Asianet Suvarna News Asianet Suvarna News

ಅ. 16ಕ್ಕೆ ಮತ್ತೆ JDS ಅಭ್ಯರ್ಥಿ ನಾಮಪತ್ರ

ಅಕ್ಟೋಬರ್ 16 ರಂದು ಮತ್ತೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. 

Again JDS Candidate will File Nomination On october 16  snr
Author
Bengaluru, First Published Oct 15, 2020, 11:13 AM IST
  • Facebook
  • Twitter
  • Whatsapp

ತುಮಕೂರು (ಅ.15): ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬುಧವಾರ ಮೂರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಸಿ.ಎಂ.ರಾಜೇಶ್‌ ಗೌಡ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಓಬಳೇಶಪ್ಪ ಬಿ.ಟಿ. ಅವರು ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಅವರ ನಾಮಪತ್ರವನ್ನು ಅಭ್ಯರ್ಥಿಯ ಪರವಾಗಿ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ, ಪಕ್ಷದ ರಾಜ್ಯಾಧ್ಯಕ್ಷ ಹೆಚ್‌.ಕೆ.ಕುಮಾರಸ್ವಾಮಿ ಅವರು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ: ನಂದಿನಿ ದೇವಿ ಅವರಿಗೆ ಸಲ್ಲಿಸಿದರು.

ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಗಂಡನಿಗಿಂತ ಶ್ರೀಮಂತೆ ...

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಿರಾ ಕ್ಷೇತ್ರದ ಆರಾಧ್ಯ ದೈವ ಜುಂಜಪ್ಪಸ್ವಾಮಿಗೆ ನಮಸ್ಕರಿಸಿ ನಾವು ನಾಮಪತ್ರ ಸಲ್ಲಿಸಿದ್ದೇವೆ. ಜುಂಜಪ್ಪ ದೇವರ ಆಶೀರ್ವಾದ ಪಕ್ಷದ ಅಭ್ಯರ್ಥಿ ಡಾ. ರಾಜೇಶ್‌ಗೌಡರ ಮೇಲಿದೆ. ನೂರಕ್ಕೆ ನೂರರಷ್ಟುಗೆದ್ದು ಭಾರತೀಯ ಜನತಾ ಪಕ್ಷದ ಪತಾಕೆಯನ್ನು ಶಿರಾದಲ್ಲಿ ಹಾರಿಸಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
 
16ಕ್ಕೆ ಮತ್ತೆ ನಾಮಪತ್ರ

ರಾಜೇಶ್‌ಗೌಡ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಮತ್ತೆ ಅ. 16 ರಂದು ಅಧಿಕೃತವಾಗಿ ಬಿ ಫಾರಂನೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಒಂದೇ ಕುಟುಂಬದ ಸದಸ್ಯರ ರೀತಿ ಚುನಾವಣೆ ಎದುರಿಸಲಿದ್ದೇವೆ ಎಂದು ಅವರು ಹೇಳಿದರು.

Follow Us:
Download App:
  • android
  • ios