ನಗರದಲ್ಲಿ ಆಸ್ತಿ ತೆರಿಗೆ ಪಾವತಿಸದ ಮಾಲೀಕರ ವಿವರನ್ನು ಬೀದಿ ಬದಿಯಲ್ಲಿ ಅಳವಡಿಸಲಾಗುತ್ತಿರುವ ‘ರೋಡ್‌ ರೀಡರ್‌ ಕ್ಯೂಆರ್‌ ಕೋಡ್‌’ನಲ್ಲಿ ಬಹಿರಂಗಪಡಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ‘ರೋಡ್‌ ರೀಡರ್‌ ಕ್ಯೂಆರ್‌ ಕೋಡ್‌’ನಲ್ಲಿ ಆ ರಸ್ತೆಯಲ್ಲಿ ಎಷ್ಟುಆಸ್ತಿಗಳು ಇದೆ. 

ಬೆಂಗಳೂರು (ಜು.14): ನಗರದಲ್ಲಿ ಆಸ್ತಿ ತೆರಿಗೆ ಪಾವತಿಸದ ಮಾಲೀಕರ ವಿವರನ್ನು ಬೀದಿ ಬದಿಯಲ್ಲಿ ಅಳವಡಿಸಲಾಗುತ್ತಿರುವ ‘ರೋಡ್‌ ರೀಡರ್‌ ಕ್ಯೂಆರ್‌ ಕೋಡ್‌’ನಲ್ಲಿ ಬಹಿರಂಗಪಡಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ‘ರೋಡ್‌ ರೀಡರ್‌ ಕ್ಯೂಆರ್‌ ಕೋಡ್‌’ನಲ್ಲಿ ಆ ರಸ್ತೆಯಲ್ಲಿ ಎಷ್ಟುಆಸ್ತಿಗಳು ಇದೆ. ಆಸ್ತಿಗಳಿಗೆ ಬಿಬಿಎಂಪಿಯಿಂದ ನೀಡಲಾದ ಪಿಐಡಿ ಸಂಖ್ಯೆ, ಈ ಪೈಕಿ ಎಷ್ಟುಮಂದಿ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನಷ್ಟುಮಂದಿ ಆಸ್ತಿ ತೆರಿಗೆ ಪಾವತಿ ಮಾಡುವುದು ಬಾಕಿ ಇದೆ ಎಂಬ ಮಾಹಿತಿ ಅಳವಡಿಕೆ ಮಾಡುವುದಕ್ಕೆ ಚಿಂತನೆ ನಡೆಸಲಾಗಿದೆ. 

ಈ ರೀತಿ ಮಾಡುವುದರಿಂದ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿ ಬಗ್ಗೆ ಜಾಗೃತಿ ಮೂಡಲಿದೆ. ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ವಸೂಲಿ ಆಗಲಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ನಗರದ ಪ್ರತಿ ರಸ್ತೆಯಲ್ಲಿ ರೋಡ್‌ ರೀಡರ್‌ ಕ್ಯೂ ಆರ್‌ ಕೋಡ್‌ ಅಳವಡಿಕೆ ಕೆಲಸ ನಡೆಯುತ್ತಿದ್ದು, ಸದ್ಯ, ದಕ್ಷಿಣ ವಲಯದ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಶೇ.70 ರಷ್ಟು ರಸ್ತೆಗಳಲ್ಲಿ ಈಗಾಗಲೇ ಕ್ಯೂ ಆರ್‌ ಕೋಡ್‌ ಅಳವಡಿಕೆ ಪೂರ್ಣಗೊಳಿಸಲಾಗಿದೆ. 

ಗಂಡ ಹೆಂಡತಿ ಜಗಳಕ್ಕೆ ಕಾರು ಪಲ್ಟಿ: ತಪ್ಪಿದ ಅನಾಹುತ

ಉಳಿದ ವಲಯದಲ್ಲಿ ಶೀಘ್ರದಲ್ಲಿ ಕ್ಯೂ ಆರ್‌ ಕೋಡ್‌ ಅಳವಡಿಕೆ ಆರಂಭಿಸಲಿದೆ. ಒಟ್ಟು 1.5 ಕೋಟಿ ರು. ವೆಚ್ಚದಲ್ಲಿ ಈ ಕಾರ್ಯ ನಿರ್ವಹಿಸುತ್ತಿದೆ. ಅಳವಡಿಸಲಾಗುತ್ತಿರುವ ಕ್ಯೂಆರ್‌ ಕೋಡ್‌ನ್ನು ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿದರೆ, ರಸ್ತೆಯ ಹೆಸರು, ರಸ್ತೆಯ ಇತಿಹಾಸ, ತ್ಯಾಜ್ಯ ಸಂಗ್ರಹ ಮಾಡುವವರ ವಿವರ, ರಸ್ತೆ ಉಸ್ತುವಾರಿ ಜವಾಬ್ದಾರಿ ಹೊಂದಿರುವ ಅಧಿಕಾರಿ ಹೆಸರು, ಕೊನೆಯ ಬಾರಿ ಡಾಂಬರೀಕರಣ ಮಾಡಿದ ವಿವರ ಲಭ್ಯವಾಗಲಿದೆ.

ಜುಲೈ 28ಕ್ಕೆ ಕೆಂಪೇಗೌಡ ಜಯಂತಿ: ಬಿಬಿಎಂಪಿಯಿಂದ ಆಯೋಜಿಸುವ ನಾಡಪ್ರಭು ಕೆಂಪೇಗೌಡ ದಿನಾಚರಣೆಯ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 28 ರಂದು ನಡೆಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ. ಈ ಕುರಿತು ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ವಲಯ ಆಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಜುಲೈ 28 ರ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಡಾ.ರಾಜಕುಮಾರ್‌ ಗಾಜಿನ ಮನೆ ಸಭಾಂಗಣದಲ್ಲಿ ಸಮಾರಂಭ ನಡೆಸುವುದಕ್ಕೆ ತೀರ್ಮಾನಿಸಿದ್ದಾರೆ. ಕಾರ್ಯಕ್ರಮ ಆಯೋಜನೆಗೆ ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಇದೇ ವೇಳೆ ನಿರ್ದೇಶಿಸಿದ್ದಾರೆ. 

ಸೋಮವಾರ ಪುರಸ್ಕೃತ ಪಟ್ಟಿ: ಇನ್ನು ಈ ಸಮಾರಂಭದಲ್ಲಿ 198 ಮಂದಿ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ. ಈ ಸಂಬಂಧಿಸಿದಂತೆ ಈಗಾಗಲೇ ವಲಯ ಆಯುಕ್ತರಿಗೆ ವಾರ್ಡ್‌ ವಾರು ತಲಾ ಮೂರು ಸಾಧಕರ ಹೆಸರು ಶಿಫಾರಸು ಮಾಡುವಂತೆ ಸೂಚಿಸಲಾಗಿದೆ. ಪುರಸ್ಕೃತ ಹೆಸರು ಶಿಫಾರಸು ಮಾಡುವುದಕ್ಕೆ ಸೋಮವಾರ ಕೊನೆಯ ದಿನವಾಗಿದೆ.

ಜಿಲೆಟಿನ್‌ ಬಳಕೆ: ಶಾಸಕ ಮುನಿರತ್ನ ಸೇರಿ 5 ಮಂದಿ ಮೇಲೆ ಕೇಸ್‌

ಆಯ್ಕೆ ಸಮಿತಿ ರಚನೆ?: ಪುರಸ್ಕೃತರ ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ಸೋಮವಾರದ ನಂತರ ರಚನೆ ಮಾಡುವುದಕ್ಕೆ ಮುಖ್ಯ ಆಯುಕ್ತರು ನಿರ್ಧರಿಸಲಾಗಿದೆ. ಸಮಿತಿಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರು ಸೇರಿದಂತೆ ಐದರಿಂದ ಆರು ಮಂದಿ ಸದಸ್ಯರು ಇರಲಿದ್ದಾರೆ.