Asianet Suvarna News Asianet Suvarna News

ಸಿಎಂ ಆದೇಶಕ್ಕೂ ಡೋಂಟ್‌ ಕೇರ್‌: ಬಿಡಿಎ ಸಗಟು ಸೈಟ್‌ ಹಂಚಿಕೆಗೆ ತರಾತುರಿ

ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಸಗಟು ಸೈಟ್‌ ನೀಡದಂತೆ ಸಿಎಂ, ಬಿಡಿಎ ಅಧ್ಯಕ್ಷರಿಂದ ಆದೇಶ| ಆದರೂ ಸೈಟ್‌ ಹಂಚಲು ಬಿಡಿಎ ಆತುರ| ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 12 ಎಕರೆ ಮಂಜೂರಿಗೆ ಪ್ರಕ್ರಿಯೆ ಶುರು| ಅಧಿಕಾರಿಗಳ ಮೇಲೆ ಬಿಡಿಎ ಆಯುಕ್ತ ಒತ್ತಡ?| 

Allegations of BDA wholesale site Sell grg
Author
Bengaluru, First Published Feb 9, 2021, 7:12 AM IST

ಬೆಂಗಳೂರು(ಫೆ.09): ಸಗಟು ನಿವೇಶನಗಳನ್ನು ಮಂಜೂರು ಮಾಡಬಾರದು ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರ ಆದೇಶ ಮೀರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಹದೇವ್‌ ಅವರು ಗೃಹ ನಿರ್ಮಾಣ ಸಂಘವೊಂದಕ್ಕೆ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಹತ್ತಾರು ಎಕರೆ ಜಮೀನನ್ನು ಮಂಜೂರು ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಿಡಿಎಯಲ್ಲಿ ಭವಾನಿ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಸಂಸ್ಥೆಗೆ ಬರೋಬ್ಬರಿ 12 ಎಕರೆ 36 ಗುಂಟೆ ಭೂಮಿ ಮಂಜೂರು ಪ್ರಕ್ರಿಯೆ ಆರಂಭಗೊಂಡಿದೆ. ಬಿಡಿಎ ಅಧ್ಯಕ್ಷರ ಗಮನಕ್ಕೆ ತರದೇ ಈ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಇದರ ಹಿಂದೆ ಬಿಡಿಎ ಆಯುಕ್ತ ಮಹದೇವ್‌ ಒತ್ತಡ ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಜಮೀನು ಮಂಜೂರಿಗೆ ಭೂಮಿ ಗುರುತಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಲು ಅಧಿಕಾರಿಗಳ ಮೇಲೆ ಮಹದೇವ್‌ ಅವರಿಂದ ಒತ್ತಡವಿದೆ ಎಂಬ ದೂರುಗಳು ಎಸ್‌.ಆರ್‌.ವಿಶ್ವನಾಥ್‌ ಅವರಿಗೆ ಮುಟ್ಟಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಕೆಲ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಬಿಡಿಎ ಅಧಿಕಾರಿಗಳು ಮನಸೋ ಇಚ್ಛೆ ಸಗಟು ನಿವೇಶನಗಳನ್ನು ಮಂಜೂರು ಮಾಡಿದ್ದರು. ಈ ಮೂಲಕ ನೂರಾರು ಕೋಟಿ ರುಪಾಯಿ ಭ್ರಷ್ಟಾಚಾರ ಎಸಗಿದ್ದರು. ಈ ಹಿನ್ನೆಲೆಯಲ್ಲಿ ಸಗಟು ನಿವೇಶನ ಹಂಚಿಕೆ ಪ್ರಕರಣಗಳನ್ನು ವಿಶೇಷ ತನಿಖಾ ದಳದಿಂದ ತನಿಖೆ ನಡೆಸಲಾಗುವುದು. ಜೊತೆಗೆ ಇನ್ನು ಮುಂದೆ ಯಾವುದೇ ಗೃಹ ನಿರ್ಮಾಣ ಸಂಘಕ್ಕೂ ಸಗಟು ನಿವೇಶನ ನೀಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಆದೇಶ ನೀಡಿದ್ದರು.

ಕಾರ್ನರ್‌ ಸೈಟ್‌ ಇ-ಹರಾಜು: ಬಿಡಿಎಗೆ 88 ಕೋಟಿ ಲಾಭ

ಲಿಖಿತ ಸೂಚನೆಗೂ ಬೆಲೆಯಿಲ್ಲ:

ಎಸ್‌.ಆರ್‌.ವಿಶ್ವನಾಥ್‌ ಅವರು ಬಿಡಿಎ ಅಧ್ಯಕ್ಷರಾದ ದಿನ ಇನ್ನು ಮುಂದೆ ಪ್ರಾಧಿಕಾರದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳದ ಹೊರತು ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನಗಳನ್ನು ಹಂಚಿಕೆ ನೀಡದಂತೆ ಎಂದು ಸೂಚನೆ ನೀಡಿದ್ದರು. ಜ.1 ಮತ್ತು 21ರಂದು ಬಿಡಿಎ ಆಯುಕ್ತರಿಗೆ ಲಿಖಿತ ಸೂಚನೆಯನ್ನೂ ನೀಡಿದ್ದರು. ಈ ರೀತಿ ಲಿಖಿತ ಸೂಚನೆಯಿದ್ದರೂ ಸಗಟು ನಿವೇಶನ ಮಂಜೂರಿಗೆ ಅಧಿಕಾರಿಗಳು ಮುಂದಾಗಿರುವುದರ ಹಿಂದೆ ಆಯುಕ್ತರ ಪರೋಕ್ಷ ಸಹಕಾರ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಿಎಂ ಆದೇಶ ಗಾಳಿಗೆ ತೂರಿ ಮಂಜೂರು?:

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆದೇಶ ಗಾಳಿಗೆ ತೂರಿರುವ ಬಿಡಿಎ, 2019ರ ಫೆ.26ರಂದು ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಧಾರವೊಂದನ್ನು ನೆಪವಾಗಿಟ್ಟುಕೊಂಡು ನಿವೇಶನ ಮಂಜೂರಾತಿಗೆ ಬಿಡಿಎ ಮುಂದಾಗಿದೆ. ಈಗಾಗಲೇ ಹಲವು ಗೃಹ ನಿರ್ಮಾಣ ಸಂಘಗಳು ಸಗಟು ನಿವೇಶನಗಳನ್ನು ಪಡೆದು ಸದಸ್ಯರಿಗೆ ನೀಡದೆ ದುಪ್ಪಟ್ಟು ಬೆಲೆಗೆ ಬೇರೆಯವರಿಗೆ ಮಾರಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೆ .300-400 ಕೋಟಿ ಮೌಲ್ಯದ ಜಮೀನನ್ನು ಅಗ್ಗದ ದರಕ್ಕೆ ಮಂಜೂರು ಮಾಡಲು ಯತ್ನಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಸಗಟು ನಿವೇಶನಗಳಲ್ಲ, ಬದಲಿ

ಜಮೀನು: ಆಯುಕ್ತ ಮಹದೇವ್‌

ಈ ಬಗ್ಗೆ ‘ಕನ್ನಡಪ್ರಭ’ಗೆ ಪ್ರತಿಕ್ರಿಯಿಸಿರುವ ಬಿಡಿಎ ಆಯುಕ್ತ ಡಾ. ಎಚ್‌.ಆರ್‌.ಮಹದೇವ್‌, ಬಿಡಿಎ ಅಭಿವೃದ್ಧಿಪಡಿಸಿರುವ ಸಗಟು ನಿವೇಶನಗಳನ್ನು ಸಂಘಕ್ಕೆ ಮಂಜೂರು ಮಾಡುತ್ತಿಲ್ಲ. ಭವಾನಿ ಗೃಹ ನಿರ್ಮಾಣ ಸಂಘದವರು ಬಡಾವಣೆ ಅಭಿವೃದ್ಧಿಗಾಗಿ ಖರೀದಿಸಿದ್ದ ಜಮೀನನ್ನು ಬಿಡಿಎಯು ಬನಶಂಕರಿ ಬಡಾವಣೆ ಅಭಿವೃದ್ಧಿಗೆ ಬಳಸಿಕೊಂಡಿತ್ತು. ಅದಕ್ಕೆ ಬದಲಿಯಾಗಿ ನೀಡಬೇಕಾಗಿದ್ದ ಬಾಕಿ ಜಮೀನನ್ನು ಬದಲಿ ನಿವೇಶನದ ರೂಪದಲ್ಲಿ ನೀಡುತ್ತಿದ್ದೇವೆ ಎಂದರು.
ಹೀಗೆ ಬದಲಿ ನಿವೇಶನ ನೀಡುವ ಬಗ್ಗೆ ಈ ಹಿಂದಿನ ಬಿಡಿಎ ಅಧ್ಯಕ್ಷರಾಗಿದ್ದ ಎಸ್‌.ಟಿ.ಸೋಮಶೇಖರ ಅವರ ಅವಧಿಯಲ್ಲಿ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವಾಗಿದೆ. ಈ ತೀರ್ಮಾನಕ್ಕೆ ನ್ಯಾಯಾಲಯದ ಆದೇಶವು ಏನಿದು

ಸಗಟು ಸೈಟ್‌?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ‘ಲ್ಯಾಂಡ್‌ ಹೋಲ್‌ಸೇಲ್‌ ಡಿಸ್ಟ್ರಿಬ್ಯೂಷನ್‌ ಪಾಲಿಸಿ-1995’ ನಿಯಮದ ಅಡಿ ಸರ್ಕಾರದ ನಿಯಮಾವಳಿ ಪ್ರಕಾರ ರಚನೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಅವರ ಸದಸ್ಯರಿಗೆ ಮಾತ್ರ ವಿತರಿಸುವ ಷರತ್ತಿನೊಂದಿಗೆ ಸಗಟು ನಿವೇಶನಗಳ ಮಂಜೂರಿಗೆ ಅವಕಾಶವಿದೆ.

ಸಂಘವು ಒಂದಕ್ಕಿಂತ ಹೆಚ್ಚು ನಿವೇಶನಗಳು ಅಥವಾ ಎಕರೆಗಳ ಲೆಕ್ಕದಲ್ಲಿ ಬಿಡಿಎ ಅಭಿವೃದ್ಧಿಪಡಿಸಿದ ಜಮೀನು ಪಡೆಯಬಹುದು. ಇದಕ್ಕೆ ಬಿಡಿಎ ಮಂಡಳಿ ಸಭೆಯ ನಿರ್ಧಾರ ಅಗತ್ಯ. ಇದರಲ್ಲಿ ಭಾರಿ ಅಕ್ರಮ ನಡೆಯುತ್ತಿದೆ ಎಂದು ವ್ಯಾಪಕ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಗಟು ನಿವೇಶನ ಮಂಜೂರು ಮಾಡದಂತೆ ಆದೇಶಿಸಿದ್ದರು.
 

Follow Us:
Download App:
  • android
  • ios