ತುಮಕೂರು (ಅ.15):  ಶಿರಾ ಉಪಚುನಾವಣೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿರುವ ಬಿ. ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರು ಸಲ್ಲಿಸಿರುವ ಆಸ್ತಿ ಘೋಷಣೆಯಲ್ಲಿ ತಮ್ಮ ಆಸ್ತಿ 2 ಕೋಟಿ 32 ಲಕ್ಷ ಎಂದು ತೋರಿಸಿದ್ದಾರೆ.

ಪತಿ ದಿವಂಗತ ಸತ್ಯನಾರಾಯಣ 1 ಕೋಟಿ 80 ಲಕ್ಷ ರು. ಒಡೆಯರಾಗಿದ್ದು ಪತಿಗಿಂತ ಪತ್ನಿಯೇ ಶ್ರೀಮಂತೆ. 2019-20 ರ ವಾರ್ಷಿಕ ಆದಾಯ 3,15822 ರು. ಪತಿ ದಿವಂಗತ ಶಾಸಕ ಸತ್ಯ ನಾರಾಯಣ 2019-20 ವಾರ್ಷಿಕ ಆದಾಯ 7,55571. ಇವರ ಮೇಲೆ ಯಾವುದೇ ಕ್ರಿಮಿನಲ… ಮೊಕದಮೆ ಇಲ್ಲ. 25 ಸಾವಿರ ನಗದು ಹೊಂದಿದ್ದಾರೆ.

ವಿವಿಧ ಬ್ಯಾಂಕಿನಲ್ಲಿ ಇರುವ ಡೆಪಾಸಿಟ್‌ ಹಣ 249137 ರು. ಪತಿ ಸತ್ಯನಾರಾಯಣ ಹೆಸರಲ್ಲಿ ಬ್ಯಾಂಕಿನಲ್ಲಿ ಇರುವ ಹಣ 704334 ರು.

ಶಿರಾ ಬೈ ಎಲೆಕ್ಷನ್: ಜೆಡಿಎಸ್ ನಾಮಪತ್ರ ಸಲ್ಲಿಕೆ, ಅಭ್ಯರ್ಥಿಯೇ ಇರಲಿಲ್ಲ..! ...

ಪತಿ ಹೆಸರಲ್ಲಿ 42 ಲಕ್ಷ ಮೌಲ್ಯದ ಎರಡು ಇನ್ನೋವಾ ಕಾರುಗಳಿವೆ. ಇದಲ್ಲದೆ 60 ಲಕ್ಷ ಮೌಲ್ಯದ 1200 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. 7 ಕೆಜಿ ಬೆಳ್ಳಿ ವಸ್ತು ಗಳು ಮತ್ತು ಆಭರಣಗಳೂ ಇವೆ.

ಅಮ್ಮಾಜಮ್ಮ ಅವರ ಒಟ್ಟು ಚಿರಾಸ್ತಿ 8585774 ರು. ಮೌಲ್ಯದ್ದಾಗಿದೆ. ಪತಿ ಸತ್ಯನಾರಾಯಣ ಚರಾಸ್ಥಿ 9104344 ರು. ಮೌಲ್ಯದ್ದಾಗಿದೆ. ಅಮ್ಮಾಜಮ್ಮ ಸ್ಥಿರಾಸ್ಥಿ 8254784 ರು ಮೌಲ್ಯದ್ದಾಗಿದೆ. ಹಾಗೆಯೇ ಪತಿ ಸತ್ಯನಾರಾಯಣ ಸ್ಥಿರಾಸ್ತಿ 6022750 ರು ಮೌಲ್ಯದ್ದಾಗಿದೆ. ಬ್ಯಾಂಕ್‌ ಮತ್ತು ಫೈನಾನ್ಸ್‌ ಗಳಲ್ಲಿ ಅಮ್ಮಾಜಮ್ಮ ಹೆಸರಲ್ಲಿ 6943036 ರು. ಸಾಲವಿದೆ. ಪತಿ ಸತ್ಯನಾರಾಯಣ ಹೆಸರಿನಲ್ಲಿ 3191770 ರುಪಾಯಿ ಸಾಲ ಇದೆ. ಶಿರಾದ ಭುವನಹಳ್ಳಿಯಲ್ಲಿ 238000 ರು ಮೌಲ್ಯದ 12.25 ಎಕರೆ ಕೃಷಿ ಭೂಮಿ ಇದೆ. ಪತಿ ಹೆಸರಲ್ಲಿ ಶಿರಾದ ಭುವನಹಳ್ಳಿಯಲ್ಲಿ 10,70,000 ರು ಮೌಲ್ಯದ 9 ಎಕರೆ ಕೃಷಿ ಭೂಮಿಯಿದೆ. ಪತಿ ಹೆಸರಲ್ಲಿ ಬೆಂಗಳೂರು ಎಚ್‌ ಎಸ್‌ ಆರ್‌ ಲೇಔಟಲ್ಲಿ ಒಂದು ಕೋಟಿ ಮೌಲ್ಯದ ಒಂದು ನಿವೇಶನ ಹೊಂದಿದ್ದಾರೆ.