Kargil Vijay Diwas: ಕಾರ್ಗಿಲ್‌ ಕದನದ ಬಳಿಕ ಪ್ರತಿ ಕ್ಷಣವೂ ಸೈನಿಕರ ನೆನಪು: ಚಕ್ರವರ್ತಿ ಸೂಲಿಬೆಲೆ

ಕಾರ್ಗಿಲ್ ಕದನ ನಂತರ ಪ್ರತಿ ಕ್ಷಣವೂ ಸೈನಿಕರ ನೆನಪು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪುತ್ತೂರಿನ ಅಮರ್‌ ಜವಾನ್‌ ಜ್ಯೋತಿ ಬಳಿ ಕಾರ್ಗಿಲ್‌ ವಿಜಯ ದಿವಸ್‌ ಆಚರಿಸಲಾಯಿತು.

After Kargil war soldiers remember every moment say chakravathy sulibelerav

ಪುತ್ತೂರು (ಜು.27) : ಕಾರ್ಗಿಲ್‌ ಯುದ್ಧದ ಪೂರ್ವದಲ್ಲಿ ದೇಶಕ್ಕೆ ಸಂಕಟ ಬಂದಾಗ ಮಾತ್ರ ಸೈನಿಕರ ನೆನಪಾಗುತ್ತಿತ್ತು. ಕಾರ್ಗಿಲ್‌ ಕದನದ ನಂತರ ದೇಶ ಪ್ರತಿಕ್ಷಣವೂ ಸೈನಿಕರನ್ನು ನೆನಪಿಸುವ ವಾತಾವರಣ ಸೃಷ್ಟಿಯಾಯಿತು. ಭಾರತೀಯರ ಹೃದಯ ಸೈನಿಕರಿಗಾಗಿ ನಿರಂತರ ಮಿಡಿಯಬೇಕು. ಸೈನಿಕರಿಗೆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕು ಎಂದು ಯುವಾಬಿಗ್ರೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ಮಂಗಳವಾರ ಪುತ್ತೂರಿನ ಅಮರ್‌ ಜವಾನ್‌(Amar jawan jyoti) ಜ್ಯೋತಿ ಸಂರಕ್ಷಣಾ ಸಮಿತಿ, ಮಾಜಿ ಸೈನಿಕರ ಸಂಘ ಹಾಗೂ ನಗರದ ನಟ್ಟೊಜ ¶ೌಂಡೇಶನ್‌ನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಅಮರ್‌ ಜವಾನ್‌ ಜ್ಯೋತಿ ಸ್ಮಾರಕದ ಬಳಿ ನಡೆದ ಕಾರ್ಗಿಲ್‌ ವಿಜಯ ದಿವಸ್‌ ಕಾರ್ಯಕ್ರಮದಲ್ಲಿ ಯೋಧ ನಮನವನ್ನು ಸಲ್ಲಿಸಿ ಮಾತನಾಡಿದರು.

ಕಾರ್ಗಿಲ್‌ ವಿಜಯೋತ್ಸವ: ಅರಮನೆ ನಗರಿಯಲ್ಲಿ ಬೈಕ್ ಜಾಥಾ

ಸೈನಿಕರು ಇಂಚಿಂಚು ಭೂಮಿಯನ್ನು ಕಾಪಾಡಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ. ಅಂತಹ ಸೈನಿಕರು ಭಾರತೀಯ ಸೇನೆಯಲ್ಲಿರುವುದರಿಂದಲೇ ಭಾರತ ಇಂದು ಪ್ರತಿಯೊಂದು ವಿರೋಧಿ ರಾಷ್ಟ್ರಗಳಿಗೂ ಸೆಡ್ಡು ಹೊಡೆದು ನಿಂತಿದೆ. ಸಮಾಜದಲ್ಲಿ ನಮ್ಮ ನಮ್ಮ ನಡುವಿನ ವೈಷಮ್ಯಗಳನ್ನು ತೊಡೆದು ಹಾಕಿ, ರಾಷ್ಟ್ರವನ್ನು ವಿಶ್ವಗುರುವಾಗಿಸುವಲ್ಲಿ ನಾವುಗಳು ಶ್ರಮಿಸಬೇಕು ಎಂದರಲ್ಲದೆ ದೇಶದ ಗಡಿಯನ್ನು ಸುಂದರಗೊಳಿಸುವ ಕಾರ್ಯವನ್ನು ಸೈನಿಕರು ಮಾಡಿದರೆ ದೇಶದ ಒಳಗೆ ಸೌಂದರ‍್ಯ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು ಎಂದು ನುಡಿದರು.

ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್‌ ನಂದನ್‌ ಮಾತನಾಡಿದರು.

ಭಾರತದ ಸೈನಿಕರು ಮಾನವೀಯತೆ ಮೆರೆದಿದ್ದಾರೆ: ಮಾಜಿ ಸೈನಿಕ ಪುಟ್ಟಸ್ವಾಮಿ

ಪುತ್ತೂರಿನ ಮಾಜಿ ಸೈನಿಕರ ಸಂಘ ಅಧ್ಯಕ್ಷ ರಾಮಚಂದ್ರ ಪುಚ್ಚೇರಿ ಅಧ್ಯಕ್ಷತೆ ವಹಿಸಿ, ಭಾರತೀಯ ಸೈನಿಕರು ತಮ್ಮ ಮನೆಯವರು ತೀರಿಕೊಂಡಾಗ ಕೂಡ ಮರುಗುತ್ತಾ ಕಾಲ ಕಳೆಯುವುದಿಲ್ಲ. ಮುಂದಿನ ಕಾರ್ಯದ ಬಗೆಗೆ ಕುರಿತು ಯೋಚಿಸುತ್ತಾರೆ. ರಾಷ್ಟ್ರದ ರಕ್ಷಣೆಯೇ ಅವರ ಪರಮ ಗುರಿಯಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್‌. ನಟ್ಟೋಜ, ಆಡಳಿತ ಮಂಡಳಿ ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಸದಸ್ಯರು, ಅಂಬಿಕಾ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು, ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಾಜಿ ಸೈನಿಕರ ಸಂಘದ ಸದಸ್ಯ ಸಾಜೆಂರ್‍ಟ್‌ ಕೆ.ಎಸ್‌. ದಯಾನಂದ ವಂದಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್‌ ಕುಮಾರ್‌ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.

Latest Videos
Follow Us:
Download App:
  • android
  • ios