ಕೋಲಾರ(ಅ.01): ನೂತನ ಮೋಟಾರ್‌ ಕಾಯ್ದೆಯಡಿ ಪರವಾನಗಿ, ಹೆಲ್ಮೆಟ್‌, ವಿಮೆ ಇತ್ಯಾದಿ ದಾಖಲೆ ಇಲ್ಲದೆ ರಸ್ತೆಗೆ ಇಳಿದಿದ್ದ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದ ಪೊಲೀಸರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಪೊಲೀಸರು ನಾನಾ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಿ, ದಾಖಲೆಗಳಿಲ್ಲದ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದರು. ಈ ವೇಳೆ ಬಂದ ಕಾರೊಂದನ್ನು ತಡೆದು ವಾಹನ ಚಾಲಕನನ್ನು ತಪಾಸಣೆ ನಡೆಸಿದಾಗ ಸೀಟ್‌ ಬೆಲ್ಟ್‌ ಇಲ್ಲದಿರುವುದು ಕಂಡು ಬಂದಿದೆ. ಆಗ ಪೊಲೀಸರು ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ದಂಡ ಪಾವತಿಸಿದ ಚಾಲಕ, ಎಎಸ್‌ಐ ಸಮವಸ್ತ್ರದ ಮೇಲೆ ನಾಮಫಲಕ ಇಲ್ಲದಿರುವುದನ್ನು ಗಮನಿಸಿ ಪ್ರಶ್ನಿಸಿದ್ದಾನೆ.

ಹೋಂಗಾರ್ಡ್‌ ಮೇಲೆ ಹಲ್ಲೆ

ಇದೇ ಸಮಯದಲ್ಲಿ ದಾಖಲೆಗಳಿಲ್ಲದ ನಾನಾ ವಾಹನ ಸವಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಅಲ್ಲಿಯೇ ಇದ್ದ ಗೃಹ ರಕ್ಷಕನ್ನೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಜನರು ಗುಂಪು ಜಮಾಯಿಸಿ ಎಎಸ್‌ಐ ರಾಮಚಂದ್ರ ಅವರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣ ಗಮನಸಿ ಎಎಸ್‌ಐ ಓಡಿ ಹೋಗಿ ಪೊಲೀಸ್‌ ಠಾಣೆಯಲ್ಲಿ ರಕ್ಷಣೆ ಪಡೆದರು.

ಠಾಣೆ ಮುಂದೆ ಜಮಾಯಿಸಿದ ಗುಂಪು

ಅದರೂ ಪೊಲೀಸರನ್ನು ಹಿಂಬಾಲಿಸಿ ಬಂದು ಜನರ ಗುಂಪು ಠಾಣೆ ಮುಂಭಾಗದಲ್ಲಿ ಗುಂಪುಕಟ್ಟಿಕೊಂಡು ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದರು. ರವಿ ಎಂಬಾತ ಎಎಸ್‌ಐ ಅವರನ್ನು ಠಾಣೆ ಬಾಗಿಲ ಬಳಿಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ದಿಢೀರನೇ ತಲೆಎತ್ತಿದ ಗುಡಿಸಲುಗಳು: ಮಕ್ಕಳ ಉದ್ಯಾನ ಕಬಳಿಸಲು ಭೂಗಳ್ಳರ ಹುನ್ನಾರ

ಠಾಣೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಬಹುತೇಕ ಪೊಲೀಸರು ಗಣ್ಯರ ಬಂದೋಬಸ್ತ್‌ಗೆ ಹೋಗಿದ್ದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇತ್ತು. ನಂತರ ಎಎಸ್‌ಐ ಗೌಡ ಅವರು ಸಾರ್ವಜನಿಕರ ಮನವೊಲಿಸುವಲ್ಲಿ ಯಶಸ್ವಿಯಾದರು.

ಡಿಕೆಶಿ ಬಂಧನ ವಿರೋಧಿಸಿದಕ್ಕೆ ಕಾಂಗ್ರೆಸ್‌ ಶಾಸಕನ ಮೇಲೆ IT ದಾಳಿ: ಹೀಗೊಂದು ಗುಲ್ಲು