ದಾವಣಗೆರೆ: ದರೋಡೆ ಹಾವಳಿ ತಡೆಯಲು ಹೋದ ಪೊಲೀಸರ ಮೇಲೆ ದಾಳಿ

Armed robbers Attacks Police , Davanagere
Highlights

ಜನರನ್ನು ಅಡ್ಡಗಡ್ಡಿ ದರೋಡೆ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ತಂಡ ಪೊಲೀಸರನ್ನೇ ಅಡ್ಡ ಹಾಕಿ ದರೋಡೆ ಮಾಡಲು ಯತ್ನಿಸಿದೆ. ಆಮೇಲೆ ಎದ್ದನೋ ಬಿದ್ದನೋ ಎಂದು ಜಾಗ ಖಾಲಿ ಮಾಡಿದೆ.

ದಾವಣಗೆರೆ[ಜು.25]  ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಬಳಿ ಮಧ್ಯರಾತ್ರಿ ಪೊಲೀಸರನ್ನೇ ಅಡ್ಡಗಟ್ಟಿ ದರೋಡೆಗೆ ಯತ್ನಿಸಲಾಗಿದೆ. ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಕಳ್ಳರನ್ನು ಹಿಡಿಯಲು ಪೊಲೀಸರು ಯೋಜನೆ ರೂಪಿಸಿದ್ದರು.

ಸ್ಥಳಕ್ಕೆ ಧಾವಿಸಿದ ಪೊಲೀಸರನ್ನು ಮೊದಲಿಗೆ ಪ್ರಯಾಣಿಕರು ಎಂದು ಭಾವಿಸಿದ ದರೋಡೆಕೋರರು ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಆದರೆ ವಿಷಯ ಅರಿತು 10 ಮಂದಿ ದರೋಡೆಕೋರರು ಪರಾರಿಯಾಗಿದ್ದಾರೆ.

ಬಾಗಿಲು ಮುರಿಯುವ ಮುನ್ನ ಕಳ್ಳನ ಸಖತ್ ಸ್ಟೆಪ್ಸ್: ವೈರಲ್ ವಿಡಿಯೋ

ಪ್ರಕರಣಕ್ಕೆ ಸಂಬಂಧಿಸಿ ಹೆಬ್ಬಳಗೆರೆ ಗ್ರಾಮದ ಯತೀಶ್ ಎಂಬಾತನ್ನು ಬಂಧಿಸಲಾಗಿದೆ.  ಚಿತ್ರದುರ್ಗ - ಶಿವಮೊಗ್ಗ ರಸ್ತೆಯಲ್ಲಿ ವಾಹನ ಸವಾರರ ದರೋಡೆ ಮಾಡುತ್ತಿದ್ದ ತಂಡದ ಬಳಿ ಇದ್ದ ಬ್ಯಾಟರಿ, ಖಾರದಪುಡಿ. ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.ಜನರನ್ನು ಅಡ್ಡಗಡ್ಡಿ ದರೋಡೆ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ತಂಡ ಪೊಲೀಸರನ್ನೇ ಅಡ್ಡ ಹಾಕಿ ದರೋಡೆ ಮಾಡಲು ಯತ್ನಿಸಿದೆ. ಆಮೇಲೆ ಎದ್ದನೋ ಬಿದ್ದನೋ ಎಂದು ಜಾಗ ಖಾಲಿ ಮಾಡಿದೆ.

loader