ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ನಿಧನ

ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ಕೊರೋನಾ ಮಹಾಮಾರಿಗೆ ತುತ್ತಾಗಿದ್ದಾರೆ. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

Kannada Poet Jarganahalli shivashankar passes Away snr

ಬೆಂಗಳೂರು (ಮೇ.05):  ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ (72)   ಇಂದು ಬೆಳಗ್ಗೆ ನಿಧನರಾಗಿದ್ದಾರೆ. 

ಕೆಲ ದಿನಗಳಿಂದ ಕೊರೋನಾ ಮಹಾಮಾರಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. 

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದ ಶಿವಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯೂ ಆಗಿ ಕಾರ್ಯನಿರ್ವಹಿಸಿದ್ದರು. 

1949ರಲ್ಲಿ ಬೆಂಗಳೂರು ಸಮೀಪದ ಜರಗನಹಳ್ಳಿಯಲ್ಲಿ ಜನಿಸಿದ ಶಿವಶಂಕರ್  ಅವರು ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದುಕೊಂಡು  ಬ್ಯಾಂಕ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.  ಬಳಿಕ ಸ್ವಯಂ ನಿವೃತ್ತಿ ಪಡೆದುಕೊಂಡು ಕನ್ನಡ ಸಾಹಿತ್ಯ ಕೃಷಿಗೆ ಇಳಿದರು.  ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಬರೆದಿದ್ದಾರೆ. ಪ್ರಮುಖವಾಗಿ  ಮಳೆ ,  ಆಲಿಕಲ್ಲು ಹಾಗೂ ದೇವರ ನೆರಳು , ಝರಿ  ಮುಂತಾದ ಕವನ ಸಂಕಲಗಳನ್ನು ನಾಡಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವರ ಕೆಲವು ಕವನ ಸಂಕಲನಗಳು ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ.

ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ ..
 
ಡಿಸಿಎಂ ಸಂತಾಪ 

ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ನಿಧನಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಸಂತಾಪ ಸೂಚಿಸಿದ್ದು  ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ನಿಧನ ದುಃಖವುಂಟು ಮಾಡಿದೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ ಸದಸ್ಯರಿಗೆ ಹಾಗೂ ಅವರ ಸಾಹಿತ್ಯಾಭಿಮಾನಿಗಳಿಗೆ ನೀಡಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.

 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios