ಚಿಕ್ಕಮಗಳೂರು(ನ.26): ಅಂಗನವಾಡಿಯಲ್ಲಿ ಮಗು ಚಡ್ಡಿಯಲ್ಲಿ ಸೂಸು ಮಾಡಿದ್ದಕ್ಕೆ ಆಯಾ ಮಾಡಿದ್ದೇನು ಗೊತ್ತಾ..? ಶಿಕ್ಷಕಿ ಚಾಕುವಿನಿಂದ ಮಗುವಿನ ಮೇಲೆ ಹಲ್ಲೆ ಮಾಡಿದ ಪರಿಣಾಮ ಮಗುವಿನ ತಲೆಗೆ ಮೂರು ಹೊಲಿಗೆ ಹಾಕಲಾಗಿದೆ.

ಅಂಗನವಾಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ‌ ಕೆರೆಮಕ್ಕಿ ಗ್ರಾಮದ ಅಂಗನವಾಡಿಯಲ್ಲಿ ಘಟನೆ ನಡೆದಿದ್ದು, ಚಡ್ಡಿಯಲ್ಲಿ ಮಗು ಸೂಸು ಮಾಡಿದ್ದಕ್ಕೆ ಚಾಕುವಿನಿಂದ ಹೊಡೆದು ಹಲ್ಲೆ ಮಾಡಲಾಗಿದೆ.

800 ರೂ. ಕುರ್ತಾ ಬುಕ್ ಮಾಡಿ 79 ಸಾವಿರ ಕಳ್ಕೊಂಡ ಯುವತಿ, ನಡೆದಿದ್ದೇನು..?

ಅಂಗನವಾಡಿ ಸಹಾಯಕಿ ಮೂರು ವರ್ಷದ ಮಗುವಿಗೆ ಚಾಕುವಿನಿಂದ ಹೊಡೆದಿದ್ದು ಗಂಭೀರ ಗಾಯಗೊಂಡ ಮಗುವನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿನ ತಲೆಗೆ ಮೂರು ಹೊಲಿಗೆ ಹಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಇಸ್ರೋದಲ್ಲಿ ಕೆಲಸ!

ಅಮಿತ್ (3) ಹಲ್ಲೆಗೊಳಗಾದ ಮಗು. ಶಿಕ್ಷಕಿ ಮಾಲ ಹಾಗೂ ಆಯಾ ಮಂಜುಳ‌ ವಿರುದ್ಧ ದೂರು ದಾಖಲಿಸಲಾಗಿದೆ. ಮಲ್ಲಂದೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕಿ ಹಾಗೂ ಸಹಾಯಕಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ಯಾಕ್ಟರಿ ಕೊಡದ ಮಾವನ ಕೊಲೆಗೆ ಸುಪಾರಿ ಕೊಟ್ಟ ಅಳಿಯ!

ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: