Asianet Suvarna News Asianet Suvarna News

ಬೆಂಗಳೂರು: ಸುವರ್ಣ ನ್ಯೂಸ್‌ ಔಟ್‌ಪುಟ್ ಮುಖ್ಯಸ್ಥೆ ಎಂ.ಸಿ.ಶೋಭಾಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ!

ಪ್ರೆಸ್ ಕ್ಲಬ್‌ನಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ 2022ನೇ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು ಎಂ.ಸಿ. ಶೋಭಾ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 

Asianet Suvarna News Journalist MC Shobha Got Press Club Annual Award grg
Author
First Published Dec 31, 2022, 2:14 PM IST

ಬೆಂಗಳೂರು(ಡಿ.31):  ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಔಟ್ ಪುಟ್ ಎಡಿಟರ್ ಎಂ.ಸಿ. ಶೋಭಾ ಅವರು ಭಾಜನರಾಗಿದ್ದಾರೆ.  

ಇಂದು(ಶನಿವಾರ) ನಗರದ ಪ್ರೆಸ್ ಕ್ಲಬ್‌ನಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ 2022ನೇ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು ಎಂ.ಸಿ. ಶೋಭಾ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 

ಮಾಧ್ಯಮದ ವಿವಿಧ ವಿಭಾಗದ 32 ಸಾಧಕರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆಗೆ 2022 ರ ವರ್ಷದ ವ್ಯಕ್ತಿ ಪ್ರಶಸ್ತಿ. ಮುರುಗೇಶ್ ನಿರಾಣಿ ಹಾಗೂ ಎಸ್.ಟಿ ಸೋಮಶೇಖರ್ ಅವರು ವಿಶೇಷ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. 

ಷಡಕ್ಷರಿಯವರ ಪುಸ್ತಕಗಳನ್ನು ಕ್ರೋಡೀಕರಿಸಿ ಪರಿವಿಡಿ ಮಾಡಿದರೆ ಓದುಗರಿಗೆ ಅನುಕೂಲ: ರವಿ ಹೆಗಡೆ

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಮುರುಗೇಶ್ ನಿರಾಣಿ, ಎಸ್.ಟಿ.ಸೋಮಶೇಖರ್, ವಿಶ್ರಾಂತ ನ್ಯಾಯಮೂರ್ತಿ ಡಾ.ಗೋಪಾಲಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. 

Follow Us:
Download App:
  • android
  • ios