ಬಂಡೀಪುರ: ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಬರುವ ಪ್ರವಾಸಿಗರಿಗೆ ವಿಮೆ ಭಾಗ್ಯ!

ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆಗಮಿಸುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶುಭ ಸುದ್ದಿ ನೀಡಿದ್ದು, ಬಂಡೀಪುರ ಸೇರಿದಂತೆ ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಬರುವ ಪ್ರವಾಸರಿಗೆ ವಿಮೆ ಭಾಗ್ಯ ಶೀಘ್ರದಲ್ಲೇ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ. 

insurance for tourists going to bandipur safari at chamarajanagar gvd

ರಂಗೂಪುರ ಶಿವಕುಮಾರ್‌

ಗುಂಡ್ಲುಪೇಟೆ (ಆ.12): ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆಗಮಿಸುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶುಭ ಸುದ್ದಿ ನೀಡಿದ್ದು, ಬಂಡೀಪುರ ಸೇರಿದಂತೆ ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಬರುವ ಪ್ರವಾಸರಿಗೆ ವಿಮೆ ಭಾಗ್ಯ ಶೀಘ್ರದಲ್ಲೇ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿರುವ ಪರಿಸರ ಪ್ರವಾಸೋದ್ಯಮ ಚಟುವಟಿಕೆಗೆ ಆಗಮಿಸುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸಲು ಅರಣ್ಯ ಇಲಾಖೆಯ ಮುಂದಾಗಬೇಕು ಎಂದು ಪರಿಸರವಾದಿ ಬೆಳಗಾವಿಯ ಗಿರಿಧರ ಕುಲಕರ್ಣಿ ಮನವಿ ಮಾಡಿದ್ದರು.

ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಬೆಳಗಾವಿ, ವಿಜಯನಗರ, ಕೋಲಾರ, ರಾಮನಗರ, ಕೊಪ್ಪಳ, ಗೋಕಾಕ್‌, ಹಾವೇರಿ, ಚಿತ್ರದುರ್ಗ,ಧಾರವಾಡ, ಗುಲ್ಬರ್ಗ, ಬಾಗಲಕೋಟೆ ಮತ್ತು ಹಾಸನ ವನ್ಯಜೀವಿ ಪ್ರಾದೇಶಿಕ ವಿಭಾಗಗಳ ಅಧಿಕಾರಿಗಳಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌ ಪುಷ್ಕರ್‌ ಪತ್ರ ಬರೆದು ಸೂಚನೆ ಹೊರಡಿಸಿದ್ದಾರೆ.

ಮೋದಿ ಮನ್ ಕೀ ಬಾತ್ ಐಡಿಯಾ: ಬಾಳೆ ದಿಂಡಿನಿಂದ ರಸವಾಯ್ತು ಬದುಕು!

ಪಿಸಿಸಿಎಫ್‌ ಸೂಚನೆ: ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಅನುಸರಿಸುವ ಮಾದರಿಯನ್ವಯ ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ನಡೆಯುವ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆಗಮಿಸುವ ಪ್ರವಾಸರಿಗೆ ವಿಮೆ ಭದ್ರತೆ ಒದಗಿಸುವಲ್ಲಿ ಅವಶ್ಯ ಕ್ರಮಗೊಳ್ಳುವಂತೆ ರಾಜ್ಯದ ಎಲ್ಲಾ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಸಫಾರಿ ಪ್ರವಾಸಿಗರ ವಾಹನದ ಮೇಲೆ ಕಾಡು ಪ್ರಾಣಿಗಳು ದಾಳಿ ನಡೆಸಿ ಅವಘಡ ಸಂಭವಿಸಿದರೆ ವಿಮೆ ಪರಿಹಾರ ನೀಡಲು ಅರಣ್ಯ ಇಲಾಖೆ ಪ್ಲಾನ್‌ ಮಾಡಿದೆ. ಈಗಾಗಲೇ ಕಳ್ಳಬೇಟೆ ತಡೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.

ಪರಿಸರವಾದಿ ಬೆಳಗಾವಿ ಕುಲಕರ್ಣಿ ಮನವಿಯ ಹಿನ್ನೆಲೆ ಅರಣ್ಯ ಇಲಾಖೆ ಇದೀಗ ರಾಜ್ಯದ ಪರಿಸರ ಪ್ರವಾಸೋದ್ಯಮಕ್ಕೆ ಬರುವ ಪ್ರವಾಸಿಗರಿಗೂ ವಿಸ್ತರಿಸಲು ನಿರ್ಧರಿಸಿದೆ. ಸಫಾರಿ ಶುಲ್ಕದ ಜೊತೆಗೆ 5 ರೂಪಾಯಿ ಹೆಚ್ಚುವರಿ ಪಡೆದು ಹಣ ಪಡೆದು ವಿಮೆ ಸೌಲಭ್ಯ ನೀಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ ಅರಣ್ಯ ಇಲಾಖೆಯು ವಿಮೆ ಕಂಪನಿಗಳೊಂದಿಗೆ ಮಾತುಕತೆ ನಡೆದಿದೆ. ಇನ್ನೂ ಕೆಲವೇ ಕೆಲ ದಿನಗಳಲ್ಲಿ ವಿಮೆ ಯೋಜನೆ ಜಾರಿ ಬರಲಿದೆ ಎಂದು ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಮಂಜುನಾಥ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಒಂದೂವರೆ ಎಕರೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು: ಅನ್ನದಾತ ಕಣ್ಣೀರು

ಅವಾಸ ಸ್ಥಾನ: ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಚಿರತೆ ಹಾಗೂ ಆನೆಗಳಿರುವ ತಾಣ ಬಂಡೀಪುರವಾಗಿದೆ. ಹುಲಿ ಸಂರಕ್ಷಿತ ಪ್ರದೇಶವಾಗಿರುವ ಇಲ್ಲಿ ಹುಲಿ, ಆನೆ, ಕರಡಿ, ಚಿರತೆ, ಕಾಡೆಮ್ಮೆ, ಜಿಂಕೆ, ಸೀಳು ನಾಯಿ ಸೇರಿದಂತೆ ಮೊದಲಾದ ವನ್ಯಜೀವಿಗಳ ಆವಾಸಸ್ಥಾನ.

Latest Videos
Follow Us:
Download App:
  • android
  • ios