Asianet Suvarna News Asianet Suvarna News

ಚಾಮುಂಡಿಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಭೂ ಕುಸಿತ

  • ಚಾಮುಂಡಿಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಭೂ ಕುಸಿತ
  •  ರಸ್ತೆ ದುರಸ್ತಿ ಕಾಮಗಾರಿಯನ್ನು ಇನ್ನೂ ಆರಂಭಿಸದಿದ್ದರಿಂದ ಭೂಮಿ ದಿನೇದಿನೇ ಸಡಿಲ 
Again land slide in Chamundi hill mysuru snr
Author
Bengaluru, First Published Nov 7, 2021, 6:20 AM IST

 ಮೈಸೂರು (ನ.07): ಚಾಮುಂಡಿ ಬೆಟ್ಟದ ನಂದಿ ಮಾರ್ಗದ ಮತ್ತೊಂದು ಬದಿಯಲ್ಲಿ ರಸ್ತೆ ಕುಸಿದಿದೆ.

ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದಿಂದ (chamundi Hill) ನಂದಿಗೆ ತೆರಳುವ ಮಾರ್ಗದ ರಸ್ತೆ (Roda) ಕುಸಿದಿತ್ತು. ಈಗ ಕುಸಿದ ರಸ್ತೆಯ ಸಮೀಪದಲ್ಲಿಯೇ ಮತ್ತೊಂದು ಕಡೆ ರಸ್ತೆ ಕುಸಿತವಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ತಿಳಿಸಿದ್ದರು. ಅಲ್ಲದೆ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದರು. ಆದರೆ ಲೋಕೋಪಯೋಗಿ ಸಚಿವರು ಆಗಮಿಸಲಿಲ್ಲ.

ರಸ್ತೆ ದುರಸ್ತಿ ಕಾಮಗಾರಿಯನ್ನು ಇನ್ನೂ ಆರಂಭಿಸದಿದ್ದರಿಂದ ಭೂಮಿ (Land) ದಿನೇದಿನೇ ಸಡಿಲ ಬಿಟ್ಟು, ಬೆಟ್ಟದಲ್ಲಿ ಮತ್ತಷ್ಟುಭೂ ಕುಸಿತ ಉಂಟಾಗುತ್ತಿದೆ. ದಿನೇ ದಿನೇ ಆಳ ಹೆಚ್ಚಾಗಿದ್ದು, ಸುಮಾರು 75 ಅಡಿಗಳಷ್ಟು ಆಳಕ್ಕೆ ಮಣ್ಣು ಕುಸಿದಿದೆ. ಅದೇ ಜಾಗದಲ್ಲಿ ಭೂಮಿ ಕುಸಿಯುತ್ತಿರುವುದರಿಂದ ನಂದಿ ರಸ್ತೆಯ ಮೇಲ್ಭಾಗದ ಮಣ್ಣೂ ಕೂಡ ಕುಸಿದು ಬೀಳುವ ಅಪಾಯ ಹೆಚ್ಚಾಗಿದೆ.

ಈ ಹಿಂದೆ ಒಂದು ಕಡೆ ಮಾತ್ರ ಭೂಮಿ ಕುಸಿದಿತ್ತು. ಈಗ ಸಮೀಪದಲ್ಲಿ ಮತ್ತೊಂದು ಕಡೆ ಕುಸಿತ ಆಗಿರುವುದರಿಂದ ಬೆಟ್ಟಕ್ಕೆ ಅಪಾಯ ಹೆಚ್ಚಾಗಿದೆ.

ಚಾಮುಂಡಿ ಬೆಟ್ಟದ ನಂದಿಗೆ (Nandi) ತೆರಳುವ ಮಾರ್ಗದಲ್ಲಿ ಈ ಘಟನೆ ನಡೆದಿರುವುದರಿಂದ ಆ ಮಾರ್ಗದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ (Vehicle) ನಿಷೇಧ ಹೇರಲಾಗಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಸಾರ್ವಜನಿಕರ ಸಂಚಾರಕ್ಕೂ ನಿಯಂತ್ರಣ ಹೇರಿದೆ.

ಇದರ ಜೊತೆಗೆ ಕಳೆದ ಒಂದೆರಡು ವರ್ಷದ ಹಿಂದೆ ಮಳೆಯಿಂದಾಗಿ ಕುಸಿದಿದ್ದ ಸ್ಥಳದಲ್ಲಿಯೂ ರಸ್ತೆ ಬಿರುಕು ಬಿಟ್ಟಿದೆ. ಅಲ್ಲದೆ ಇಲ್ಲಿ ನಿರ್ಮಿಸಿದ್ದ ತಡೆಗೋಡೆಯು ಒಂದು ಕಡೆಗೆ ವಾಲಿದಂತಿದೆ.

ಕೆಲ ದಿನಗಳ ಹಿಂದೆ ರಸ್ತೆ ಬಂದ್ ಆಗಿತ್ತು

 

ಚಾಮುಂಡಿ ಬೆಟ್ಟದ (chamundi Hill) ನಂದಿ ಮಾರ್ಗದ (Nandi Rout) ರಸ್ತೆ ಮತ್ತೆ ಕುಸಿದಿದೆ.  ಕಳೆದ ವಾರ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದಿಂದ ನಂದಿಗೆ ತೆರಳುವ ಮಾರ್ಗದ ರಸ್ತೆ ಕುಸಿದಿತ್ತು. ಶೀಘ್ರದಲ್ಲಿಯೇ ಕಾಮಗಾರಿ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ತಿಳಿಸಿದ್ದರು. ಅಲ್ಲದೆ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದರು. ಆದರೆ ಲೋಕೋಪಯೋಗಿ ಸಚಿವರು ಆಗಮಿಸಲಿಲ್ಲ.

ರಸ್ತೆ ದುರಸ್ತಿ ಕಾಮಗಾರಿಯನ್ನು ಇನ್ನೂ ಆರಂಭಿಸದಿದ್ದರಿಂದ ಭೂಮಿ ದಿನೇ ದಿನೇ ಸಡಿಲ ಬಿಟ್ಟು, ಬೆಟ್ಟದಲ್ಲಿ ಮತ್ತಷ್ಟು ಭೂ ಕುಸಿತವಾಗಿದೆ. ದಿನೇದಿನೇ ಆಳ ಹೆಚ್ಚಾಗಿದ್ದು, ಸುಮಾರು 75 ಅಡಿಗಳಷ್ಟು ಆಳಕ್ಕೆ ಮಣ್ಣು ಕುಸಿದಿದೆ. ಅದೇ ಜಾಗದಲ್ಲಿ ಭೂಮಿ (land) ಕುಸಿಯುತ್ತಿರುವುದರಿಂದ ನಂದಿ ರಸ್ತೆಯ ಮೇಲ್ಭಾಗದ ಮಣ್ಣೂ ಕೂಡ ಕುಸಿದು ಬೀಳುವ ಅಪಾಯವಿದೆ.

ಚಾಮುಂಡಿ ಬೆಟ್ಟದ ನಂದಿಗೆ ತೆರಳುವ ಮಾರ್ಗದಲ್ಲಿ (Rout) ಈ ಘಟನೆ ನಡೆದಿರುವುದರಿಂದ ಆ ಮಾರ್ಗದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ (Vehicle Ban) ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸಾರ್ವಜನಿಕರ ಸಂಚಾರಕ್ಕೂ ನಿಯಂತ್ರಣ ಹೇರಿದೆ.

ಇದರ ಜೊತೆಗೆ ಕಳೆದ ಒಂದೆರಡು ವರ್ಷದ ಹಿಂದೆ ಮಳೆಯಿಂದಾಗಿ ಕುಸಿದಿದ್ದ ಸ್ಥಳದಲ್ಲಿಯೂ ರಸ್ತೆ (Road) ಬಿರುಕು ಬಿಟ್ಟಿದೆ. ಅಲ್ಲದೆ ಇಲ್ಲಿ ನಿರ್ಮಿಸಿದ್ದ ತಡೆಗೋಡೆಯು ಒಂದು ಕಡೆಗೆ ವಾಲಿದಂತಿದೆ. ಸುಮಾರು ಅರ್ಧ ಕಿಲೋ ಮೀಟರ್‌ ಅಂತರದಲ್ಲಿ ಒಂದು ಕಡೆ ಭೂಮಿ ಕುಸಿದಿದ್ದರೆ, ಮತ್ತೊಂದು ಕಡೆ ರಸ್ತೆ ಬಿರುಕು ಬಿಟ್ಟಿದೆ.

ಶಾಶ್ವತ ಕಾಮಗಾರಿ

ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಶಿಥಿಲಾವಸ್ಥೆಯಲ್ಲಿರುವ ರಸ್ತೆ ಸರಿಪಡಿಸಲು ಶಾಶ್ವತ ಕಾಮಗಾರಿ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಹೇಳಿದ್ದರು.

ಚಾಮುಂಡಿ ಬೆಟ್ಟದಲ್ಲಿ ಮಳೆಯಿಂದಾಗಿ ಭೂ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಸಚಿವರ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದರು.

ಭೂ ಕುಸಿತವಾಗಿರುವ ಸ್ಥಳ ಸೇರಿದಂತೆ ಬೆಟ್ಟದಲ್ಲಿ ಶಿಥಿಲಾವಸ್ಥೆಯಲ್ಲಿರುವ ತಡೆಗೋಡೆ ಮತ್ತು ರಸ್ತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಶಾಶ್ವತ ಕಾಮಗಾರಿ ನಡೆಸುವ ಸಂಬಂಧ ಯೋಜನೆ ರೂಪಿಸಲಾಗುವುದು. ದೀಪಾವಳಿ ಬಳಿಕ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವರು. ಭೂ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯುವರು ಎಂದು ಹೇಳಿದ್ದರು.

ಕಾವೇರಿಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ   ಅವರು ನ. 2ರಂದು ಕೆಆರ್‌ಎಸ್‌ಗೆ ಭೇಟಿ ನೀಡುವರು. ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಮಳೆ ಹಾನಿ ಸಂಬಂಧ ಚರ್ಚೆ ನಡೆಸಲಾಗುವುದು. ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬೆಟ್ಟದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇದ್ದ ಮಳೆ ನೀರು ಚರಂಡಿಗಳು ಕಾಲ ಕ್ರಮೇಣ ಮುಚ್ಚಿ ಹೋಗಿದ್ದು, ಅವುಗಳನ್ನು ದುರಸ್ತಿಗೊಳಿಸುವ ಮೂಲಕ ಮಳೆ ನೀರುವ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದ್ದರು.

Follow Us:
Download App:
  • android
  • ios