ಚಾಮರಾಜನಗರ: ಆನೆ, ಹುಲಿ ಸಂಖ್ಯೆಯಲ್ಲಿ ಬಂಡೀಪುರ ನಂ.1

ದೇಶದಲ್ಲಿಯೇ ಅತೀ ಹೆಚ್ಚು ಆನೆ ಹಾಗೂ ಹುಲಿ 2ನೇ ಸ್ಥಾನದಲ್ಲಿ ಬಂಡೀಪುರವಾಗಿದೆ. ರಾಜ್ಯದಲ್ಲಿ ಆನೆ ಹಾಗೂ ಹುಲಿಗಳು ಅತೀ ಹೆಚ್ಚು ಇರುವುದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಗುಂಡ್ಲುಪೇಟೆ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ.

Bandipur National Park No 1 in Number of Elephants and Tigers in Karnataka grg

ರಂಗೂಪುರ ಶಿವಕುಮಾರ್‌

ಗುಂಡ್ಲುಪೇಟೆ(ಆ.13): ಬಂಡೀಪುರ ಎಂದಾಕ್ಷಣ ವಿಶ್ವದ ಗಮನ ಸೆಳೆದಿದ್ದು ಹುಲಿ ಸಂರಕ್ಷಿತ ಪ್ರದೇಶವಾಗಿರುವ ಬಂಡೀಪುರವೀಗ ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ, ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಕಾಡಂಚಿನ ಗ್ರಾಮಸ್ಥರ ಸಹಕಾರದಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಎರಡು ಗರಿಗಳು ಮುಕುಟಕ್ಕೇರಿಸಿಕೊಂಡಿದೆ.

2023 ರ ಆನೆಗಳ ಗಣತಿಯ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು ಬಂಡೀಪುರದಲ್ಲಿ 1116 ಆನೆಗಳಿರುವುದು ಜಿಲ್ಲೆಗೆ ಹೆಮ್ಮೆ ಎನಿಸಿದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.

ಬಂಡೀಪುರ: ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಬರುವ ಪ್ರವಾಸಿಗರಿಗೆ ವಿಮೆ ಭಾಗ್ಯ!

ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 563 ಹುಲಿಗಳಿವೆ ಎಂದು ಹುಲಿ ಗಣತಿಯಲ್ಲಿ ಅಂದಾಜು ಮಾಡಲಾಗಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 191 ಹುಲಿಗಳಿವೆ ಇದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.
ದೇಶದಲ್ಲಿಯೇ ಅತೀ ಹೆಚ್ಚು ಆನೆ ಹಾಗೂ ಹುಲಿ 2ನೇ ಸ್ಥಾನದಲ್ಲಿ ಬಂಡೀಪುರವಾಗಿದೆ. ರಾಜ್ಯದಲ್ಲಿ ಆನೆ ಹಾಗೂ ಹುಲಿಗಳು ಅತೀ ಹೆಚ್ಚು ಇರುವುದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಗುಂಡ್ಲುಪೇಟೆ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ.

ಆವಾಸ ಸ್ಥಾನ:

ಆನೆ ಹಾಗೂ ಹುಲಿಗಳಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು ಈ ಸಾಲಿನ ಆನೆಗಳ ಗಣತಿಯ ಪ್ರಕಾರ ಬಂಡೀಪುರದಲ್ಲಿ 1116 ಆನೆ,ಮಹದೇಶ್ವರ ಬೆಟ್ಟದಲ್ಲಿ 706 ಆನೆ, ಬಿಆರ್‌ಟಿ 619 ಆನೆ, ಕಾವೇರಿ ವನ್ಯಧಾಮದಲ್ಲಿ 236 ಆನೆಗಳಿವೆ.

ಸಿಬ್ಬಂದಿ ಶ್ರಮ ಅಪಾರ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಗಲು,ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಸಿಬ್ಬಂದಿ ಪಾತ್ರ ಅಪಾರ.ಅರಣ್ಯ ಸಿಬ್ಬಂದಿ ಜೊತೆಗೆ ಕಾಡಂಚಿನ ಗ್ರಾಮಸ್ಥರ ಜನರ ಸಹಕಾರವಿದೆ.

ಬಂಡೀಪುರದಲ್ಲಿ ಆನೆ ದಿನಾಚರಣೆಯೇ ಇಲ್ಲ!

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿ ಈಗಾಗಲೇ 2ನೇ ಸ್ಥಾನ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಜೊತೆಗೆ ಆನೆಗಳ ಸಂಖ್ಯೆಯಲ್ಲೂ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ ಆದರೆ ಶನಿವಾರ ವಿಶ್ವ ಆನೆ ದಿನದ ಸಮಯದಲ್ಲಿ ದೇಶದಲ್ಲಿಯೇ ಹೆಚ್ಚು ಆನೆಗಳಿವೆ ಎಂಬ ವರದಿ ಬಂದರೂ ಅದ್ಧೂರಿಯಾಗಿ ವಿಶ್ವ ಆನೆ ದಿನಾಚರಣೆ ನಡೆಯಲೇ ಇಲ್ಲ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಬಂಡೀಪುರ ಅರಣ್ಯ ಇಲಾಖೆ ಆನೆ ದಿನಾಚರಣೆಯಂದು ಸಂಭ್ರಮ,ಸಡಗರ ಕಾಣಲಿಲ್ಲ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಇತರೆ ವಲಯಗಳ ಅಧಿಕಾರಿಗಳು, ಸಿಬ್ಬಂದಿಗಳು, ಕುಟುಂಬಸ್ಥರು,ಪತ್ರಕರ್ತರಿಗೂ ಆಹ್ವಾನ ಇಲ್ಲ!
ಪೂಜೆಗೆ ಸೀಮಿತ: ಶನಿವಾರ ಮಧ್ಯಾಹ್ನ 12 ರ ಸಮಯದಲ್ಲಿ ಬಂಡೀಪುರ ಅರಣ್ಯ ಸಂರಕ್ಷಾಧಿಕಾರಿ ಹಾಗು ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್‌, ಬಂಡೀಪುರ ಎಸಿಎಫ್‌ ನವೀನ್‌, ಹೆಡಿಯಾಲ ಎಸಿಎಫ್‌ ಕೆ.ಪರಮೇಶ್‌, ಕಲ್ಕೆರೆ ಆರ್‌ಎಫ್‌ಒ ಪುನೀತ್‌ ಸಮ್ಮುಖದಲ್ಲಿ ಸಾಕಾನೆಗಳಿಗೆ ಪೂಜೆ ನಡೆದ ಸಮಯದಲ್ಲಿ ರಾಂಪುರ ಆನೆ ಶಿಬಿರದ ಆನೆ ಮಾವುತರು, ಕಾವಾಡಿಗಳು ಇದ್ದರು.

ಹಿಂದೆ ಅದ್ದೂರಿ, ಈಗಿಲ್ಲ: ಕಳೆದ 2022 ರ ವಿಶ್ವ ಆನೆ ದಿನಾಚರಣೆಯಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಲ್ಕರೆ ವಲಯದ ರಾಂಪುರ ಆನೆ ಶಿಬಿರದಲ್ಲಿ ಭಾರೀ ವಿಜೃಂಭಣೆಯಿಂದ ಮೈಸೂರು, ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು,ಅರಣ್ಯ ಇಲಾಖೆಯ ಅ​ಕಾರಿಗಳು/ಸಿಬ್ಬಂದಿಗಳು ಆಚರಿಸಿದ್ದರು. ಆಲ್ಲದೆ ರಾಂಪುರ ಶಿಬಿರದಲ್ಲಿದ್ದ ಶೃಂಗಾರಗೊಂಡಿದ್ದ ಹಲವು ಸಾಕಾನೆಗಳು ಫುಟ್‌ ಬಾಲ್‌ ಆಟ, ಡ್ಯಾನ್ಸ್‌, ಒಂಟಿ ಕಾಲಿನ ಪ್ರದರ್ಶನ ನಡೆಸಿ ಸಭೆಯಲ್ಲಿದ್ದವರ ಮೆಚ್ಚುಗೆಗೆ ಪಾತ್ರವಾಗಿದ್ದವು ಅಲ್ಲದೆ ವಿಶ್ವ ಆನೆ ದಿನದಂದು ಇಲಾಖೆಯ ಸಿಬ್ಬಂದಿಗೆ ಅವಾರ್ಡ್‌ ಕೂಡ ನೀಡಿತ್ತು. ಕಾರ್ಯಕ್ರಮದ ಬಳಿಕ ಆನೆ ದಿನದಂದು ಆಗಮಿಸಿದ್ದ ಗಣ್ಯರು, ಸಿಬ್ಬಂದಿಗಳು ಹಾಗು ಆಹ್ವಾನಿತರಿಗೆ ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು ಆದರೆ ಈ ಬಾರಿ ಕಳೆದ ವರ್ಷದ ಸಂಭ್ರಮ, ಸಡಗರ ಏನು ಕಂಡು ಬಂದಿಲ್ಲ.

ಬಂಡೀಪುರ ಸಿಎಫ್‌ ಶಾಸಕರ ಕೆಂಗಣ್ಣಿಗೆ ಗುರಿ?

ಗುಂಡ್ಲುಪೇಟೆ: ಕಳೆದ ಜು.29 ಜಾಗತಿಕ ಹುಲಿ ದಿನಾಚರಣೆ ಬಂಡೀಪುರ ಕ್ಯಾಂಪಸ್‌ಲ್ಲಿ ನಡೆದಿದ್ದು ಹುಲಿ ದಿನಾಚರಣೆಗೆ ಕ್ಷೇತ್ರದ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ರನ್ನು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಆಹ್ವಾನಿಸಿರಲಿಲ್ಲ. ಕಾರಣ ಬಂಡೀಪುರ ಅರಣ್ಯ ಸಂಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ರ ಮೇಲಿನ ಭ್ರಷ್ಟಾಚಾರದ ಆರೋಪ/ ಲೋಕಾಯುಕ್ತಕ್ಕೆ ರೈತರು ದೂರು ಸಲ್ಲಿಸಿದ್ದ ಹಿನ್ನಲೆ ವರ್ಗಾವಣೆಗೆ ಕ್ಷೇತ್ರದ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಅಲ್ಲದೆ ಬಂಡೀಪುರ ಹುಲಿ ಸಂರಕ್ಷಣಾ​ಕಾರಿ ಹಾಗು ನಿರ್ದೇಶಕ ಹುದ್ದೆಗೆ ಮತ್ತೋರ್ವ ಐಎಫ್‌ಎಸ್‌ ಅಧಿಕಾರಿ ನೇಮಿಸಿ ಎಂದು ಶಾಸಕರು ಪತ್ರದ ಬರೆದಿದ್ದ ಕಾರಣ ಬಂಡೀಪುರ ಸಿಎಫ್‌ ಡಾ.ರಮೇಶ್‌ಕುಮಾರ್‌ ಶಾಸಕರನ್ನು ಹುಲಿ ದಿನಾಚರಣೆಗೆ ಆಹ್ವಾನ ನೀಡಿರಲಿಲ್ಲ ಎನ್ನಲಾಗಿದೆ.

ಹುಲಿಗಳ ಜೊತೆಗೆ ಆನೆಗಳ ಸಂಖ್ಯೆಯಲ್ಲೂ ರಾಜ್ಯದಲ್ಲೇ ಬಂಡೀಪುರ ನಂಬರ್ 1

ಶನಿವಾರ ವಿಶ್ವ ಆನೆ ದಿನಾಚರಣೆ ಕಲ್ಕರೆ ವಲಯದ ರಾಂಪುರ ಆನೆ ಶಿಬಿರದಲ್ಲಿ ನಡೆಸಿದ್ದಾರೆ.ಕಲ್ಕರೆ ವಲಯ ಹೆಚ್‌.ಡಿ.ಕೋಟೆ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು ಅಲ್ಲಿನ ಕ್ಷೇತ್ರದ ಶಾಸಕ ಅನಿಲ್‌ ಚಿಕ್ಕಮಾದು ಹಾಗು ಕ್ಷೇತ್ರದ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ರನ್ನು ಆಹ್ವಾನಿಸಿಲ್ಲ.

ಚರ್ಚೆಗೆ ಗ್ರಾಸ: ಬಂಡೀಪುರ ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ರನ್ನು ಮುಂದಿನ ವಾರ ಆಹ್ವಾನಿಸಿ ಅದ್ದೂರಿಯಾಗಿ ಬಂಡೀಪುರ/ಮೇಲುಕಾಮನಹಳ್ಳಿ ಬಳಿ ಸಫಾರಿ ಕೇಂದ್ರದ ಬಳಿ ನಡೆಸಲು ಸಿಎಫ್‌ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios