ಬಾಗಲಕೋಟೆ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಕಡಲೆಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹5,875 ರಂತೆ ಖರೀದಿಸಲಾಗುತ್ತಿದೆ. ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಕಡಲೆ ಖರೀದಿಸಲಾಗುತ್ತಿದೆ.

ಬಾಗಲಕೋಟೆ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ ₹5,875 ರಂತೆ ಪ್ರತಿ ಎಕರೆಗೆ 4 ಕ್ವಿಂಟಲ್ ಮತ್ತು ಗರಿಷ್ಟ ಪ್ರತಿ ರೈತರಿಂದ 40 ಕ್ವಿಂಟಲ್ ಕಡಲೆ ಉತ್ಪನ್ನ ಖರೀದಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಅಧ್ಯಕ್ಷ ಸಂಗಪ್ಪ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

90 ದಿನಗಳವರಗೆ ಖರೀದಿ

ಜಿಲ್ಲೆಯಲ್ಲಿ ಕಡಲೆಕಾಳು ಖರೀದಿಗೆ ನೋಂದಣಿ ಕಾರ್ಯವನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಕಾರ್ಯದ ಜತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳಲು ಆಧಾರ್‌ ಕಾರ್ಡ್‌ ಪ್ರತಿ, ರೈತರಿಗೆ ಸಂಬಂಧಿಸಿದ ಎಫ್ಐಡಿ ಸಂಖ್ಯೆ, ಪಹಣಿ ಹಾಗೂ ಆಧಾರ್‌ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕ್‌ ಪಾಸಬುಕ್ ಪ್ರತಿ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.

ಕಡಲೆ ಉತ್ಪನ್ನ ಖರೀದಿಸುವ ಪೂರ್ವದಲ್ಲಿ ರೈತರು ನೀಡಿರುವ ವಿವರವನ್ನು ಎನ್.ಸಿ.ಸಿ.ಎಫ್ ಸಂಸ್ಥೆಯು ಅಭಿವೃದ್ದಿ ಪಡಿಸಿರುವ ಇ-ಸಂಯುಕ್ತಿ ತಂತ್ರಾಂಶದೊಂದಿಗೆ ಭೂಮಿ ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿದ ನಂತರವೇ ನೋಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಬೆಳೆ ದರ್ಶಕದಲ್ಲಿ ಬೆಳೆ ಬೆಳೆಯದೇ ಇರುವುದು ಕಂಡು ಬಂದಲ್ಲಿ ಅಂತಹ ರೈತರು ಹತ್ತಿರದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆಯನ್ನು ಸಂಪರ್ಕಿಸಿ ಆಕ್ಷೇಪಣೆ ಸಲ್ಲಿಸಿ ಬೆಳೆ ದರ್ಶಕದಲ್ಲಿ ಬೆಳೆ ನಮೂದಿಸಿ ನಂತರ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದ್ದಾರೆ. 

ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ, ಬಾಗಲಕೋಟೆ ಮೊ.ನಂ. 9449864458, 8904315339, 7676951445 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಕಡಲೆ ಗುಣಮಟ್ಟದ ವಿವರ:

ಅನ್ಯ ವಸ್ತುಗಳು (ದೂಳು, ಹರಳು, ಹೊಟ್ಟು) ಶೇ.1, ಬೆರಕೆ ಮಿಶ್ರಣ ಶೇ.3.0, ಹಾಳಾದ ಕಾಳುಗಳು ಶೇ.3.0, ಒಡೆದ ಕಾಳುಗಳು ಶೇ.4.0, ಅಪೂರ್ಣ ಮತ್ತು ಕುಗ್ಗಿದ ಕಾಳುಗಳು ಶೇ.6.0, ಹುಳುಕಾದ ಕಾಳುಗಳು ಶೇ.4.0 ಹಾಗೂ ತೇವಾಂಶ ಶೇ.14 ರಷ್ಟು.ನೋಂದಣಿ.----

ಖರೀದಿ ಕೇಂದ್ರಗಳ ವಿವರ

ಪಿ.ಕೆ.ಪಿ.ಎಸ್ ಹಳ್ಳೂರ (ಎಪಿಎಂಸಿ ಪ್ರಾಂಗಣ, ಬಾಗಲಕೋಟೆ), ಬೆನಕಟ್ಟಿ, ಟಿ.ಎ.ಪಿ.ಸಿ.ಎಂ.ಎಸ್ ಬಾದಾಮಿ, ಪಿ.ಕೆ.ಪಿ.ಎಸ್ ಬಾದಾಮಿ, ಕೆರೂರ, ಎಫ್‌ಪಿಒ ಸರ್ವಬಂಧು ಮುಧೋಳ, ಜಿಎಫ್‌ಪಿಸಿಎಲ್ ಇಳಕಲ್ಲ, ಪಿಕೆಪಿಎಸ್ ನಂದವಾಡಗಿ, ಬೂದಿಹಾಳ, ಕರಡಿ, ಇಲಕಲ್ಲ, ಕಂದಗಲ್ಲ, ಹಿರೇಆದಾಪೂರ, ಕೋಡಿಹಾಳ, ಟಿಎಪಿಸಿಎಂಎಸ್ ಹುನಗುಂದ, ಎಫ್‌ಪಿಒ ಸೂಳೇಭಾವಿ, ಅಮರಾವತಿ, ಪಿಕೆಪಿಎಸ್ ಮುಗನೂರ, ನಾಗೂರ, ಕೂಡಲಸಂಗಮ, ಕೋಟಿಕಲ್, ಟಿಎಪಿಸಿಎಂಎಸ್ ಜಮಖಂಡಿ, ಎಫ್‌ಪಿಓ ತೊದಲಬಾಗಿ, ಟಿಎಪಿಸಿಎಂಎಸ್ ಬೀಳಗಿ, ಪಿಕೆಪಿಎಸ್ ತೆಗ್ಗಿ