Asianet Suvarna News Asianet Suvarna News

ಹುಲಿಗಳ ಜೊತೆಗೆ ಆನೆಗಳ ಸಂಖ್ಯೆಯಲ್ಲೂ ರಾಜ್ಯದಲ್ಲೇ ಬಂಡೀಪುರ ನಂಬರ್ 1

ಈ ಹುಲಿ ಸಂರಕ್ಷಿತ ಅರಣ್ಯ 50ರ ಸಂಭ್ರಮದಲ್ಲಿದೆ. ಇದೀಗ ಒಂದೊಂದೆ ಮುಕುಟ ಕೂಡ ಈ ಹುಲಿ ಸಂರಕ್ಷಿತ ಅರಣ್ಯದ ಮೆರಗನ್ನು ಮತ್ತಷ್ಟು ಹೆಚ್ಚಿಸ್ತಿದೆ. ಕಳೆದ ತಿಂಗಳಷ್ಟೇ ಭಾರತ ಸರ್ಕಾರ ಹುಲಿ ಗಣತಿ ರಿಲೀಸ್ ಮಾಡಿತ್ತು. 

highest number of elephants in chamarajanagar in karnataka gvd
Author
First Published Aug 10, 2023, 4:36 PM IST

ವರದಿ: ಪುಟ್ಟರಾಜು. ಆರ್.ಸಿ.ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಆ.10): ಈ ಹುಲಿ ಸಂರಕ್ಷಿತ ಅರಣ್ಯ 50ರ ಸಂಭ್ರಮದಲ್ಲಿದೆ. ಇದೀಗ ಒಂದೊಂದೆ ಮುಕುಟ ಕೂಡ ಈ ಹುಲಿ ಸಂರಕ್ಷಿತ ಅರಣ್ಯದ ಮೆರಗನ್ನು ಮತ್ತಷ್ಟು ಹೆಚ್ಚಿಸ್ತಿದೆ. ಕಳೆದ ತಿಂಗಳಷ್ಟೇ ಭಾರತ ಸರ್ಕಾರ ಹುಲಿ ಗಣತಿ ರಿಲೀಸ್ ಮಾಡಿತ್ತು. ಆ ವೇಳೆ ವನ್ಯಜೀವಿ ಸಂರಕ್ಷಣೆಯಲ್ಲಿ  ಭಾರತ ದೇಶದ ಎರಡನೇ ಹಾಗೂ ರಾಜ್ಯದಲ್ಲಿ ನಂಬರ್ ಒನ್ ಹುಲಿ ಸಂರಕ್ಷಿತ ಪ್ರದೇಶ ಎಂಬ ಕೀರ್ತಿಗೆ ಪಾತ್ರವಾಗಿದ್ದ  ಬಂಡೀಪುರ  ಇದೀಗ ರಾಜ್ಯದಲ್ಲಿ ಮತ್ತೇ ನಂಬರ್ ಒನ್ ಸ್ಥಾನ ಪಡೆದಿದೆ. ಅದ್ಯಾಕೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ 50 ನೇ ವರ್ಷದ ಸಂಭ್ರಮದಲ್ಲಿದೆ. ಈ ಸಂಭ್ರಮವೂ ಡಬಲ್ ಆಗುವಂತಹ ಘಟನೆಗಳು ಮತ್ತೇ ಮತ್ತೇ ಮರುಕಳಿಸ್ತಿದೆ. ಕಳೆದ ತಿಂಗಳು ಭಾರತ ಸರ್ಕಾರದಿಂದ ಹುಲಿ ಗಣತಿಯ ವರದಿ ಬಿಡುಗಡೆ ಆಗಿತ್ತು. ಆ ವೇಳೆ ಬಂಡೀಪುರ ಇಡೀ ದೇಶದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಎರಡನೇ ಹಾಗೂ ರಾಜ್ಯದಲ್ಲಿ ನಂಬರ್ ಒನ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಹೊರಹೊಮ್ಮಿತ್ತು. ಈ ಮೂಲಕ ಬಂಡೀಪುರದ ಹೆಮ್ಮೆ ಇಡೀ ರಾಷ್ಟ್ರಕ್ಕೆ ಮತ್ತಷ್ಟು ಪಸರಿಸಿತ್ತು. ಅಂಕಿ ಅಂಶಗಳ ಪ್ರಕಾರ ಬಂಡೀಪುರದಲ್ಲಿ 191 ಹುಲಿಗಳು ಪತ್ತೆಯಾಗಿದ್ದು,ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಅರಣ್ಯ ಎಂದು ಗುರುತಿಸಿಕೊಂಡಿತ್ತು. 

ಅಕ್ರಮ ದಾಖಲೆ ಸೃಷ್ಟಿಮಾಡಿದ್ರೆ ಹೋರಾಟ: ಎಂಟಿಬಿ ನಾಗರಾಜ್‌

ಇದೀಗ ಕಳೆದ ಮೇ ತಿಂಗಳಲ್ಲಿ ಹುಲಿ ಗಣತಿಯಂತೆ ಆನೆ ಗಣತಿಯೂ ಕೂಡ ರಾಜ್ಯದ ಎಲ್ಲಾ ಅರಣ್ಯ ಪದೇಶದಲ್ಲೂ ಕೂಡ ನಡೆದಿತ್ತು.ಇದೀಗ ಅದರ ವರದಿ ಬಿಡುಗಡೆಯಾಗಿದ್ದು ಬಂಡೀಪುರದಲ್ಲಿ 1116 ಹುಲಿಗಳು ಪತ್ತೆಯಾಗಿವೆ.ಆ ಮೂಲಕ ಬಂಡೀಪುರ ರಾಜ್ಯದಲ್ಲಿ ಹುಲಿಯಷ್ಟೇ ಅಲ್ಲದೇ ಆನೆ ಗಣತಿಯಲ್ಲೂ ನಂಬರ್ ಒನ್ ಆಗಿದೆ. ವಿಶ್ವ ಆನೆ ದಿನ ಆಚರಣೆಗೆ ಎರಡು ದಿನ ಇರುವಾಗಲೆ ರಾಜ್ಯ ಮಟ್ಟದ ಆನೆ ಗಣತಿ ವರದಿ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ರಾಜ್ಯದ ಎಲ್ಲಾ ಅರಣ್ಯಗಳಿಗಿಂತ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ನಂ.1 ಸ್ಥಾನ ಕಾಪಾಡಿಕೊಂಡಿದೆ.  

ಇನ್ನೂ ವರದಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 6395 ಆನೆಗಳಿವೆ. ಅದರಲ್ಲಿ ಬಂಡೀಪುರದಲ್ಲಿ 1116, ನಾಗರಹೊಳೆ 831, ಮಹದೇಶ್ವರ ವನ್ಯಧಾಮ 706, ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯದಲ್ಲಿ 619 ಹುಲಿಗಳು ಪತ್ತೆಯಾಗಿವೆ. ಇನ್ನೂ ಈ ಹುಲಿಗಣತಿಯಂತೆ ಆನೆ ಗಣತಿಯನ್ನು ಕೂಡ ಪ್ರತಿ 5 ವರ್ಷಗಳಿಗೊಮ್ಮೆ ಮಾಡಲಾಗ್ತಿದೆ. ನೇರ ಏಣಿಕೆ, ಲದ್ದಿ ಏಣಿಕೆ, ವಾಟರ್ ಹೋಲ್ ಏಣಿಕೆ ಸೇರಿ ಆನೆಗಳ ಗಣತಿ ಅವುಗಳ ಚಲನ ವಲನ ಲಿಂಗದ ಬಗ್ಗೆ ಮಾಹಿತಿ ಕಲೆ ಹಾಕಿ  ಮೂರು ವಿಧಾನದಲ್ಲೂ ಕೂಡ ಗಣತಿ ನಡೆಸಲಾಗಿದೆ. ಬಂಡೀಪುರದಲ್ಲಿ ಆನೆಗಳ ಸಾಂದ್ರತೆ 0.96% ರಷ್ಟಿದ್ದು ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹಲವು ಹಿರಿಮೆ ಪ್ರಾಪ್ತಿಯಾಗಿದ್ದು ಎಲ್ಲವು ನಮ್ಮ ಸಿಬ್ಬಂದಿಗಳು ಹಾಗು ಅರಣ್ಯದಂಚಿನ ಗ್ರಾಮಗಳ ಜನರ ಸಹಕಾರಗಳಿಂದ ಸಾಧ್ಯವಾಗಿದೆ. 

ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಕಾಂಗ್ರೆಸ್‌ ಸರ್ಕಾರದಿಂದ ಕೆಲಸ: ಸಚಿವ ವೆಂಕಟೇಶ್‌

ಈಗ ಆನೆಗಳ ಸಂಖ್ಯೆಯಲ್ಲಿ ರಾಜ್ಯದಲ್ಲೆ ಮೊದಲ ಸ್ಥಾನ ಪಡೆದಿದೆ. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೈಗೊಂಡ ಕ್ರಮದಿಂದಾಗಿ ಹುಲಿ, ಆನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್.. ಒಟ್ಟಾರೆ ರಾಜ್ಯದಲ್ಲಿ ಹುಲಿಯಷ್ಟೇ ಅಲ್ಲದೇ ಆನೆ ಗಣತಿಯಲ್ಲೂ ಕೂಡ ಬಂಡೀಪುರವೇ ನಂಬರ್ ಒನ್ ಆಗಿದ್ದು, ವನ್ಯ ಪ್ರಿಯರ ನೆಚ್ಚಿನ ತಾಣವಾಗಿದೆ. ಸಂಪಧ್ಬರಿತ ಅರಣ್ಯ ಹೊಂದಿರುವ  ಕರುನಾಡು ಆನೆಗಳ ಬೀಡಾಗಿದ್ದು, ಅದರಲ್ಲೂ  ಚಾಮರಾಜನಗರ ಅತಿ ಹೆಚ್ಚು ಹುಲಿ ಹಾಗೂ ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆ ಎಂಬುದೇ ಹೆಮ್ಮೆಯ ವಿಷಯವಾಗಿದೆ.

Follow Us:
Download App:
  • android
  • ios