ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಕೆಲ ಸರ್ಕಾರಿ ಇಲಾಖೆಗಳು ಸರ್ಕಾರದಿಂದ ಯೋಜನೆಗಳ ಅನುಷ್ಠಾನಕ್ಕಾಗಿ ಬಿಡುಗಡೆಯಾಗುವ ಅನುದಾನದ ಖರ್ಚು ವೆಚ್ಚವನ್ನು ಕೂಡಿ ಕಳೆಯಲು ಸೀಮಿತವಾಗಿವೆ. ಮುಂದಿನ ಸಭೆಯಲ್ಲಿ ಇಲಾಖಾವಾರು ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಮನಗರ (ಜೂ.18): ಕೆಲ ಸರ್ಕಾರಿ ಇಲಾಖೆಗಳು ಸರ್ಕಾರದಿಂದ ಯೋಜನೆಗಳ ಅನುಷ್ಠಾನಕ್ಕಾಗಿ ಬಿಡುಗಡೆಯಾಗುವ ಅನುದಾನದ ಖರ್ಚು ವೆಚ್ಚವನ್ನು ಕೂಡಿ ಕಳೆಯಲು ಸೀಮಿತವಾಗಿವೆ. ಮುಂದಿನ ಸಭೆಯಲ್ಲಿ ಇಲಾಖಾವಾರು ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಗಳ ಫಲಿತಾಂಶದ ಸಮಗ್ರ ವರದಿಯಿಂದ ಯಾವ ಯೋಜನೆಯಿಂದ ಯಾರಾರಯರಿಗೆ ಅನುಕೂಲವಾಗುತ್ತಿದೆ. ಏನೆಲ್ಲ ಪ್ರಗತಿ ಸಾಧ್ಯವಾಗುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಹಲವಾರು ಯೋಜನೆಗಳಿವೆ. ಸರ್ಕಾರ ನೀಡುವ ಅನುದಾನವನ್ನು ಸರಿಯಾಗಿ ಖರ್ಚು ಮಾಡುತ್ತಿದ್ದಾರೆ. ಅವೆಲ್ಲವು ಸಬ್ಸಿಡಿ ತೆಗೆದುಕೊಳ್ಳಲು ಅಥವಾ ಕೇವಲ ಅಧಿಕಾರಿಗಳಿಗಾಗಿ ಇರುವ ಯೋಜನೆಗಳೇ ಎಂಬ ಅನುಮಾನ ಕಾಡುತ್ತಿದೆ. ರೈತರು ಮತ್ತು ಜನಸಾಮಾನ್ಯರಿಗೆ ಯಾವ ಯೋಜನೆಗಳಿಂದ ಲಾಭ ಆಗುತ್ತಿದೆಯೋ ಇಲ್ಲವೋ ತಿಳಿದುಕೊಳ್ಳಬೇಕಿದೆ. ರೈತರಿಗೆ ಯೋಜನೆಗಳಿಂದ ಅನುಕೂಲ ಆಗಿದೆಯೇ ಇಲ್ಲವೋ ಗೊತ್ತಿಲ್ಲ. ರೈತರಿಗೆ ಟಾರ್ಪಲ್, ಗೊಬ್ಬರ ಯಂತ್ರ ಕೊಟ್ಟಮೇಲೆ ಬೆಳೆ ಇಳುವರಿ ಹೆಚ್ಚಾಯಿತೋ ಇಲ್ಲವೋ ಗೊತ್ತಿಲ್ಲ. ಅಧಿಕಾರಿಗಳು ಮೈಂಡ್ ಸೆಚ್ ಚೇಂಜ… ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಸಂಸದ ಸುರೇಶ್ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಸಲಹೆ
ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ ವತಿಯಿಂದ 12 ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದಾಗ ಸಂಸದರು, ನೀವು ನಿರ್ಮಾಣ ಮಾಡಿರುವ ಚೆಕ್ ಡ್ಯಾಂಗಳ ಗುಣಮಟ್ಟವನ್ನು ಅಧಿಕಾರಿಗಳು ಹಾಗೂ ದಿಶಾ ಸಮಿತಿ ಸದಸ್ಯರು ಪರಿಶೀಲನೆ ಮಾಡುವರು. ಸದಸ್ಯರನ್ನು ಸ್ಥಳಕ್ಕೆ ಕರೆದೊಯ್ದು ಮಾಹಿತಿ ನೀಡಬೇಕು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ 1.20 ಲಕ್ಷ ರೈತರು ಫಲಾನುಭವಿಗಳು ಲಾಭ ಪಡೆಯುವಂತಾಗಬೇಕು. ಪೌತಿ ಖಾತೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರು ಬಗೆಹರಿಸಲು ಕ್ರಮ ವಹಿಸಬೇಕು. 15 ದಿನದೊಳಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒರವರು ಗ್ರಾಪಂ, ಕಂದಾಯ, ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆ ಒಳಗೊಂಡಂತೆ ಡ್ರೈವ್ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.
ಕೊಳ್ಳೇಗಾಲದ ರೇಷ್ಮೆ ಮಾರುಕಟ್ಟೆಗೆ ತೆರಳುವ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಅಧಿಕಾರಿಗಳು ಕಿರುಕಳು ನೀಡುತ್ತಿದ್ಧಾರೆ ಎಂಬ ಆರೋಪ ಕೇಳಿ ಬರುತ್ತಿದ್ದ ಜಿಲ್ಲಾಘಿಕಾರಿ ಹಾಗೂ ಸಿಇಒ ಸಂಬಂಧಪಟ್ಟಅಧಿಕಾರಿಗಳೊಂದಿಗೆ ಚರ್ಚಿಸಿ ಬೆಳೆಗಾರರಿಗೆ ರಕ್ಷಣೆ ಒದಗಿಸಲು ಕ್ರಮ ವಹಿಸುವಂತೆ ಸುರೇಶ್ ತಿಳಿಸಿದರು. ಶಾಸಕ ಇಕ್ಬಾಲ್ ಹುಸೇನ್ ತುಂಬೇನಹಳ್ಳಿಯಲ್ಲಿ ಹಸುವಿಗೆ ಚಿಕಿತ್ಸೆ ನೀಡಲು ಪಶು ವೈದ್ಯರು ತೋರಿದ ನಿರ್ಲಕ್ಷ್ಯ ಹಾಗೂ ದಿಶಾ ಸಮಿತಿ ಸದಸ್ಯೆ ಕಾವ್ಯ ಪಶುಗಳಿಗೆ ಚಿಕಿತ್ಸೆ ಕೊಡಲು ಔಷಧಿ ಚೀಟಿ ಬರೆದುಕೊಡುತ್ತಾರೆಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ವೈದ್ಯರು ಮಾನವೀಯ ನೆಲಗಟ್ಟಿನಲ್ಲಿ ಕೆಲಸ ಮಾಡಬೇಕು. ಅಗತ್ಯವಿರುವ ಔಷಧದ ಪಟ್ಟಿನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತೋಟಗಾರಿಕೆ ಇಲಾಖೆ, ರೇಷ್ಮೆ, ನರೇಗಾ ಸೇರಿದಂತೆ ಎಲ್ಲಾ ಇಲಾಖೆಯ ಮಾಹಿತಿ ಪಡೆದುಕೊಂಡರು. ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾಧಿಕಾರಿ ಡಾ.ಅವಿನಾಶ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ ಮತ್ತಿತರರು ಉಪಸ್ಥಿತರಿದ್ದರು.
ಪಶು ವೈದ್ಯರ ಹುದ್ದೆ ಭರ್ತಿಗೆ ಕ್ರಮ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ಉಪನಿರ್ದೇಶಕ ಡಾ.ಆಂಜನಪ್ಪ ಗಮನ ಸೆಳೆದಾಗ ಸಂಸದ ಡಿ.ಕೆ.ಸುರೇಶ್ ಅವರು, ಖಾಲಿ ಇರುವ ಪಶು ವೈದ್ಯರ ಹುದ್ದೆ ಭರ್ತಿ ಸಂಬಂಧ ಇಲಾಖೆಯ ಸಚಿವರು ಹಾಗೂ ಆಯುಕ್ತರ ಬಳಿ ಚರ್ಚಿಸಿ ಕ್ರಮ ವಹಿಸುವ ಭರವಸೆ ನೀಡಿದರು. ಜಿಲ್ಲೆಯಲ್ಲಿ 71 ವೈದ್ಯರು ಸೇವೆಸಲ್ಲಿಸುತ್ತಿದ್ದಾರೆ. ಇದರಲ್ಲಿ 21 ವೈದ್ಯರ ಕೊರತೆ ಇದೆ. ಸರ್ಕಾರ ಪಶು ವೈದ್ಯರ ನೇಮಕ ಮಾಡದ ಪರಿಣಾಮ ಸಾಕಷ್ಟುತೊಂದರೆಯಾಗಿದೆ. ಪಶು ವೈದ್ಯಕೀಯ ವಿದ್ಯಾಭ್ಯಾಸ ಮಾಡಿದ ರಾಜ್ಯದ 1ಸಾವಿರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಬೇಕು ಎಂದು ಆಂಜನಪ್ಪ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್, ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸಂಬಂಧ ಪಟ್ಟಸಚಿವರು ಹಾಗೂ ಆಯುಕ್ತ ಬಳಿ ಚರ್ಚಿಸುತ್ತೇನೆ. ಜಿಲ್ಲೆಯಲ್ಲಿ ಇಲಾಖಾವಾರು ಖಾಲಿಯಿರುವ ಹುದ್ದೆಗಳ ಮಾಹಿತಿಯನ್ನು ಉಪಮುಖ್ಯಮಂತ್ರಿಗಳಿಗೆ ಸಲ್ಲಿಸುವಂತೆ ಹೇಳಿದರು.
ತರಾಟೆ, ಹಾಸ್ಯಭರಿತ ವ್ಯಂಗ್ಯ, ಕಿವಿಮಾತು: ದಿಶಾ ಸಭೆ ಆರಂಭವಾಗುತ್ತಿದ್ದಂತೆ ಆಡಳಿತದಲ್ಲಿ ಸುಧಾರಣೆ ಹಾಗೂ ಜನಸ್ನೇಹಿ ಆಡಳಿತದ ನಡೆಸುವಂತೆ ಸಲಹೆ ನೀಡಿದ್ದ ಸಂಸದ ಸುರೇಶ್ ರವರು ಇಲಾಖಾವಾರು ಪ್ರಗತಿ ವಿವರ ಚರ್ಚೆ ವೇಳೆ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು. ಕೃಷಿ ಇಲಾಖೆ ಪ್ರಗತಿ ವಿವರ ನೀಡಿದ ಚನ್ನಪಟ್ಟಣ ಕೃಷಿ ಮಹಿಳಾ ಅಧಿಕಾರಿಯನ್ನು ಸಂಸದರು, ನೀವು ಫೀಲ್ಡ್ ವರ್ಕ್ ಮಾಡಲ್ಲ ಅನಿಸುತ್ತದೆ. ನಾವು ಫೀಲ್ಡ್ ವರ್ಕ್ ಮಾಡಿ ಎಷ್ಟುಕಲರ್ ಬಂದಿದ್ದೀವಿ. ನೀವು ಫೀಲ್ಡ್ ಗೆ ಹೋದಂತೆ ಕಾಣುತ್ತಿಲ್ಲ ಎಂದು ಛೇಡಿಸಿದರು. ತೋಟಗಾರಿಕೆ ಇಲಾಖೆ ಪ್ರಗತಿ ವಿವರ ಚರ್ಚೆ ನಡೆಯುವಾಗ ಎಂಎಲ್ಸಿ ರವಿ ನೀವು ಬಟರ್ ಫ್ರೂಟ್‌ಗೆ ಒಳ್ಳೆ ಬೆಲೆ ಇದೆ ಅನ್ನುತ್ತೀರಾ. ನಮ್ಮ ತೋಟದಲ್ಲಿ ಬೆಳೆದಿರುವ ಬಟರ್ ಫ್ರೂಟ್ ಕೇಳೋರೆ ಇಲ್ಲ. ಎಲ್ಲ ಬಿದ್ದು ಹೋಗುತ್ತಿವೆ ಎಂದರು.
ಅವ್ಯವಹಾರ ಲೋಕಾಯುಕ್ತ ತನಿಖೆಗೆ ಶಿಫಾರಸು: ಶಾಸಕ ಇಕ್ಬಾಲ್ ಹುಸೇನ್
ಇದಕ್ಕೆ ಸಂಸದರು ರವಿ ಅವರ ಬಟರ್ ಫ್ರೂಟ್ ಬಿದ್ದು ಹೋಗುತ್ತಿದೆ ಅಂತೆ, ಒಳ್ಳೆಯ ಮಾರುಕಟ್ಟೆಕಲ್ಪಿಸಿ ಎಂದು ಹಾಸ್ಯಚಟಾಕಿ ಹಾರಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ 15ನೇ ಹಣಕಾಸಿ ಯೋಜನೆಗೆ ಸಂಬಂಧಿಸಿದಂತೆ ರಾಮನಗರ ನಗರಸಭೆ ಪೌರಾಯುಕ್ತ ನಾಗೇಶ್ ಸಮಪರ್ಕ ಉತ್ತರ ನೀಡಲು ತಿಣುಕಾಡಿದರು. ಇದರಿಂದ ಕೋಪಗೊಂಡ ಸುರೇಶ್, ನಿಮ್ತಲೆ ಮೀಟಿಂಗ್ ನಲ್ಲಿ ಇಲ್ಲ. ಯಾವುದೊ ಖಾತೆ ಹಣ ಬರಬೇಕೇನೊ ಅಲ್ಲಿದೆ. ನೀವು ಕಮಿಷನರ್ ತರಹ ಕಾಣಿಸುತ್ತಿಲ್ಲ. ಕ್ಲರ್ಕ್ ಅಥವಾ ಪೀವನ್ ಇರಬೇಕು. ಮೀಟಿಂಗ್‌ಗೆ ಸಿದ್ಧವಾಗಿ ಬಂದಿರುವ ನಿಮ್ಮ ಮುಖ ನೋಡಿ ಎಂದು ಹರಿಹಾಯ್ದರು. ಅಲ್ಲದೆ, ಪೌರಾಯುಕ್ತರಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.