Asianet Suvarna News Asianet Suvarna News

Mangaluru: ನಿರ್ಬಂಧದ ಮಧ್ಯೆ ದೈವಗಳಿಂದಲೇ ಮುಸಲ್ಮಾನರ ವ್ಯಾಪಾರಕ್ಕೆ ಚಾಲನೆ..!

*  ಮೇ. 9 ರಿಂದ 12 ರ ತನಕ ಕ್ಷೇತ್ರದಲ್ಲಿ ನಡೆಯುವ ಉತ್ಸವ 
*  ಮಂಜೇಶ್ವರದಲ್ಲಿ ನಡೆಯುವ ಸಾಮರಸ್ಯದ ಕಥೆ
*  "ಕುದಿಕಳ" ಎಂಬುದಾಗಿ ಕರೆಯಲ್ಪಡುವ ಕಾರ್ಯಕ್ರಮ 

Allow Muslim Trade in Hindu Fair in Mangaluru grg
Author
Bengaluru, First Published Apr 12, 2022, 11:25 AM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು(ಏ.12):  ಇದು ಪಕ್ಕದ ಕೇರಳದ(Kerala) ಸ್ಟೋರಿ. ಮಂಗಳೂರಿಗೆ(Mangaluru) ಹೊಂದಿಕೊಂಡಿರುವ ಕೇರಳ ಗಡಿ ಭಾಗದಲ್ಲಿ ಕನ್ನಡಿಗರೇ(Kannadigas) ಹೆಚ್ಚಾಗಿ ನೆಲೆಸಿರೋ ಮಂಜೇಶ್ವರದಲ್ಲಿ ನಡೆಯುವ ಸಾಮರಸ್ಯದ ಕಥೆ. ಮಂಜೇಶ್ವರಕ್ಕೆ ಸಮೀಪದ ಉದ್ಯಾವರದ ಶ್ರೀಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೊಳಪಟ್ಟ ವ್ಯಕ್ತಿಯಿಂದಲೇ ಸಂತೆಯನ್ನು ಸ್ಥಾಪಿಸಿ ಅಲ್ಲಿಂದಲೇ ಕ್ಷೇತ್ರದ ದೈವಗಳು ತೆಂಗಿನ ಕಾಯಿ ಹಾಗೂ ವೀಳ್ಯದೆಲೆ ಖರೀದಿಸಿ ಕ್ಷೇತ್ರದ ಉತ್ಸವಕ್ಕೆ ದಿನನಿಶ್ಚಯ ಮಾಡುವ ಮೂಲಕ ಬ್ಯಾರಿ ಸಮುದಾಯದವರ ವ್ಯಾಪಾರಕ್ಕೆ ನಮ್ಮದೇನು ಅಡ್ಡಿಯಿಲ್ಲವೆಂಬುದಾಗಿ ಸಾರುವ ಸಾಮರಸ್ಯದ ಸಾಕ್ಷಿಯಾಗಿದೆ.

ಸುದೀರ್ಘವಾದ ಕೋವಿಡ್‌ನ(Covid-19) ಬಳಿಕ ವಾಡಿಕೆಯಂತೆ ಈ ವರ್ಷ ಕೂಡ ಉದ್ಯಾವರ ಶ್ರೀ ಅರಸು ಕ್ಷೇತ್ರದ ಜಾತ್ರೆಗೆ ದಿನ ನಿಶ್ಚಯ ನಡೆದಿದೆ. ಸಿಂಹಾಸನ ಕಟ್ಟೆಯ ಒಂದು ಭಾಗದಲ್ಲಿ ಉದ್ಯಾವರ ಸಾವಿರ ಜಮಾಅತ್ ಗೊಳಪಟ್ಟ ಮುಸಲ್ಮಾನರು(Muslims) ಹಾಗೂ ಇನ್ನೊಂದು ಭಾಗದಲ್ಲಿ ಬ್ರಹ್ಮಸಭೆ ಅಂದರೆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಕುಳಿತುಕೊಂಡು ಬಳಿಕ ದಿನ ಕಟ್ಟೆಯ ಮುಂಭಾಗದಲ್ಲಿ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳಲಾಯಿತು. "ಕುದಿಕಳ" ಎಂಬುದಾಗಿ ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಉದ್ಯಾವರ ಜಮಾಅತಿಗೊಳಪಟ್ಟ ಅನುವಂಶೀಯ ಕುಟುಂಬಕ್ಕೊಳಪಟ್ಟ ಮುಸಲ್ಮಾನ ಇಲ್ಲಿ ವೀಳ್ಯದೆಲೆ ಹಾಗೂ ತೆಂಗಿನ ಕಾಯಿ ಮಾರಾಟ ನಡೆಸಬೇಕಾಗಿದೆ. 
ಇದರಂತೆ ಸಯ್ಯದ್ ಎಂಬಾತ ನಡೆಸುತ್ತಿರುವ ವ್ಯಾಪಾರಕ್ಕೆ ಕ್ಷೇತ್ರದ ಅಣ್ಣ ತಮ್ಮ ದೈವಗಳು ಆಗಮಿಸಿ ಸಾಮಾಗ್ರಿ ಖರೀದಿಸಿ ಆಶೀರ್ವಾದವನ್ನು ನೀಡಿದೆ. ಮಾರಾಟವಾದ ನಾಲ್ಕು ತೆಂಗಿನಕಾಯಿಗಳ ಪೈಕಿ ಎರಡೆರಡನ್ನು ಅಣ್ಣ ದೈವ ಹಾಗೂ ತಮ್ಮ ದೈವ ಖರೀದಿಸಿ ತೆಂಗಿನಕಾಯಿ ಒಡೆಯುವ ಸ್ಪರ್ಧೆ ಏರ್ಪಟ್ಟಿತ್ತು. ಮುಂದಿನ ವಾರದಲ್ಲಿ ದೈವಗಳ ಸಮುದಾಯದವರ ಸಾವಿರ ಜಮಾಅತ್ ಭೇಟಿ ನಡೆಯಲಿದೆ. ಮೇ ತಿಂಗಳ 9 ರಿಂದ 12 ರ ತನಕ ಕ್ಷೇತ್ರದಲ್ಲಿ ಉತ್ಸವ ನಡೆಯಲಿದೆ.

Mangaluru: ಉಚ್ಚಿಲ ದೇವಿಗೆ 400 ಗ್ರಾಂ ಚಿನ್ನದ ಮೀನಿನ ಸರ ಸಮರ್ಪಣೆ

'ಹಿಂದೂ ಮುಸ್ಲಿಂ‌ ಒಂದೇ ತಾಯಿ ಮಕ್ಕಳಂತೆ ಬಾಳಬೇಕು

ಬೆಳಗಾವಿ: ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಬಿ.ಎಸ್.ಯಡಿಯೂರಪ್ಪ(BS Yediyurapp) ಇಂದು ಬೆಳಗಾವಿಗೆ ಆಗಮಿಸಿದ್ದು ಬಿಜೆಪಿ(BJP) ಕಾರ್ಯಕರ್ತೆಯರು ಪುಷ್ಟವೃಷ್ಟಿ ಮೂಲಕ ಸ್ವಾಗತ ಕೋರಿದರು. ಮೂರು ದಿನಗಳ ಕಾಲ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿರುವ ಬಿ.ಎಸ್‌.ಯಡಿಯೂರಪ್ಪ, ಇಂದು ವಿಭಾಗ ಮಟ್ಟದ ಬಿಜೆಪಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಪಕ್ಷ ಬಲಪಡಿಸುವ ದೃಷ್ಟಿ, ಮುಂದಿನ ಚುನಾವಣೆ ಸಿದ್ದತೆ ಮಾಡಿಕೊಳ್ಳುವ ದೃಷ್ಟಿಯಿಂದ ಪ್ರವಾಸ ಆರಂಭಿಸಿದ್ದೇವೆ. ಎಲ್ಲಾ ಕಡೆ ಕಾರ್ಯಕರ್ತರ ಜತೆಗೆ ಸಮಾಲೋಚನೆ, ಅಲ್ಲಿನ ಸ್ಥಿತಿಗತಿ ಚರ್ಚೆ, ಪಕ್ಷ ಸಂಘಟನೆ ಬಲಪಡಿಸಲು ಏನೂ ಮಾಡಬೇಕು ಅಂತಾ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತೇವೆ. ಮೂರು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು ನಿರಂತರವಾಗಿ ರಾಜ್ಯದಲ್ಲಿ ಪ್ರವಾಸ ನಡೆಯುತ್ತಿರುತ್ತೆ' ಎಂದ್ರು.

ಎಚ್‌ಡಿಕೆ- ರೇವಣ್ಣ ತವರಲ್ಲಿ ಧರ್ಮ ದಂಗಲ್: ಬೇಲೂರು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಬಹಿಷ್ಕಾರ..?

'ಪಕ್ಷ ಸಂಘಟ‌ನೆ ದೃಷ್ಟಿಯಿಂದ ಬಿಚ್ಚು ಮನಸ್ಸಿನಿಂದ ಚರ್ಚೆ'

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ‌ ಮತ್ತು ಕತ್ತಿ, ಸವದಿ ಬಣಗಳಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, 'ನಾಳೆಯ ಸಭೆಯಲ್ಲಿ ಸಂಘಟನೆ ಹಿತದೃಷ್ಟಿಯಿಂದ ಬಿಚ್ಚು ಮನಸ್ಸಿನಿಂದ ಚರ್ಚೆ ಮಾಡುತ್ತೇವೆ. ಸರಿ ಪಡಿಸಲು ಏನೂ ಬೇಕು ಎಲ್ಲವನ್ನೂ ಮಾಡುತ್ತೇವೆ' ಎಂದರು.

'ಹಿಂದೂ ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಅಂತಾ ಹೇಳುವ ಪಕ್ಷ ಬಿಜೆಪಿ'

ಇನ್ನು ಯಡಿಯೂರಪ್ಪ ಸಿಎಂ ಆಗಿದ್ರೇ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿರಲಿಲ್ಲಾ ಅಂತಾ ರಾಜಕೀಯ ವಲಯದಲ್ಲಿ ಚರ್ಚೆ ನಡೀತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, 'ಹಾಗೇನೂ ಇಲ್ಲ ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆ ಕೆಲಸ ಮಾಡ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕೆಲವು ಅಹಿತಕರವಾದ ಘಟನೆಗಳು ನಡೆಯುತ್ತಿವೆ‌. ಹಿಂದೂ ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಅಂತಾ ಹೇಳುವ ಪಕ್ಷ ಬಿಜೆಪಿ. ಇದು ಪ್ರಧಾನಿ ಮೋದಿಯವರ ಅಪೇಕ್ಷೆ ಕೂಡ ಇದೆ. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳಾಗುತ್ತಿದ್ದು ಇದ್ಯಾವುದಕ್ಕೂ ನಮ್ಮ ಬೆಂಬಲ ಇಲ್ಲ. ಆ ತರಹದ ಘಟನೆಗಳು ಆದ್ರೇ ಅದನ್ನ ಖಂಡಿಸುತ್ತೇನೆ. ಮುಂದೆ ಇದೇ ರೀತಿ ಮುಂದುವರೆದ್ರೇ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ. ಯಾರು ಈ ರೀತಿ ಘಟನೆಗಳನ್ನ ಮತ್ತೆ ಮತ್ತೆ ಗೊಂದಲು ಉಂಟು ಮಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ತೇವಿ ಅಂತಾ ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ. ಇನ್ನೂ ಮೇಲೆ ಆ ತರಹದ ಘಟನೆಗಳಿಗೆ ಅವಕಾಶ ಮಾಡಿಕೊಡದೇ ಕ್ರಮವನ್ನ ತೆಗೆದುಕೊಳ್ಳಬೇಕು' ಅಂತಾ ಸರ್ಕಾರಕ್ಕೆ ಸಲಹೆ ನೀಡಿದರು‌.
 

Follow Us:
Download App:
  • android
  • ios