Video: ಇದು ಶಾಲೆನಾ? ಹೋಟೆಲ್? ಕ್ಲಾಸ್‌ರೂಮ್‌ನಲ್ಲಿ ಚಾಪೆ ಹಾಸ್ಕೊಂಡು ಗಡದ್ದಾಗಿ ನಿದ್ದೆ ಮಾಡಿದ ಶಿಕ್ಷಕಿ
ಈ ಶಾಲೆಯ ಶಿಕ್ಷಕಿ ಮಕ್ಕಳ ಮುಂದೆ ಚಾಪೆ ಹಾಸ್ಕೊಂಡು ಮಲಗಿದ್ದಾರೆ. ಮಕ್ಕಳು ಚೆನ್ನಾಗಿ ಕಲಿಯಲಿ ಅಂತ ಶಾಲೆಗೆ ಕಳುಹಿಸಿದ್ರೆ, ಶಿಕ್ಷಕಿ ಅವರಿಂದಲೇ ಗಾಳಿ ಬೀಸಿಕೊಂಡು ನಿದ್ದೆ ಮಾಡಿದ್ದಾಳೆ.
ಲಕ್ನೋ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡೋದು ಶಿಕ್ಷಕರ ಕೆಲಸ. ಸಿಗುವ ಸಮಯದಲ್ಲಿಯೇ ಇಡೀ ಪಠ್ಯ ಪೂರ್ಣಗೊಳಿಸಬೇಕೆಂಬ ನಿಯಮಗಳು ಶಿಕ್ಷಕರಿಗೆ ಇರುತ್ತದೆ. ಇದರ ಜೊತೆಗೆ ಪ್ರತಿ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರು ಗಮನ ನೀಡಬೇಕಾಗುತ್ತದೆ. ಅದರಲ್ಲಿಯೂ ಬಾಲ್ಯದಲ್ಲಿ ಕಲಿತ ಕಲಿಕೆ ಇಡೀ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ. ಪ್ರಾಥಮಿಕ ಶಾಲೆಯ ಶಿಕ್ಷಕರು ಅಂದ್ರೆ ಮಕ್ಕಳಿಗೆ ಇಷ್ಟ. ಆದ್ರೆ ಶಾಲೆಯ ಶಿಕ್ಷಕಿ ಕ್ಲಾಸ್‌ರೂಮ್‌ನಲ್ಲಿ ಚಾಪೆ ಹಾಸ್ಕೊಂಡು ಗಡದ್ದಾಗಿ ನಿದ್ದೆ ಮಾಡಿದ್ದಾರೆ. ಶಿಕ್ಷಕಿ ನಿದ್ದೆ ಮಾಡುತ್ತಿದ್ರೆ ಕೆಲ ಮಕ್ಕಳು ಪುಸ್ತಕದಿಂದ ಗಾಳಿ ಬೀಸುತ್ತಿದ್ದಾರೆ. ಒಂದಿಷ್ಟು ಮಕ್ಕಳು ಗಲಾಟೆ ಮಾಡುತ್ತಿದ್ದಾರೆ. ಶಿಕ್ಷಕಿ ಶಾಲೆಯಲ್ಲಿ ನಿದ್ದೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ಪ್ರದೇಶ ಅಲಿಗಢ ಜಿಲ್ಲೆಯ ಧನೀಪುರ ಬ್ಲಾಕ್‌ನಲ್ಲಿರುವ ಗೋಕುಲಪುರ ಗ್ರಾಮದ ಸರ್ಕಾರಿ ಶಾಲೆಯ ಕಥೆ ಇದಾಗಿದೆ. ಈ ಶಾಲೆಯ ಶಿಕ್ಷಕಿ ಮಕ್ಕಳ ಮುಂದೆ ಚಾಪೆ ಹಾಸ್ಕೊಂಡು ಮಲಗಿದ್ದಾರೆ. ಮಕ್ಕಳು ಚೆನ್ನಾಗಿ ಕಲಿಯಲಿ ಅಂತ ಶಾಲೆಗೆ ಕಳುಹಿಸಿದ್ರೆ, ಶಿಕ್ಷಕಿ ಅವರಿಂದಲೇ ಗಾಳಿ ಬೀಸಿಕೊಂಡು ನಿದ್ದೆ ಮಾಡಿದ್ದಾಳೆ. ಶಿಕ್ಷಕಿಗೆ ಮಲಗಿದ್ರೆ ಸೆಕೆ ಆಗಬಾರದು ಎಂದು ಮಕ್ಕಳು ಓದುವ ಪುಸ್ತಕದಿಂದ ಗಾಳಿ ಬೀಸಿದ್ದಾರೆ.
ಸೈನ್ಸ್ ಕಲಿಯಲು ಬೇರೆ ಕಾಲೇಜಿಗೆ ಹೋದ ಗೆಳೆಯರು.. ಖಿನ್ನತೆಗೊಳಗಾಗಿ ನೇಣು ಬಿಗಿದುಕೊಂಡ 11ನೇ ಕ್ಲಾಸ್ ವಿದ್ಯಾರ್ಥಿ
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಇದು ಉತ್ತರ ಪ್ರದೇಶದಲ್ಲಿಯ ಶಿಕ್ಷಣ ವ್ಯವಸ್ಥೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಟೀಚರ್ ಈ ರೀತಿ ಮಲಗಿದ್ರೆ ಮಕ್ಕಳಿಗೆ ಪಾಠ ಮಾಡೋರು ಯಾರು? ಮಕ್ಕಳ ಶಿಕ್ಷಣಕ್ಕೆ ಬುನಾದಿ ಬೀಳುವ ಹಂತ ಇದಾಗಿದ್ದು, ಇಂತಹ ಶಿಕ್ಷಕರನ್ನು ಸೇವೆಯಿಂದ ಅಮಾನುತುಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವ ಸಂದೀಪ್ ಸಿಂಗ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಈ ಶಾಲೆ ಬರುತ್ತದೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ತನಿಖೆ ಆದೇಶಿಸಿದ್ದಾರೆ. ಆದ್ರೆ ನಿದ್ದೆ ಮಾಡಿದ ಶಿಕ್ಷಕಯ ವಿರುದ್ಧ ಪ್ರಕರಣ ದಾಖಲಾಗಿದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋಗೆ 10 ಸಾವಿರಕ್ಕೂ ಅಧಿಕ ವ್ಯೂವ್, ಹಲವು ಕಮೆಂಟ್‌ಗಳು ಬಂದಿವೆ.
ಆಟವಾಡುತ್ತಿದ್ದ ಪುಟ್ಟ ಕಂದನ ದಾಳಿಯಿಂದ ರಕ್ಷಿಸಿದ ನಾಯಿ, ಮೈ ಜುಮ್ಮೆನಿಸುವ ದೃಶ್ಯ ಸೆರೆ!
जब शिक्षक ही ऐसे होंगे तो शिक्षण कैसा होगा,भयंकर गर्मी से निजात पाने को मासूमों से हवा कराती मास्टरनी साहिबा, 😤👩🏫
— ज़िन्दगी गुलज़ार है ! (@Gulzar_sahab) July 27, 2024
अलीगढ़ में शिक्षिका के द्वारा मासूम बच्चों से उमस भरी गर्मी में पंखा कराने का वीडियो सोशल मीडिया पर तेजी से वायरल हो रहा है. यूपी के अलीगढ़ के धनीपुर ब्लॉक के… pic.twitter.com/AHud4DaLnE