ಚಾಮುಂಡಿ ಬೆಟ್ಟ ಭೂಕುಸಿತ ತಡೆಗೆ ಕಾಯಂ ಪರಿಹಾರಕ್ಕೆ ಮನವಿ

  • ಮಳೆಯಿಂದಾಗಿ ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಭೂ ಕುಸಿತ 
  • ಭೂ ಕುಸಿತ ತಡೆಗೆ ಕಾಯಂ ಪರಿಹಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಅವರಿಗೆ ಮನವಿ
Minister ST Somashekar demand For permanent solution to chamundi hill landslide snr

ಮೈಸೂರು (ಅ.26):  ಮಳೆಯಿಂದಾಗಿ (Rain) ನಾಡಿನ ಅಧಿದೇವತೆ ಚಾಮುಂಡಿ ಬೆಟ್ಟದ (Chamundi Hill) ಭೂ ಕುಸಿತ (Land Slide) ತಡೆಗೆ ಕಾಯಂ ಪರಿಹಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಅವರು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ (CC Patil) ಅವರಿಗೆ ಮನವಿ ಮಾಡಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನ (Chamundeshwari Temple) ವಿಶ್ವ ಪ್ರಸಿದ್ದವಾಗಿದೆ. ದೇವಿಯ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಭಕ್ತರು (Devotees), ಪ್ರವಾಸಿಗರು ಆಗಮಿಸುತ್ತಾರೆ. ವಿಶೇಷ ದಿನಗಳಂದು ಸಹಸ್ರಾರು ಸಂಖ್ಯೆಯ ವಾಹನಗಳು (vehicle) ಬಂದು ಹೋಗುತ್ತವೆ ನಗರಕ್ಕೆ ಹೊಂದಿಕೊಂಡಿರುವ ಚಾಮುಂಡಿ ಬೆಟ್ಟದ ಹಸಿರು, ಪ್ರಾಕೃತಿಕ ಸೌಂದರ್ಯ ಸವಿಯಲು ಚಾರಣ ಪ್ರಿಯರು ಬರುತ್ತಾರೆ. ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಈ ಚಾಮುಂಡಿ ಬೆಟ್ಟದಲ್ಲಿ ಕಳೆದ ಮೂರು ವರ್ಷಗಳ ಅಂತರದಲ್ಲಿ ಎರಡು ಬಾರಿ ಭೂಕುಸಿತ ಉಂಟಾಗಿ ರಸ್ತೆ ಕುಸಿದು ತೀವ್ರ ಆತಂಕ ತಂದೊಡ್ಡಿದೆ ಎಂದಿದ್ದಾರೆ.

ಒಂದು ತಿಂಗಳಲ್ಲಿ ಚಾಮುಂಡಿ ಹುಂಡಿಯಲ್ಲಿ ಸಂಗ್ರಹವಾಯ್ತು ಕೋಟಿ ರು.

2019ರಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಕುಸಿದಿತ್ತು. ರಿಟೇನಿಂಗ್‌ ಆರ್ಸಿಸಿ ಗೋಡೆ ನಿರ್ಮಿಸಿ ಆ ರಸ್ತೆಯನ್ನು (Road) ದುರಸ್ತಿಪಡಿಸಲಾಗಿದೆ. ಆದರೆ ಆ ಘಟನೆ ನಡೆದ ಸುಮಾರು 100 ಮೀಟರ್‌ ಅಂತರದಲ್ಲಿ ಇತ್ತೀಚೆಗೆ ಅ. 20 ರಂದು ಮತ್ತೊಮ್ಮೆ ರಸ್ತೆ ಭಾರಿ ಪ್ರಮಾಣದಲ್ಲಿ ಕುಸಿದು ಆತಂಕ ಉಂಟಾಗಿದೆ. 

ಚಾಮುಂಡಿ ಬೆಟ್ಟದಲ್ಲಿ 196 ಅಂಗಡಿ ಮಳಿಗೆ, ಕಾಮಗಾರಿ ವೀಕ್ಷಿಸಿದ ಸಚಿವ

ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಬೇಕು. ಚಾಮುಂಡಿ ಬೆಟ್ಟದಲ್ಲಿ ಸುಮಾರು 8 ಕಿ.ಮೀ. ರಸ್ತೆ ಇದ್ದು, ಉದ್ದಕ್ಕೂ ರಿಟೇನಿಂಗ್‌ ಆರ್‌ಸಿಸಿ ಗೋಡೆ (RCC wall) ನಿರ್ಮಿಸಿ, ರಸ್ತೆ ಅಭಿವೃದ್ಧಿಪಡಿಸುವುದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ಸುಮಾರು 150 ಕೋಟಿ ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಚಾಮುಂಡಿ ಬೆಟ್ಟ ರಸ್ತೆಯ ಭೂಕುಸಿತಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾವು ಅನುದಾನ ಒದಗಿಸಿ, ಬೇಗ ಕೆಲಸ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಪದೇ ಪದೇ ಭೂಕುಸಿತ ಉಂಟಾಗಿರುವುದರಿಂದ ಚಾಮುಂಡಿ ಬೆಟ್ಟದ ಮಣ್ಣಿನ ಪರೀಕ್ಷೆಯನ್ನು ಸಹ ಮಾಡುವುದು ಸೂಕ್ತವಾಗಿದ್ದು, ಇದಕ್ಕಾಗಿ ತಜ್ಞರ ಸಮಿತಿಯನ್ನೂ ಕೂಡಲೇ ಕಳುಹಿಸಬೇಕಾಗಿ ಅವರು ಕೋರಿದ್ದಾರೆ.

Latest Videos
Follow Us:
Download App:
  • android
  • ios