂ ಡ್ಯಾಮೇಜ್‌

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತದಲ್ಲಿ ಕಾರು ಸುಟ್ಟು ಭಸ್ಮವಾಗಿದ್ದು,  ಮಂಡ್ಯ ಎಸ್‌ಪಿ ಯತೀಶ್‌ ಅವರ ಕಾರು ಕೂಡ ಡ್ಯಾಮೇಜ್‌ ಆಗಿದೆ.

Bangalore Mysore expressway car burnt in accident Mandya SP Yatish escapes by hair breadth sat
Author
First Published Oct 14, 2023, 12:36 PM IST

ಮಂಡ್ಯ (ಅ.14): ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸರಣಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಗುದ್ದಿದ್ದು, ಇದರಿಂದ ಕಾರಿಗಳು ಸರಣಿ ಅಪಘಾತವಾಗಿ ಒಂದು ಕಾರು ಸುಟ್ಟು ಭಸ್ಮವಾಗಿದೆ. ಇದೇ ಹೆದ್ದಾರಿಯಲ್ಲಿ ಹೋಗುತ್ತಿದ್ದ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಅವರ ಕಾರಿಗೂ ಅಪಘಾತವಾಗಿದೆ. ಆದರೆ, ಎಸ್‌ಪಿ ಬೇರೊಂದು ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ ಅಪಘಾತದ ವೇಳೆ ಕಾರು ಹೊತ್ತಿ ಉರಿದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗೌರಿಪುರ ಗ್ರಾಮದ ಬಳಿ ಘಟನೆ ನಡೆದಿದೆ. ಅತೀವೇಗವಾಗಿ ಬಂದ ಲಾರಿಯೊಂದು ಮುಂದೆ ನಿಧಾನವಾಗಿ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ ಮುಂಬದಿಯಲ್ಲಿ ಸಾಧಾರಣ ವೇಗದಲ್ಲಿ ಚಲಿಸುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಇದರಲ್ಲಿ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರು ಸೇರಿದಂತೆ ಹಲವರ ಕಾರುಗಳು ಜಖಂ ಆಗಿವೆ. ಇನ್ನು ಕಾರಿಗೆ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಒಂದು ಕಾರಿ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲಿಯೇ ಸುಟ್ಟು ಭಸ್ಮವಾಗಿದೆ.

Bengaluru : ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ಇಂಜಿನಿಯರ್‌ ವಿದ್ಯಾರ್ಥಿ ಬಲಿ

ಇನ್ನು ಸರಣಿ ಅಪಘಾತದ ನಂತರ ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕಾರಿನ ಬಾಗಿಲುಗಳು ಲಾಕ್‌ ಆಗಿವೆ. ಕೂಡಲೇ ಹೊರಗಿದ್ದ ಪೊಲೀಸರ ಸಹಾಯದಿಂದ ಕಾರಿನ ಗಾಜುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರು ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಇನ್ನು ಸರಣಿ ಅಪಘಾತದ ವೇಳೆ ಶ್ರೀರಂಗಪಟ್ಟಣ ಕಡೆಗೆ ಹೋಗುತ್ತಿದ್ದ ಮಂಡ್ಯ ಎಸ್‌ಪಿ ಯತೀಶ್‌ ಅವರ ವಾಹನಕ್ಕೂ ಕಾರು ಡಿಕ್ಕಿಯಾಗಿದೆ. ಆದರೆ, ಎಸ್‌ಪಿ ಯತೀಶ್‌ ಅವರು ಜಿಲ್ಲಾಧಿಕಾರಿ ಕಾರಿನಲ್ಲಿ ಹೋಗಿದ್ದರಿಂದ ಚಾಲಕ ಮಾತ್ರ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಇನ್ನು ಎಸ್‌ಪಿ ಕಾರಿನ ಹಿಂಬಾಗ ಹಾಗೂ ಮುಂಭಾಗ ಜಖಂ ಆಗಿದ್ದು, ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸರಣಿ ಕಾರಿನ ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕುರಿತಂತೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಬಿಎಂಟಿಸಿ ಬಸ್‌ ಗುದ್ದಿ ವಿದ್ಯಾರ್ಥಿ ಸಾವು:
ಬೆಂಗಳೂರು (ಅ.14):
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಯಶವಂತಪುರ ಗಾರೆಪ್ಪನ ಪಾಳ್ಯ ರಸ್ತೆ ಮಾರ್ಗವಾಗಿ ಹೂವಿನ ಮಾರ್ಕೆಟ್ ಸಮೀಪ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ಬೈಕ್‌ಗೆ ಬಸ್‌ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ವಿದ್ಯಾರ್ಥಿಯ ತಲೆಯ ಮೇಲೆ ಬಸ್‌ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್‌ಗೆ ಶನಿವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿ ಬಲಿಯಾಗಿದ್ದಾನೆ. ಗಂಗಾಧರ್ (21) ಬಿಎಂಟಿಸಿಗೆ ಅಪಘಾತದಿಂದ ಸ್ಥಳದಲ್ಲೇ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಹೆಚ್‌ಎಎಲ್ ಗೆ ಇಂಟರ್ನ್‌ಶಿಪ್‌ ಸರ್ಟಿಫಿಕೇಟ್ ತರಲು ಗಂಗಾಧರ್ ಹೋಗುತ್ತಿದ್ದ ವೇಳೆ ಯಶವಂತಪುರ ಗಾರೆಪ್ಪನ ಪಾಳ್ಯ ರಸ್ತೆ ಮಾರ್ಗವಾಗಿ ಹೂವಿನ ಮಾರ್ಕೆಟ್ ಸಮೀಪ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಬೈಕ್‌ನಲ್ಲಿ ನಿಧಾನವಾಗಿ ಹೋಗುತ್ತಿದ್ದ ಗಂಗಾಧರ್‌ಗೆ ಬಿಎಂಟಿಸಿ ಬಸ್ ಹಿಂಭಾಗದಿಂದ ಬಂದು ಡಿಕ್ಕಿ ಹೊಡೆದಿದೆ. 

ಸಾಯಲು ಬಂದ ಹೆಂಡ್ತಿ ಸಮಾಧಾನಪಡಿಸಲು ರೈಲ್ವೆ ಹಳಿಯಲ್ಲಿ ತಬ್ಬಿಕೊಂಡ ಪತಿ: ವಿಧಿ ಬಯಸಿದ್ದೇ ಬೇರೆ..

ಇನ್ನು ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಗಂಗಾಧರ್ ಮೇಲೆ ಬಸ್‌ನ ಚಕ್ರ ಹರಿದಿದೆ. ಬಸ್‌ ಹರಿಯುತ್ತಿದ್ದಂತೆ ದೇಹದ ಭಾಗಗಳು ಛಿದ್ರಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆ ಗೆ ರವಾನಿಸಲಾಗಿದೆ. ಅಪಘಾತದ ಸ್ಥಳಕ್ಕೆ ಯಶವಂತಪುರ ಸಂಚಾರ ಪೋಲಿಸರ ಭೇಟಿ ಪರಿಶೀಲನೆ ನೀಡಿ ಪರಿಶೀಲನೆ ಮಾಡಿದ್ದಾರೆ. ಅಪಘಾತ ಎಸಗಿದ್ದ ಬಿಎಂಟಿಸಿ ಬಸ್ ಚಾಲಕನಿಗೆ ಠಾಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios