MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ: ಎಚ್‌ಡಿ ಕುಮಾರಸ್ವಾಮಿ ಸೇರಿ ಗಣ್ಯರಿಗೆ 'ರಾಯರ ಅನುಗ್ರಹ' ಪ್ರಶಸ್ತಿ ಪ್ರದಾನ!

ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ: ಎಚ್‌ಡಿ ಕುಮಾರಸ್ವಾಮಿ ಸೇರಿ ಗಣ್ಯರಿಗೆ 'ರಾಯರ ಅನುಗ್ರಹ' ಪ್ರಶಸ್ತಿ ಪ್ರದಾನ!

ರಾಯಚೂರಿನ ಮಂತ್ರಾಲಯದಲ್ಲಿ ಜರುಗುತ್ತಿರುವ 'ಗುರು ವೈಭವೋತ್ಸವ' ಸಪ್ತಮಿ ಕಾರ್ಯಕ್ರಮದ ಭವ್ಯ ಫೋಟೋ ಗ್ಯಾಲರಿ ವರದಿ ಇಲ್ಲಿದೆ 

2 Min read
Author : Ravi Janekal
Published : Feb 22 2026, 11:00 PM IST
Share this Photo Gallery
  • FB
  • TW
  • Linkdin
  • Whatsapp
16
ಯೋಗೀಂದ್ರ ಸಭಾಂಗಣದಲ್ಲಿ ಗಣ್ಯರ ಸಮಾಗಮ
Image Credit : Asianet News

ಯೋಗೀಂದ್ರ ಸಭಾಂಗಣದಲ್ಲಿ ಗಣ್ಯರ ಸಮಾಗಮ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 405ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 431ನೇ ಜಯಂತ್ಯೋತ್ಸವದ ಅಂಗವಾಗಿ 'ಗುರು ವೈಭವೋತ್ಸವ' ಕಳೆಗಟ್ಟಿದೆ. ಉತ್ಸವದ 5ನೇ ದಿನದ ಅಂಗವಾಗಿ ಶ್ರೀಮಠದ ಯೋಗೀಂದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕೆಎಸ್‌ಸಿಎ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ರಾಯರ ದರ್ಶನ ಪಡೆದರು.

26
'ಸಂಸ್ಕೃತಿ ನಾಶವಾಗುತ್ತಿದೆ ಎಂಬ ನೋವಿದೆ': ಕುಮಾರಸ್ವಾಮಿ ಕಳವಳ
Image Credit : Asianet News

'ಸಂಸ್ಕೃತಿ ನಾಶವಾಗುತ್ತಿದೆ ಎಂಬ ನೋವಿದೆ': ಕುಮಾರಸ್ವಾಮಿ ಕಳವಳ

ವೇದಿಕೆ ಮೇಲೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, "ದೇಶ ಆರ್ಥಿಕವಾಗಿ ಸದೃಢವಾಗುತ್ತಿದ್ದರೂ, ನಮ್ಮ ಪೂರ್ವಜರು ನೀಡಿದ ಸಂಸ್ಕೃತಿ ಮತ್ತು ಕೌಟುಂಬಿಕ ಬಾಂಧವ್ಯಗಳು ನಾಶವಾಗುತ್ತಿರುವುದು ನೋವು ತರುತ್ತಿದೆ. ಇಂದು ಮಕ್ಕಳಿಂದಲೇ ತಂದೆ-ತಾಯಿಗಳು ನೋವು ಅನುಭವಿಸುವಂತಾಗಿದೆ. ಇಂತಹ ವಾತಾವರಣವನ್ನು ತಿದ್ದುವ ಶಕ್ತಿ ಕೇವಲ ಗುರುಗಳಿಗೆ ಮತ್ತು ರಾಯರ ಅನುಗ್ರಹಕ್ಕೆ ಮಾತ್ರ ಇದೆ" ಎಂದು ಭಾವುಕರಾಗಿ ನುಡಿದರು

Related Articles

Related image1
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
Related image2
ಮಂತ್ರಾಲಯ ಶ್ರೀಗುರು ವೈಭವೋತ್ಸವಕ್ಕೆ ಚಾಲನೆ । 405ನೇ ಪಟ್ಟಾಭಿಷೇಕ । ಫೆ.24ಕ್ಕೆ 431ನೇ ವರ್ಧಂತೋತ್ಸವ
36
ಸಾಧಕರಿಗೆ 'ರಾಯರ ಅನುಗ್ರಹ ಪ್ರಶಸ್ತಿ' ಗೌರವ
Image Credit : Asianet News

ಸಾಧಕರಿಗೆ 'ರಾಯರ ಅನುಗ್ರಹ ಪ್ರಶಸ್ತಿ' ಗೌರವ

ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ವರು ಸಾಧಕರಿಗೆ ಪ್ರತಿಷ್ಠಿತ 'ರಾಯರ ಅನುಗ್ರಹ ಪ್ರಶಸ್ತಿ' ನೀಡಿ ಸನ್ಮಾನಿಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ವೆಂಕಟೇಶ್ ಪ್ರಸಾದ್ ಅವರಿಗೆ ಶ್ರೀಗಳು ಫಲಪುಷ್ಪ ನೀಡಿ, ರಾಯರ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ದೃಶ್ಯ ಭಕ್ತರ ಕಣ್ಮನ ಸೆಳೆಯಿತು.

46
'ಗುರು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವವರು': ಶ್ರೀಗಳ ಸಂದೇಶ
Image Credit : Asianet News

'ಗುರು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವವರು': ಶ್ರೀಗಳ ಸಂದೇಶ

ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು, "ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರು ಎಂದರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು" ಎಂದು ಬಣ್ಣಿಸಿದರು. "ವಿದ್ಯುತ್ ಹೋದಾಗ ಜನರೇಟರ್ ಆನ್ ಮಾಡಿ ಬೆಳಕು ಕೊಡುವವನೂ ಒಬ್ಬ ಗುರುವೆನಿಸಿಕೊಳ್ಳುತ್ತಾನೆ. ಲೌಕಿಕ ಮತ್ತು ತತ್ವಜ್ಞಾನದ ಮೂಲಕ ಬದುಕಿಗೆ ಬೆಳಕು ನೀಡುವ ನಿಜವಾದ ಗುರುಗಳಲ್ಲಿ ರಾಯರು ಅಗ್ರಮಾನ್ಯರು" ಎಂದು ಗುರುವಿನ ಮಹತ್ವವನ್ನು ವಿವರಿಸಿದರು.

56
ಮಣ್ಣಿನ ಮಗ ದೇವೇಗೌಡರು ಹಾಗೂ ಎಚ್‌ಡಿಕೆ ಸೇವೆಗೆ ಮೆಚ್ಚುಗೆ
Image Credit : Asianet News

ಮಣ್ಣಿನ ಮಗ ದೇವೇಗೌಡರು ಹಾಗೂ ಎಚ್‌ಡಿಕೆ ಸೇವೆಗೆ ಮೆಚ್ಚುಗೆ

ಇದೇ ವೇಳೆ ಶ್ರೀಗಳು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಜನಸೇವೆಯನ್ನು ಶ್ಲಾಘಿಸಿದರು. "ದೊಡ್ಡಗೌಡರು ಮಣ್ಣಿನ ಮಗನಾಗಿ ದೇಶ ಮೆಚ್ಚುವಂತೆ ಆಡಳಿತ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿ, ಈಗ ಕೇಂದ್ರ ಮಂತ್ರಿಯಾಗಿ ಧರ್ಮ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ" ಎಂದು ಶ್ರೀಗಳು ಕೊಂಡಾಡಿದರು.

66
'ನಂಬಿ ಕೆಟ್ಟವರಿಲ್ಲವೋ' ಎಂದು ರಾಯರನ್ನು ಸ್ಮರಿಸಿದ ವೆಂಕಟೇಶ್ ಪ್ರಸಾದ್
Image Credit : Asianet News

'ನಂಬಿ ಕೆಟ್ಟವರಿಲ್ಲವೋ' ಎಂದು ರಾಯರನ್ನು ಸ್ಮರಿಸಿದ ವೆಂಕಟೇಶ್ ಪ್ರಸಾದ್

'ನಂಬಿ ಕೆಟ್ಟವರಿಲ್ಲವೋ' ಎಂದು ರಾಯರನ್ನು ಸ್ಮರಿಸಿದ ವೆಂಕಟೇಶ್ ಪ್ರಸಾದ್

ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ತಮ್ಮ ಭಾಷಣವನ್ನು 'ನಂಬಿ ಕೆಟ್ಟವರಿಲ್ಲವೋ...' ಎಂಬ ಪುರಂದರದಾಸರ ಕೀರ್ತನೆಯ ಸಾಲುಗಳೊಂದಿಗೆ ಆರಂಭಿಸಿ ರಾಯರಿಗೆ ನಮಿಸಿದರು. "ನನ್ನ ಕ್ರಿಕೆಟ್ ಸಾಧನೆಯ ಹಿಂದೆ ರಾಯರ ಆಶೀರ್ವಾದವಿದೆ. 1998ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ನನಗೆ ವಿಶ್ವದ ಬೆಸ್ಟ್ ಕ್ರಿಕೆಟರ್ ಪ್ರಶಸ್ತಿ ಲಭಿಸಿತ್ತು. ಇಲ್ಲಿ ನಾವು ಏನನ್ನು ಕೇಳಿಕೊಳ್ಳುತ್ತೇವೆಯೋ ಅದು ಖಂಡಿತ ಈಡೇರುತ್ತದೆ" ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮಂತ್ರಾಲಯ
ರಾಯಚೂರು
ಹೆಚ್.ಡಿ. ಕುಮಾರಸ್ವಾಮಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಫೆಬ್ರವರಿ 23 ರಿಂದ ಮಾರ್ಚ್ 1 2026 ರವರೆಗೆ ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ವೃತ್ತಿ ಪ್ರಗತಿ ಮತ್ತು ಆರ್ಥಿಕ ಲಾಭ
Recommended image2
ಮಾರ್ಚ್ 3 ರಂದು ಚಂದ್ರಗ್ರಹಣ, ಈ ಆರು ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ, ಉದ್ಯೋಗ ಲಾಭ, ಆಸ್ತಿ ಲಾಭ!
Recommended image3
ಗುರು-ಶುಕ್ರರಿಂದ ಕೇಂದ್ರ ದೃಷ್ಟಿ ಯೋಗ: ಈ 5 ರಾಶಿಗಳಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
Related Stories
Recommended image1
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
Recommended image2
ಮಂತ್ರಾಲಯ ಶ್ರೀಗುರು ವೈಭವೋತ್ಸವಕ್ಕೆ ಚಾಲನೆ । 405ನೇ ಪಟ್ಟಾಭಿಷೇಕ । ಫೆ.24ಕ್ಕೆ 431ನೇ ವರ್ಧಂತೋತ್ಸವ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved