ಶಿವಮೊಗ್ಗ (ಜು.28): ಬಾರ್ ಓನರ್ ಬೆಳಗ್ಗೆದ್ದು ಯಾರ ಮುಖ ನೋಡಿದ್ದರೋ ಗೊತ್ತಿಲ್ಲ. ಆದರೆ, ಕುಡುಕನೊಬ್ಬ ನನಗೆ ಸಾಲಕ್ಕೆ ಎಣ್ಣೆ ಕೊಡುವಂತೆ ಬಂದು ಹಠವಿಡಿದು ಖ್ಯಾತೆ ತೆಗೆದಿದ್ದಾನೆ. ಆಗ ಮೊದಲೇ ಬಾರ್‌ವರು ಕೇಳಬೇಕಾ? ನಿನ್ನಂಥವರನ್ನೆಲ್ಲಾ ಎಷ್ಟು ಜನರನ್ನು ನೋಡಿಲ್ಲ ನಾವು ಎಂದು ಒಂದೆರೆಡು ಅವಾಜ್ ಹಾಕಿ ಕುಡುಕನನ್ನು ಬಾರ್ ಬಾಗಿಲಿನಿಂದ ಸಾಗಹಾಕಿದ್ದಾರೆ. ಇಷ್ಟಾದರೂ ಎಣ್ಣೆಗಾಗಿ ಪಟ್ಟುಹಿಡಿದ ಮದ್ಯವ್ಯಸನಿ ಬಾರ್ ಮುಂದಿನ ಮಧ್ಯರಸ್ತೆಯಲ್ಲಿ ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಸೈಡ್‌ಗೆ ಹೋಗು ಎಂದರೆ 90 ಎಣ್ಣೆ ಕೊಡಿಸಿ ಎಂದು ಕೇಳುತ್ತಿದ್ದನು.

ರಾಜ್ಯದಲ್ಲಿ ಮಳೆಗಾಲ ಶುರುವಾಗಿದೆ. ಅದರಲ್ಲಿಯೂ ಮಲೆನಾಡಿನಲ್ಲಿ ಬೆಳಗ್ಗೆ, ರಾತ್ರಿ ಯಾವ ಸಮಯದಲ್ಲಿ ಬೇಕಾದರೂ ಮಳೆ ಸುರಿಯುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಚಳಿ ತಡೆಯಲಾರದೇ ಇಲ್ಲೊಬ್ಬ ಮದ್ಯವ್ಯಸನಿ ನನಗೆ ಸಾಲಕ್ಕೆ ಎಣ್ಣೆ ಕೊಡಿ ಎಂದು ಬಾರ್‌ನ ಮುಂದೆ ಹಠವಿಡಿದು ನಿಂತಿದ್ದಾನೆ. ಈ ಘಟನೆ ಶಿವಮೊಗ್ಗ ನಗರದ ಎನ್.ಟಿ.ರಸ್ತೆಯಲ್ಲಿ ನಡೆದಿದೆ. ಕುಡುಕನ ಹುಚ್ಚಾಟ ನೋಡುಗರಿಗೆ ನಗೆ ಬೀರಿದರೆ, ವಾಹನ ಸವಾರರಿಗೆ ಪರದಾಡುವಂತಹ ಸಂಕಟ ಶುರುವಾಗಿತ್ತು. 

Video: ಇದು ಶಾಲೆನಾ? ಹೋಟೆಲ್? ಕ್ಲಾಸ್‌ರೂಮ್‌ನಲ್ಲಿ ಚಾಪೆ ಹಾಸ್ಕೊಂಡು ಗಡದ್ದಾಗಿ ನಿದ್ದೆ ಮಾಡಿದ ಶಿಕ್ಷಕಿ

ಇನ್ನು ಬಾರ್‌ನಲ್ಲಿ ಸಾಲಕ್ಕೆ ಮದ್ಯ ಕೊಡಲಿಲ್ಲ ಎಂದು ರಸ್ತೆ ಮಧ್ಯದಲ್ಲಿ ಬಂದು ವಾಹನಗಳಿಗೆ ಅಡ್ಡ ನಿಂತಿದ್ದಾನೆ. ಇನ್ನು ಬಾರಿನವರು ನೀನು ಹಣ ಕೊಡದೆ ಮದ್ಯದ ಬಾಟಲಿ ಕೊಡುವುದಿಲ್ಲ ಎಂದು ಆತನನ್ನು ಬೈದು ವಾಪಸ್ ಕಳಿಸಿದ್ದಾರೆ. ಇಷ್ಟಕ್ಕೂ ಜಗ್ಗದೇ ಮದ್ಯದಂಗಡಿ ಮುಂದೆ ನಿಂತಿದ್ದವನನ್ನು ಗದರಿಸಿ ಬಾಗಿಲ ಬಳಿಯಿಂದ ಆಚೆ ಕಳಿಸಿದ್ದಾರೆ. ಆಗ ಬಾರ್‌ನ ಮುಂದೆಯೇ ಇರುವ ದೊಡ್ಡ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುವುದಕ್ಕೆ ಅಡ್ಡಿಪಡಿಸಲೆಂದು ರಸ್ತೆಯ ಮಧ್ಯದಲ್ಲಿ ನಿಂತಿದ್ದಾನೆ. ಇನ್ನು ಶಿವಮೊಗ್ಗದಲ್ಲಿ ಮಳೆ ಸುರಿಯುತ್ತಿದ್ದರಿಂದ ಛತ್ರಿಯನ್ನು ಹಿಡಿದುಕೊಂಡು ರಸ್ತೆಯಲ್ಲಿ ನಿಂತಿದ್ದಾನೆ.

ತಾನು ನಡು ರಸ್ತೆಯಲ್ಲಿ ನಿಂತುಕೊಂಡು ಹೋಗುವ ಮತ್ತು ಬರುವ ವಾಹನಗಳಿಗೆ ದಾರಿ ಬಿಡದೇ ತೊಂದರೆ ಕೊಟ್ಟಿದ್ದಾನೆ. ಸಣ್ಣ ಬೈಕ್‌ಗಳು ಹಾಗೂ ಕಾರುಗಳು ರಸ್ತೆ ಆಚೆ ಈಚೆಯ ಬದಿಯಲ್ಲಿ ತೆರಳಿದರೆ, ದೊಡ್ಡ ದೊಡ್ಡ ಲಾರಿಗಳು ಹಾಗೂ ಬಸ್‌ಗಳು ಆತನ ಮುಂದೆ ನಿಂತುಕೊಳ್ಳುತ್ತಿದ್ದವು. ನಂತರ, ಬಸ್‌ನ ಸಿಬ್ಬಂದಿ ಬಂದು ಆತನನ್ನು ರಸ್ತೆಯ ಪಕ್ಕಕ್ಕೆ ಎಳೆದು ನಿಲ್ಲಿಸಿ ಬಸ್‌ ಮಂದಕ್ಕೆ ಹೋದ ನಂತರ ಹೋಗಿ ಬಸ್ ಹತ್ತಿಕೊಂಡು ಹೋಗುತ್ತಿದ್ದರು. ಇನ್ನು ಕೆಲವರು ರಸ್ತೆಗೆ ಯಾಕೆ ನಿಂತಿದ್ದೀಯ ಎಂದು ಕೇಳಿದರೆ, ನಂಗೆ ಎಣ್ಣೆ ಬೇಕು, 90 ಎಣ್ಣೆ ಕೊಡಿಸು ದಾರಿ ಬಿಟ್ಟು ಹೋಗ್ತೀನಿ ಎಂದು ಹೇಳುತ್ತಿದ್ದನು. 

ರಸ್ತೆಯ ಮಧ್ಯದಲ್ಲಿ ನಿಂತು ಹುಚ್ಚಾಟ ಮಾಡುತ್ತಿದ್ದ ಮದ್ಯವ್ಯಸನಿಯನ್ನು ಕೆಲವರು ಮನವೊಲಿಸುವ ಪ್ರಯತ್ನ ಮಾಡಿದರೂ, ಪ್ರಯೋಜನ ಆಗಲಿಲ್ಲ. ಇದರಿಂದ ಶಿವಮೊಗ್ಗದಿಂದ  ತೀರ್ಥಹಳ್ಳಿಗೆ ಹೋಗುವ ವಾಹನಗಳಿಗೆ ಕೆಲ ಕಾಲ ತೊಂದರೆ ಉಂಟಾಗಿತ್ತು. ಕುಡಿತದ ಅಮಲಿನಲ್ಲಿ ವಾಹನಗಳಿಗೆ ಅಡ್ಡ ಬಂದು ನಿಂತ ಮದ್ಯ ವ್ಯಸನಿಗೆ ಒಂದೆರಡು ಏಟು ಹೊಡೆದು ಪಕ್ಕಕ್ಕೆ ಕೂರಿಸೋಣ ಎಂದರೂ, ಕುಡುಕನೊಂದಿಗೆ ಜಗಳ ಏತಕ್ಕೆ ಎಂದು ಸುಮ್ಮನೇ ಸೈಡ್‌ನಿಂದ ಹೋಗುವಗರೇ ಹೆಚ್ಚಾಗಿದ್ದರು. ಇನ್ನು ಕೆಲವರು ಆತನ ಹುಚ್ಚಾಟ ನೋಡಿ ನಗುತ್ತಿದ್ದರು. ಮಳೆ ಹೆಚ್ಚಾಗಿದ್ದರಿಂದ ಕೊನೆಗೆ ಕುಡುಕನೇ ರಸ್ತೆಯ ಮಧ್ಯದಿಂದ ಜಾಗ ಖಾಲಿ ಮಾಡಿದ್ದಾನೆ. ಆದರೆ, ಕೆಲಕಾಲ ನೋಡುಗರಿಗೆ ಇದು ಮನರಂಜನೆ ನೀಡಿದರೇ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದಕ್ಕೆ ಕೆಲವರು ತೊಂದರೆ ಅನುಭವಿಸಿದರು.

ಕಾಂಗ್ರೆಸ್ ಗ್ಯಾರಂಟಿಗಳಿಗೆ ಹಣ ಒದಗಿಸಲು ಹಿಂದುಳಿದ ವರ್ಗಗಳ ಇಲಾಖೆ ಹಣಕ್ಕೂ ಕೈ ಹಾಕಿದ ಸರ್ಕಾರ?