ಕೋಲಾರ, (ಸೆ.30): ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ದಾಳಿ ಮಾಡಿದ್ದಾರೆ ಗುಲ್ಲೆದ್ದಿದೆ. ಕೋಲಾರದ ಬಂಗಾರಪೇಟೆಯಲ್ಲಿ ಇದೇ ಸುದ್ದಿ. 

ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಸಿರುವ ನಾರಾಯಣಸ್ವಾಮಿ, ಇದೊಂದು ಸುಳ್ಳು ಸುದ್ದಿ. ಆ ರೀತಿ ಏನು ಇಲ್ಲ. ಯಾರೋ ಗುಲ್ಲು ಎಬ್ಬಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಡಿಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಅಜ್ಜಿ ನಾಗಿನ್ ಡ್ಯಾನ್ಸ್..ಫುಲ್ ವೈರಲ್

ಡಿಕೆಶಿ ಬಂಧನ ವಿರೋಧಿಸಿ ನಡೆಸಿದ ಪ್ರತಿಭಟನೆ ಮಾಡಿದಕ್ಕೆ ಐಟಿ ರೈಡ್‌ ಆಗಿದೆ ಎನ್ನವ ಸುದ್ದಿ ಇಂದು (ಮಂಗಳವಾರ) ಬೆಳಗ್ಗೆಯಿಂದ ಕೋಲಾರದ ಬಂಗಾರಪೇಟೆಯಲ್ಲಿ ಹರಿದಾಡಿತ್ತು.

ಡಿಕೆಶಿ ಬಂಧನ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಅಮಿತ್ ಶಾ ಕೊಲೆಗಡುಕು ಎಂದು ಭಾಷಣ ಮಾಡಿದ್ದಕ್ಕೆ ನಾರಾಯಣಸ್ವಾಮಿ ಮನೆ ಮೇಲೆ ಐಟಿ ದಾಳಿ ನಡೆದಿದೆ. ಹೀಗೆ ಜನರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದು, ಈ ಸುದ್ದಿ ಬಂಗಾರಪೇಟೆಯಲ್ಲಿ ಹಬ್ಬಿತ್ತು.

ಇದೀಗ ಸ್ವತಃ ನಾರಾಯಣಸ್ವಾಮಿ ಸ್ಪಷ್ಟನೆ ನೀಡುವ ಮೂಲಕ ಈ ವದಂತಿಗೆ ಅಂತ್ಯ ಹಾಡಿದರು.

 ಕಾಂಗ್ರೆಸ್ ನಾಯಕರ ಡಿಕೆ ಶಿವಕುಮಾರ್‌ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಂತ ಪ್ರತಿಭಟನೆ ಮಾಡಿತ್ತು. ಪ್ರತಿಭಟನೆ ವೇಳೆ ನಾರಾಯಣಸ್ವಾಮಿ ಅವರು ಅಮಿತ್ ಶಾ ಕೊಲೆಗಡುಕ ಎಂದು ಭಾಷಣದಲ್ಲಿ ಹೇಳಿದ್ದರು.