ಬಳ್ಳಾರಿ: ಅಧಿಕಾರ ವಹಿಸಿಕೊಂಡ ಹತ್ತೇ ದಿನದಲ್ಲಿ ಆಯುಕ್ತೆ ವರ್ಗಾವಣೆ

ಕೆಎಎಸ್‌ ಕಿರಿಯ ಶ್ರೇಣಿ ಎನ್‌. ಮಹೇಶ್‌ಬಾಬು ಅವರನ್ನು ಬಳ್ಳಾರಿ ಪಾಲಿಕೆ ಆಯುಕ್ತರನ್ನಾಗಿಸಿ ವರ್ಗಾಯಿಸಿದ ರಾಜ್ಯ ಸರ್ಕಾರ| ಪ್ರೀತಿ ಗೆಹ್ಲೊಟ್‌ಅವರನ್ನು ಬಳ್ಳಾರಿ ಪಾಲಿಕೆ ಆಯುಕ್ತರನ್ನಾಗಿ ನೇಮಿಸಿ ನ. 12ರಂದು ಆದೇಶ ಹೊರಡಿಸಿದ್ದ ಸರ್ಕಾರ| ಪಾಲಿಕೆಗೆ ಐಎಎಸ್‌ಅಧಿಕಾರಿ ಬಂದಿದ್ದರಿಂದ ತಂತಸಗೊಂಡಿದ್ದ ಬಳ್ಳಾರಿ ಜನತೆ| 

Ballari City Corporation Commissioner Preeti Gehlot Transfer grg

ಬಳ್ಳಾರಿ(ನ.25): ಇಲ್ಲಿನ ಮಹಾನಗರ ಪಾಲಿಕೆಯ ಆಯುಕ್ತರಾಗಿ ಪ್ರೀತಿ ಗೆಹ್ಲೊಟ್ ‌ಅವರು ಅಧಿಕಾರ ವಹಿಸಿಕೊಂಡ ಹತ್ತೇ ದಿನಕ್ಕೆ ವರ್ಗಾವಣೆಗೊಂಡಿದ್ದಾರೆ.  ಕಾರವಾರದ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದ ಕೆಎಎಸ್ ‌ಕಿರಿಯ ಶ್ರೇಣಿ ಎನ್‌. ಮಹೇಶ್‌ಬಾಬು ಅವರನ್ನು ಬಳ್ಳಾರಿ ಪಾಲಿಕೆ ಆಯುಕ್ತರನ್ನಾಗಿಸಿ ಸರ್ಕಾರ ವರ್ಗಾಯಿಸಿದೆ.

ಐಎಎಸ್‌ನ 16ನೇ ಬ್ಯಾಚ್‌ನ ಪ್ರೀತಿ ಗೆಹ್ಲೊಟ್‌ಅವರನ್ನು ಬಳ್ಳಾರಿ ಪಾಲಿಕೆ ಆಯುಕ್ತರನ್ನಾಗಿ ನೇಮಿಸಿ ನ. 12ರಂದು ಸರ್ಕಾರ ಆದೇಶ ಹೊರಡಿಸಿತ್ತು. ನ. 13ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು. ಸೋಮವಾರ ಸಂಜೆ ಇವರನ್ನು ವರ್ಗಾಯಿಸಿರುವುದು ಅಚ್ಚರಿ ಮೂಡಿಸಿದೆ. 

5 ಲಕ್ಷ ಲಂಚ ಪಡೆದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಸಸ್ಪೆಂಡ್‌..!

ಪಾಲಿಕೆಗೆ ಐಎಎಸ್‌ಅಧಿಕಾರಿ ಬಂದಿದ್ದರಿಂದ ನಗರದ ಜನರು ತಂತಸಗೊಂಡಿದ್ದರು. ನಗರದ ಅನೇಕ ಸಮಸ್ಯೆಗಳಿಗೆ ಮುಕ್ತಿ ಸಿಗಲಿವೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಜಿಲ್ಲೆಯ ರಾಜಕಾರಣ, ಅಧಿಕಾರಿಯ ಕಾರ್ಯ ಶುರು ಮುನ್ನವೇ ವರ್ಗಾವಣೆಯ ದಾರಿ ತೋರಿಸಿದೆ. ಐಎಎಸ್‌ಅಧಿಕಾರಿಯಾದರೆ ತಾವು ಹೇಳಿದಂತೆ ಕೇಳುವುದಿಲ್ಲ. ತಮ್ಮ ಕೆಲಸಗಳಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ ರಾಜಕೀಯ ನಾಯಕರು ವರ್ಗಾಯಿಸಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
 

Latest Videos
Follow Us:
Download App:
  • android
  • ios