ಆತನೇನೂ ಮೈಕಲ್ ಜಾಕ್ಸನ್ ಅಲ್ಲ, ನೃತ್ಯ ಪಟುವೂ ಅಲ್ಲ. ಆದರೆ ಆ ಕ್ಷಣದ ಖುಷಿ ಅವನನ್ನು ಕುಣಿಯುವಂತೆ ಮಾಡಿತ್ತು. ಪೊಲೀಸರು ತಮ್ಮನ್ನು ಹಿಂಬಾಲಿಸಿಲ್ಲ ಎಂಬುದನ್ನು ಅರಿತುಕೊಂಡಿದ್ದವ ಇರಲಿ ಎಂದು ಒಂದೆರಡು ಸ್ಟೆಪ್ ಹಾಕಿದ್ದ..
ನವದೆಹಲಿ[ಜು.12] ಆ ಕಳ್ಳರಿಗೆ ನಾವು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಿದ್ದೇವೆ. ಯಾರು ತಮ್ಮನ್ನು ಹಿಂಬಾಲಿಸುತ್ತಿಲ್ಲ ಎಂಬುದು ಗೊತ್ತಿತ್ತು.
ದೆಹಲಿಯ ವಾಣಿಜ್ಯ ಸಂಕೀರ್ಣವೊಂದಕ್ಕೆ ನುಗ್ಗಿದ 5 ಜನರ ಕಳ್ಳರ ಗುಂಪಲ್ಲಿ ಒಬ್ಬ ನೃತ್ಯ ಮಾಡಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸಹಚರ ಕಳ್ಳರು ಮಳಿಗೆಗಳ ಬೀಗ ಮುರಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಅವರಲ್ಲೊಬ್ಬ ಕಳ್ಳ ಸಖತ್ ಸ್ಟೆಪ್ಸ್ ಹಾಕಿದ್ದಾನೆ
ಪೊಲೀಸರು ಡ್ಯಾನ್ಸರ್ ಕಳ್ಳರನ್ನು ಹಿಡಿಯಲು ಬಲೆ ಬೀಸಿದ್ದು ಸಿಸಿಟಿವಿ ದೃಶ್ಯಾವಳಿ ಅಧ್ಯಯನ ಮಾಡುತ್ತಿದ್ದಾರೆ.
