Bengaluru: ಕೆಂಪೇಗೌಡ ಲೇಔಟ್ ಸೈಟ್ ಉಳಿಸಿಕೊಳ್ಳಲು ಮತ್ತೆ ಚಾನ್ಸ್?
ನಾಡಪ್ರಭು ಕೆಂಪೇಗೌಡ ಬಡಾವಣೆ 2ನೇ ಹಂತದಲ್ಲಿ 2018ನೇ ಸಾಲಿನಲ್ಲಿ ನಿವೇಶನ ಹಂಚಿಕೆಯಾದ ಎಸ್ಸಿ-ಎಸ್ಟಿಮತ್ತು ಪ್ರವರ್ಗ-1ರ ಹಂಚಿಕೆದಾರರಿಗೆ ಬಡ್ಡಿ ಸಹಿತ ಹಣ ಪಾವತಿಗೆ ಅವಕಾಶ ನೀಡುವಂತೆ ಬಿಡಿಎ ಸಲ್ಲಿಸಿರುವ ಪ್ರಸ್ತಾವನೆಗೆ ದೀಪಾವಳಿಗೂ ಮುನ್ನವೇ ರಾಜ್ಯ ಸರ್ಕಾರ ಅನುಮೋದನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಸಂಪತ್ ತರೀಕೆರೆ
ಬೆಂಗಳೂರು (ಅ.06): ನಾಡಪ್ರಭು ಕೆಂಪೇಗೌಡ ಬಡಾವಣೆ 2ನೇ ಹಂತದಲ್ಲಿ 2018ನೇ ಸಾಲಿನಲ್ಲಿ ನಿವೇಶನ ಹಂಚಿಕೆಯಾದ ಎಸ್ಸಿ-ಎಸ್ಟಿಮತ್ತು ಪ್ರವರ್ಗ-1ರ ಹಂಚಿಕೆದಾರರಿಗೆ ಬಡ್ಡಿ ಸಹಿತ ಹಣ ಪಾವತಿಗೆ ಅವಕಾಶ ನೀಡುವಂತೆ ಬಿಡಿಎ ಸಲ್ಲಿಸಿರುವ ಪ್ರಸ್ತಾವನೆಗೆ ದೀಪಾವಳಿಗೂ ಮುನ್ನವೇ ರಾಜ್ಯ ಸರ್ಕಾರ ಅನುಮೋದನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಬಿಡಿಎಯಿಂದ 2018ರ ನವೆಂಬರ್‌ನಲ್ಲಿ ಹಂಚಿಕೆ ಮಾಡಿರುವ ನಿವೇಶನಗಳ ಬಾಕಿ ಮೊತ್ತವನ್ನು ತುಂಬುವ ಅವಧಿ 2021 ನವೆಂಬರ್ 30ಕ್ಕೆ ಅಂತ್ಯವಾಗಿತ್ತು. ಆದರೆ ಈ ಸಮಯದಲ್ಲಿ ಕೋವಿಡ್ ಸಮಸ್ಯೆಯಿಂದಾಗಿ ಈ ನಿವೇಶನಗಳ ಬಾಕಿ ಮೊತ್ತವನ್ನು ತುಂಬಲು ಎಸ್ಸಿ, ಎಸ್ಟಿಮತ್ತು ಪ್ರವರ್ಗ-1ರ ಶೇ.35ಕ್ಕಿಂತಲೂ ಹೆಚ್ಚು ಮಂದಿ ನಿವೇಶನದಾರರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 2022 ಡಿಸೆಂಬರ್ 31ವರೆಗೆ ಬಡ್ಡಿ ಸಮೇತ ಹಣ ಪಾವತಿಗೆ ಅವಕಾಶ ಕೊಡುವಂತೆ ಕೋರಿ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಆಗಸ್ಟ್ 11ರಂದು ಮನವಿ ಮಾಡಿತ್ತು.
Bengaluru: ವಾಹನ ಸವಾರರಿಗೆ ಸವಾಲಾದ ವೀರಭದ್ರ ನಗರ ಸಿಗ್ನಲ್!
ಬಿಡಿಎ ಪ್ರಸ್ತಾವನೆ ರಾಜ್ಯ ಸರ್ಕಾರದ ಅಂಗಳದಲ್ಲಿದ್ದು, ನಿವೇಶನ ಹಂಚಿಕೆಯಾಗಿದ್ದರೂ ನಿಗದಿತ ಅವಧಿಯಲ್ಲಿ ಹಣ ಪಾವತಿಸಲಾಗದೆ ಇರುವ ಅರ್ಹರಿಗೆ ದೀಪಾಳಿಗೂ ಮುನ್ನವೇ ವಿಶೇಷ ಅವಕಾಶ ಒದಗಿಸಿಕೊಡಲು ಸರ್ಕಾರ ಚಿಂತನೆ ನಡೆಸಿದೆ. ಆ ನಂತರ ಬಿಬಿಎಂಪಿ ಚುನಾವಣೆಯೂ ಘೋಷಣೆಯಾಗುವ ಸಾಧ್ಯತೆ ಇದೆ. ಜೊತೆಗೆ ಹಣ ಪಾವತಿಸಲು ಹೆಚ್ಚಿನ ಕಾಲಾವಕಾಶವೂ ಸಿಗಬೇಕಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರ ಶೀಘ್ರವೇ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯ ವರ್ಗಕ್ಕೂ ಅವಕಾಶಕ್ಕೆ ಮನವಿ: 2018 ಎರಡನೇ ಹಂತದಲ್ಲಿ ನಿವೇಶನ ಹಂಚಿಕೆಯಾದ ಎಸ್ಸಿ-ಎಸ್ಟಿ, ಪ್ರವರ್ಗ-1 ಮತ್ತು ಆರ್ಥಿಕ ಹಿಂದುಳಿದ ವರ್ಗದವರು ದಂಡ ರಹಿತವಾಗಿ ನಿವೇಶನ ಹಂಚಿಕೆಯಾದ ಮೂರು ವರ್ಷದೊಳಗೆ ದರ ಪಾವತಿಸಲು ಅವಕಾಶ ಇದೆ. ಸಾಮಾನ್ಯ ವರ್ಗದವರಿಗೆ 60 ದಿನಗಳೊಳಗೆ ನಿವೇಶನದ ಪೂರ್ಣ ಮೌಲ್ಯ ಪಾವತಿಸಬೇಕೆಂಬ ನಿಯಮವಿದೆ. ಆದರೆ ಎನ್‌ಪಿಕೆಎಲ್ ಮೊದಲ ಮತ್ತು ಎರಡನೇ ಹಂತದಲ್ಲಿ 60 ದಿನಗಳ ಬದಲಿಗೆ 150 ದಿನಗಳ ಕಾಲಾವಕಾಶ ನೀಡಲಾಗಿತ್ತು.
ನಿಗದಿತ ಅವಧಿಯಲ್ಲಿ ಸಾಮಾನ್ಯ ವರ್ಗದವರು ನಿವೇಶನದ ಮೌಲ್ಯ ಪಾವತಿಸದಿದ್ದರೆ ಅವಧಿ ಮುಗಿದ(150 ದಿನಗಳು) ನಂತರ ಒಂದು ತಿಂಗಳವರೆಗೆ ಶೇ.18ರಷ್ಟುದಂಡ ಕಟ್ಟಬೇಕು. ಇಲ್ಲವೇ ಆ ನಂತರ ಆರು ತಿಂಗಳವರೆಗೆ ಶೇ.21ರಷ್ಟುದಂಡ ಪಾವತಿಯೊಂದಿಗೆ ಪೂರ್ಣ ಹಣ ಕಟ್ಟಬೇಕು. ಈ ಅವಧಿಯೊಳಗೂ ಹಣ ಕಟ್ಟದಿದ್ದರೆ ನಿವೇಶನ ಹಂಚಿಕೆಯನ್ನು ರದ್ದುಪಡಿಸುವ ನಿಯಮವಿದೆ. ಹೀಗಾಗಿ ಅನೇಕರು ನಿಗದಿತ ಅವಧಿಯೊಳಗೆ ದಂಡ ಸಹಿತವಾಗಿ ಹಣ ಕಟ್ಟಲು ಸಾಧ್ಯವಾಗದೇ ಹಂಚಿಕೆಯಾದ ನಿವೇಶನಗಳನ್ನು ಹಿಂದಿರುಗಿಸಿದ್ದರು. ಹೀಗಾಗಿ ಸಾಮಾನ್ಯ ವರ್ಗದವರಿಗೂ ಕೂಡ ದಂಡ ಮತ್ತು ಬಡ್ಡಿ ಸಹಿತ ಹಣ ಕಟ್ಟಲು ಮತ್ತೊಂದು ಅವಕಾಶ ನೀಡಬೇಕೆಂದು ಹಲವರು ಒತ್ತಾಯಿಸಿದ್ದಾರೆ.
ನಿವೇಶನಗಳ ಅಳತೆ ಹಂಚಿಕೆ ಮಾಡಿದ ಒಟ್ಟು ನಿವೇಶನಗಳು
20/30 ಅಡಿ (ಇಡಬ್ಲ್ಯೂಎಸ್) 1000
20/30 ಅಡಿ (ಸಾಮಾನ್ಯ) 500
30/40 ಅಡಿ 2500
40/60 ಅಡಿ 700
50/80 ಅಡಿ 271
ಒಟ್ಟು 4971
ಬಿಜೆಪಿ ಮಹಾನ್ ಸುಳ್ಳುಗಾರನೆಂದು ಮತ್ತೆ ಸಾಬೀತು: ಸಿದ್ದರಾಮಯ್ಯ
ಕಾರಣಾಂತರಗಳಿಂದ ನಿಗದಿತ ಅವಧಿಯೊಳಗೆ ಹಣವನ್ನು ಕಟ್ಟಲಾಗದ ಸಾಮಾನ್ಯ ವರ್ಗದವರಿಗೂ ಅವಕಾಶವನ್ನು ವಿಸ್ತರಿಸಬೇಕು. ಇದರಿಂದ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶನ ಹೊಂದಲು ಮತ್ತೊಂದು ಅವಕಾಶ ಕೊಟ್ಟಂತಾಗುತ್ತದೆ.
-ಶ್ರೀಕಾಂತ್, ನಿವೇಶನ ಆಕಾಂಕ್ಷಿ.