Chamarajanagar: ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಒಂದಾಗಿರಬೇಕು: ಶಾಸಕ ಗಣೇಶ್ ಪ್ರಸಾದ್
ರಾಜಕಾರಣ ಬಂದಾಗ ರಾಜಕಾರಣ ಮಾಡೋಣ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದಾಗಿರಬೇಕು ಎಂಬುದು ನನ್ನ ಆಶಯ ಎಂದು ನೂತನ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಗುಂಡ್ಲುಪೇಟೆ (ಜೂ.18): ರಾಜಕಾರಣ ಬಂದಾಗ ರಾಜಕಾರಣ ಮಾಡೋಣ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದಾಗಿರಬೇಕು ಎಂಬುದು ನನ್ನ ಆಶಯ ಎಂದು ನೂತನ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ತಾಲೂಕಿನ ಮುಕ್ತಿ ಕಾಲೋನಿಯಲ್ಲಿ ಚಿಕ್ಕದೇವಮ್ಮ ದೇವಸ್ಥಾನ ಗುದ್ದಲಿ ಪೂಜೆ, ದೇಶೀಪುರ ಕಾಲೋನಿಯಲ್ಲಿ ಜೇನು ಕುರುಬರ ವಸತಿಗೆ ಗುದ್ದಲಿ ಪೂಜೆ, ಬರಗಿ ಕಾಲೋನಿಯಲ್ಲಿ ನೀರಿನ ಟ್ಯಾಂಕ್ ಉದ್ಘಾಟನೆ, ಕೋಡಹಳ್ಳಿ ಸರ್ಕಾರಿ ಶಾಲೆ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಊರು ಅಂದ್ಮೇಲೆ ರಾಜಕೀಯ ಸಾಮಾನ್ಯವೇ, ಗ್ರಾಮದ ವಿಚಾರ ಬಂದಾಗ ಗ್ರಾಮಸ್ಥರು ಒಗ್ಗಟ್ಟಾಗಿ ಕೆಲಸ ಮಾಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ 20 ದಿನಗಳಾಗುತ್ತಿದೆ. ಐದು ಗ್ಯಾರಂಟಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೆ ಬಂದಿದೆ. ಇನ್ನೂ ನಾಲ್ಕು ಗ್ಯಾರಂಟಿ ಜಾರಿಗೆ ತರಲು ಸರ್ಕಾರ ಬಿಸಿಯಾಗಿದೆ. ಗ್ಯಾರಂಟಿ ಜಾರಿಯಾದ ಬಳಿಕ ಅನುದಾನ ಬಂದಾಗ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದರು. ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದೀರಾ. ನಿಮ್ಮ ಪ್ರೀತಿ, ವಿಶ್ವಾಸ ಇನ್ಮುಂದೆಯೂ ಇರಲಿ. ಕ್ಷೇತ್ರದ ಕಾರ್ಯಕರ್ತರು ಹಾಗೂ ಮತದಾರರ ಕಷ್ಟ-ಸುಖಗಳಿಗೆ ಸರ್ಕಾರದ ವತಿಯಿಂದ ಹಾಗೂ ನಮ್ಮ ಟ್ರಸ್ಟ್ ನಿಂದಲೂ ಆದಷ್ಟುಸಹಾಯ ಮಾಡುವ ಭರವಸೆ ನೀಡಿದರು.
ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಶಾಸಕರೊಂದಿಗೆ ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಂ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪಿ.ಬಿ.ರಾಜಶೇಖರ್, ಬಿ.ಎಂ.ಮುನಿರಾಜು, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಮುದ್ದಯ್ಯ, ಗ್ರಾಪಂ ಸದಸ್ಯ ಸುರೇಶ್, ತಾಪಂ ಮಾಜಿ ಸದಸ್ಯ ದೇಶಿಪುರ ನಾಗರಾಜು, ಮುಖಂಡರಾದ ಚಲುವರಾಜು, ದೇಶೀಪುರ ಮಹದೇವಪ್ಪ ಸೇರಿದಂತೆ ಹಲವರಿದ್ದರು.
ಗುಂಡ್ಲುಪೇಟೆ ಬಸ್ ನಿಲ್ಧಾಣದಲ್ಲಿ ನಾರಿಯರ ದಂಡು: ಅಮವಾಸ್ಯೆ ಹಿನ್ನಲೆ ಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟಕ್ಕೆ ಪೂಜೆಗೆ ತೆರಳುವ ಸಾರಿಗೆ ಬಸ್‌ಗಳಿಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಾರಿಯರ ದಂಡು. ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಬಸ್ ಫ್ರೀ ಇದ್ದ ಕಾರಣ ಮಹದೇಶ್ವರ ಬೆಟ್ಟ,ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಭಾನುವಾರ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್‌ಗಾಗಿ ಕಾದು ನಿಂತಿದ್ದರು. ಭಾನುವಾರ ಅಮವಾಸ್ಯೆಯಿದ್ದ ಕಾರಣ ಮಹದೇಶ್ವರ ಬೆಟ್ಟಹಾಗು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲು ಮಹಿಳೆಯರು ಹಿಂಡಗಟ್ಟಲೇ ಬಂದು ನೂಕು ನುಗ್ಗಲಿನಲ್ಲಿ ಬಸ್ ಏರಿ ತೆರಳುತ್ತಿದ್ದರು.
ನನಗೆ ತಿಳಿಸದೆ ಯಾವುದೇ ಕಾರ್ಯ ಆರಂಭಿಸಬೇಡಿ: ಶಾಸಕ ಕೆ.ವೈ.ನಂಜೇಗೌಡ
ಮಹಿಳೆಯರಿಗೆ ಸರ್ಕಾರ ಬಸ್ ಫ್ರೀ ಮಾಡಿರುವ ಹಿನ್ನಲೆ ಮಹಿಳೆಯರು ಬಸ್‌ಗಳಲ್ಲಿ ತುಂಬಿ ತುಳುಕುತ್ತಿದ್ದರು.ಮಹಿಳೆಯರಿಗೆ ಟಿಕೆಟ್ ಕೊಡಲು ನೂಕು ನುಗ್ಗಲಿನಲ್ಲಿ ಬಸ್ ನಿರ್ವಾಹಕರು ಸುಸ್ತಾಗಿ ಹೋಗಿದ್ದರು. ಸರ್ಕಾರ ಬಸ್‌ಗಳಲ್ಲಿ ಮಹಿಳೆಯರಿಗೆ ಫ್ರೀ ಮಾಡಿರುವ ಹಿನ್ನಲೆ ಹೆಚ್ಚಿನ ಮಹಿಳೆಯರು ಬಸ್ ಗೆ ಬರುವ ಕಾರಣ ಗುಂಡ್ಲುಪೇಟೆ ಡಿಪೋದಲ್ಲಿರುವ ಬಸ್‌ಗಳು ಸಾಲುತ್ತಿಲ್ಲ ಎಂದು ಹೆಸರೇಳಲಿಚ್ಚಿಸದ ಸಾರಿಗೆ ಬಸ್ ನಿರ್ವಾಹಕರೊಬ್ಬರು ಅವಲತ್ತುಕೊಂಡರು. ಮಹಿಳೆಯರಿಗೇನೋ ಬಸ್‌ಗಳಲ್ಲಿ ರಾಜ್ಯ ಸರ್ಕಾರ ಫ್ರೀಯಾಗಿ ಸಂಚರಿಸಬಹುದು ಎಂದು ಹೇಳಿದೆ ಆದರೆ ಬಸ್‌ಗಳು ಸಾಕಾಗುತ್ತಿಲ್ಲ ಹಬ್ಬ,ಜಾತ್ರೆ,ಅಮವಾಸ್ಯೆಗಳಲ್ಲಿ ಹೆಚ್ಚು ಮಹಿಳೆಯರು ತೆರಳುವ ಹಿನ್ನಲೆ ಬಸ್ ಹೆಚ್ಚು ಮಾಡಲಿ ಎಂದು ಮಹಿಳೆಯೊಬ್ಬರು ಒತ್ತಾಯಿಸಿದರು.