Asianet Suvarna News Asianet Suvarna News

Bengaluru: ವಾಹನ ಸವಾರರಿಗೆ ಸವಾಲಾದ ವೀರಭದ್ರ ನಗರ ಸಿಗ್ನಲ್‌!

ಸಂಚಾರಿ ದಟ್ಟಣೆ ನಿಯಂತ್ರಣಕ್ಕಾಗಿ ಹೊಸಕೆರೆಹಳ್ಳಿಯ ನೈಸ್‌ ರಸ್ತೆ ಸಮೀಪದ ವೀರಭದ್ರ ನಗರ ಸಿಗ್ನಲ್‌ನಲ್ಲಿ ನಡೆಯುತ್ತಿರುವ ಗ್ರೇಡ್‌ ಸೆಪರೇಟರ್‌ ಕಾಮಗಾರಿ ವಿಳಂಬದಿಂದ ದಟ್ಟಣೆ ಸಮಯದಲ್ಲಿ(ಪೀಕ್‌ ಅವರ್‌) ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

Bengalurus Veerbhadra Nagar signal is a challenge for motorists gvd
Author
First Published Oct 6, 2022, 11:54 AM IST

ಬೆಂಗಳೂರು (ಅ.06): ಸಂಚಾರಿ ದಟ್ಟಣೆ ನಿಯಂತ್ರಣಕ್ಕಾಗಿ ಹೊಸಕೆರೆಹಳ್ಳಿಯ ನೈಸ್‌ ರಸ್ತೆ ಸಮೀಪದ ವೀರಭದ್ರ ನಗರ ಸಿಗ್ನಲ್‌ನಲ್ಲಿ ನಡೆಯುತ್ತಿರುವ ಗ್ರೇಡ್‌ ಸೆಪರೇಟರ್‌ ಕಾಮಗಾರಿ ವಿಳಂಬದಿಂದ ದಟ್ಟಣೆ ಸಮಯದಲ್ಲಿ(ಪೀಕ್‌ ಅವರ್‌) ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕೆಇಬಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣದ ಬಳಿಕ ವೀರಭದ್ರ ನಗರ ಸಿಗ್ನಲ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಹೀಗಾಗಿ ದಟ್ಟಣೆ ನಿಯಂತ್ರಣಕ್ಕಾಗಿ ಸುಮಾರು .30 ಕೋಟಿ ವೆಚ್ಚದಲ್ಲಿ ವೀರಭದ್ರನಗರ ಸಿಗ್ನಲ್‌ನಲ್ಲಿ ಗ್ರೇಡ್‌ ಸೆಪರೇಟರ್‌ ನಿರ್ಮಿಸಲು ಬಿಬಿಎಂಪಿ 2019ರಲ್ಲಿ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಿತ್ತು. ಗ್ರೇಡ್‌ ಸೆಪರೇಟರ್‌ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಪಿಜೆಬಿ ಎಂಜಿನಿಯ​ರ್‍ಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಪಡೆದುಕೊಂಡಿತ್ತು.

ಬಿಜೆಪಿ ಮಹಾನ್‌ ಸುಳ್ಳುಗಾರನೆಂದು ಮತ್ತೆ ಸಾಬೀತು: ಸಿದ್ದರಾಮಯ್ಯ

ಗುತ್ತಿಗೆ ಪಡೆದ ದಿನದಿಂದ ಎರಡು ವರ್ಷದೊಳಗೆ ಗ್ರೇಡ್‌ ಸೆಪರೇಟರ್‌ ಯೋಜನೆ ಪೂರ್ಣಗೊಳಿಸುವುದಾಗಿ ಕಂಪನಿ ಕರಾರಿನಲ್ಲಿ ತಿಳಿಸಿತ್ತು. ಆದರೆ, ಈ ನಡುವೆ ಬೆಂಗಳೂರು ಜಲಮಂಡಳಿ ವೀರಭದ್ರನಗರ ಸಿಗ್ನಲ್‌ ಸಮೀಪದ ಇಂದಿರಾ ಕ್ಯಾಂಟೀನ್‌ ಬಳಿಯ ಸರ್ವಿಸ್‌ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಂಡಿತ್ತು. ಈ ಕಾಮಗಾರಿ ಪೂರ್ಣಗೊಳಿಸಿ ಬಿಬಿಎಂಪಿಗೆ ಜಾಗವನ್ನು ಬಿಟ್ಟುಕೊಡಲು ಬರೋಬ್ಬರಿ ಎಂಟು ತಿಂಗಳು ತೆಗೆದುಕೊಂಡಿದ್ದರಿಂದ ನಿಗದಿತ ಅವಧಿಯಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೂ ಮಳೆಯಾದಾಗ ಈ ಜಾಗದಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಸಿಗ್ನಲ್‌ ಮುಕ್ತ ಸಂಚಾರ: ಹೊರವರ್ತುಲ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಿದರೂ ಸರ್ವಿಸ್‌ ರಸ್ತೆಯಲ್ಲಿ ನಿತ್ಯವೂ ಟ್ರಾಫಿಕ್‌ ಸಮಸ್ಯೆಗೆ ವಾಹನ ಸವಾರರು, ಸಾರ್ವಜನಿಕರು ನಲುಗುವಂತಾಗಿದೆ. ಗ್ರೇಡ್‌ ಸೆಪರೇಟರ್‌ ಕಾಮಗಾರಿ ಶೀಘ್ರವೇ ಪೂರ್ಣಗೊಂಡರೆ ಗಿರಿನಗರ, ಶ್ರೀನಗರ-ಹೊಸಕೆರೆಹಳ್ಳಿ, ಕೆರೆಕೋಡಿ, ವೀರಭದ್ರ ನಗರ ಕಡೆಗೆ ಸಂಚರಿಸುವವರಿಗೆ ಅನುಕೂಲವಾಗಲಿದೆ. 400 ಮೀಟರ್‌ ಉದ್ದದ ಈ ಗ್ರೇಡ್‌ ಸೆಪರೇಟರ್‌ ನಿರ್ಮಾಣಗೊಂಡರೆ ಮೇಲ್ಸೇತುವೆ ಬಿಟ್ಟು ನೈಸ್‌ ರಸ್ತೆಗೆ ಹೋಗಲು ಇಚ್ಛಿಸುವವರಿಗೂ ಅನುಕೂಲವಾಗಿದೆ. ಹಾಗೆಯೇ ಕಾಮಾಕ್ಯ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಗೊಂಡರೆ ನಾಯಂಡಹಳ್ಳಿ ಜಂಕ್ಷನ್‌ನಿಂದ ಪಿಇಎಸ್‌ ಕಾಲೇಜು ಮಾರ್ಗವಾಗಿ ಕನಕಪುರ ರಸ್ತೆವರೆಗೂ ಸಿಗ್ನಲ್‌ ಮುಕ್ತವಾಗಿ ಸಂಚರಿಸಬಹುದಾಗಿದೆ.

ಲಾರಿಗಳದ್ದೇ ಆರ್ಭಟ: ಪಿಇಎಸ್‌ ವಿಶ್ವವಿದ್ಯಾಲಯದಿಂದ ವೀರಭದ್ರ ನಗರ ವೃತ್ತದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಸರ್ವಿಸ್‌ ರಸ್ತೆಗಳಿವೆ. ಸಂಜೆ ಹಾಗೂ ಬೆಳಗ್ಗಿನ ಸಮಯದಲ್ಲಿ ಈ ರಸ್ತೆಗಳಲ್ಲಿ ಸಾಗುವುದೇ ದೊಡ್ಡ ಸವಾಲು. ದಟ್ಟಣೆ ನಿಯಂತ್ರಿಸುವ ಸಲುವಾಗಿ ಸವೀರ್‍ಸ್‌ ರಸ್ತೆ ನಿರ್ಮಿಸಲಾಗಿದೆ. ಆದರೆ, ಒಂದು ಸರ್ವಿಸ್‌ ರಸ್ತೆಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿವೆ. ನಂದಿ ಲಿಂಕ್‌ ಸಮೀಪದ ಮತ್ತೊಂದು ಸರ್ವಿಸ್‌ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಸರ್ವಿಸ್‌ ರಸ್ತೆಯಲ್ಲೇ ಕೆಲವರು ನರ್ಸರಿ ಮಾಡಿಕೊಂಡಿದ್ದು, ಗಿಡ, ಮರಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

ಸೋನಿಯಾ ಬರ್ತಾರೆ, ಒಟ್ಟಿಗೆ ನಡೆಯೋಣ ಬನ್ನಿ: ಡಿಕೆಶಿ

ಜೊತೆಗೆ ಮರಳು, ಜೆಲ್ಲಿ, ಎಂಸ್ಯಾಂಡ್‌ ಇತ್ಯಾದಿಗಳನ್ನು ಹೊತ್ತ ಲಾರಿಗಳು, ಈ ರಸ್ತೆಯನ್ನೇ ನಿಲ್ದಾಣ ಮಾಡಿಕೊಂಡಿವೆ. ವಿಶೇಷವೆಂದರೆ ಇದರ ಪಕ್ಕದಲ್ಲೇ ಲಾರಿಗಳ ಸರ್ವಿಸ್‌ ಸ್ಟೇಷನ್‌ ಮಾಡಿಕೊಳ್ಳಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸವೀರ್‍ಸ್‌ ರಸ್ತೆಯೊಂದಿಗೆ ವೀರಭದ್ರ ನಗರ ಸಿಗ್ನಲ್‌ನಲ್ಲಿ ನಡೆಯುತ್ತಿರುವ 400 ಮೀಟರ್‌ ಉದ್ದದ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಕೈಗೊಂಡು ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಮುಂದಾಗಬೇಕು ಎಂಬುದು ವೀರಭದ್ರ ನಗರ ನಿವಾಸಿ ರವಿಶಂಕರ್‌ ಅವರ ಆಗ್ರಹವಾಗಿದೆ.

Follow Us:
Download App:
  • android
  • ios