ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಸ್ಕರ ಮಯ್ಯ ನಿಧನ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿಂದಿ ಸಾಹಿತಿ ಡಾ.ಜಿ.ಭಾಸ್ಕರ ಮಯ್ಯ ಕೊರೋನಾ ಸೋಂಕಿನಿಂದ ಇಂದು ಮುಂಜಾನೆ ನಿಧನರಾದರು. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು ಹಿಂದಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದರು.
ಉಡುಪಿ (ಮೇ.06): ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿಂದಿ ಸಾಹಿತಿ ಡಾ.ಜಿ.ಭಾಸ್ಕರ ಮಯ್ಯ (71)ಅವರು ಇಂದು ಮುಂಜಾನೆ ನಿಧನರಾದರು.
ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನಿಧನರಾದರು.
ಕುಂದಾಪುರ ಭಂಡಾರ್ಕಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಅವರು 70ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ್ದರು.
ಬೆಂಗ್ಳೂರಿಗಿಂತ ಜಿಲ್ಲೆಗಳಲ್ಲೇ ಅಧಿಕ ಸಾವು! .
1952ರಲ್ಲಿ ಬ್ರಹ್ಮಾವರದಲ್ಲಿ ಜನಿಸಿದ್ದ ಮಯ್ಯ ಅವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪದವಿ ಪಡೆದರು. ಬರಹಗಾರ, ಸ್ಕಾಲರ್, ಅನುವಾದಕರಾಗಿ ಗುರುತಿಸಿಕೊಂಡಿದ್ದರು. 52ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು ಅದರಲ್ಲಿ 20 ಹಿಂದಿ ಪುಸ್ತಕಗಳಾಗಿದೆ.
ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ನಿಧನ ...
ಪ್ರಮುಖ ಕೃತಿಗಳು : ಶಂಬಾ. ಆಧುನಿಕ್ ಸಾಹಿತ್ಯ ಔರ್ ಪ್ರಯಾಗ್ವಾದ, ಬಹುರಾಷ್ಟ್ರೀಯ ಆರ್ಥಿಕತೆಯ ಪರಿಣಾಮಗಳು, ಜೈನ ದರ್ಶನ, ಜ್ಯೋತಿಷ್ಯ ಒಂದು ಅಧ್ಯಯನ. ಸೇರಿದಂತೆ 50 ಕ್ಕೂ ಹೆಚ್ಚು ಪುಸ್ತಕಗಳ ರಚಿಸಿದ್ದಾರೆ.
ಕನ್ನಡ, ಹಿಂದಿ, ಇಂಗ್ಲೀಷ್, ಸಂಸ್ಕೃತ ಸೇರಿದಂತೆ ವಿವಿಧ ಭಾಷೆಗಳಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟ ಮಹಾ ವಿಚಾರ ರತ್ನ ಗೌರವ ಸಂದಿತ್ತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona