ಕಾರವಾರ: ಕೊಲೆ ಪ್ರಕರಣದಿಂದ ಮುಕ್ತರಾಗಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ್‌ ಭಾವ

ದರ್ಶನ್‌ ಪ್ರಕರಣದಿಂದ ಮುಕ್ತರಾಗಬೇಕೆಂದು ಅವರ ಭಾವ ಮಂಜುನಾಥ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೈಗಾ ವಸತಿ ಸಂಕೀರ್ಣದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮಂಜುನಾಥ ಅವರು ದರ್ಶನ್ ಹೆಸರಿನಲ್ಲಿ ಶನೈಶ್ವರ ಹಾಗೂ ಆಂಜನೇಯ ದೇವರಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.  

Actor Darshan Brother in law Manjunath Perform Special Pooja in Karwar grg

ಕಾರವಾರ(ಜೂ.15):  ನಟ ದರ್ಶನ್ ಅವರದ್ದು ಸಾಫ್ಟ್ ನೇಚರ್, ಅವರಾಯ್ತು ಅವರ ಕೆಲಸ ಆಯ್ತು. ಅವರ ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಸಂತೋಷವಾಗಿ ಖುಷಿಯಾಗಿರೋರು. ಕೆಲಸದಲ್ಲೂ ತುಂಬಾ ಡೆಡಿಕೇಶನ್, ಇರೋ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಬೇಕು. ಯಾರಿಗೂ ತೊಂದರೆ ಕೊಟ್ಟು ಕೆಲಸ ಮಾಡಲ್ಲ. ಮನೆಗೆ ಬಂದಾಗ ಅವರು ಸೆಲೆಬ್ರಿಟಿ ಅಂತಾನೆ ತೋರಿಸ್ಕೊಳ್ತಿರಲಿಲ್ಲ ಎಂದು ದರ್ಶನ್ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ್ ತಿಳಿಸಿದ್ದಾರೆ. ನಟ ದರ್ಶನ್ ಅವರ ಭಾವ ಮಂಜುನಾಥ್ ಕಾರವಾರದ ಕೈಗಾ ಪ್ರದೇಶದಲ್ಲಿ ನೆಲೆಸಿದ್ದಾರೆ. 

ಇಂದು(ಶನಿವಾರ) ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಮಂಜುನಾಥ್, ಎಲ್ಲರ ಜತೆ ಸೇರಿಕೊಂಡು ಕ್ರಿಕೆಟ್ ಕೂಡಾ ಆಡ್ತಿದ್ರು, ಜನ ಅವರನ್ನು ನೆನೆಸ್ಕೊತ್ತಾರೆ. ದರ್ಶನ್ ಮಾಡಿದ ದಾನ ಧರ್ಮಗಳ ಬಗ್ಗೆ ಲೆಕ್ಕವೇ ಇಲ್ಲ, ಸಮುದ್ರ ತರಾನೇ. ಯಾರೇ ಕಷ್ಟ ಅಂತಾ ಬಂದ್ರೂನೂ ತೃಷ್ತಿಪಡಿಸಿ ಕಳುಹಿಸ್ತಿದ್ರು. ಅನಾಥಾಶ್ರಮಗಳಿಗೆ ದಾನ ಮಾಡ್ತಿದ್ರು, ಬರೋ ಆದಾಯದಲ್ಲೂ ಸಾಕಷ್ಟು ದಾನ ಮಾಡ್ತಿದ್ರು. ಅವರನ್ನು ಯಾರೂ ಪ್ರೊವೋಕ್ ಮಾಡಬಾರದಷ್ಟೇ, ಅದು ಬಿಟ್ರೆ ಅವರು ಕೆಲಸ ಮಾಡ್ಕೊಂಡು ಚೆನ್ನಾಗಿರ್ತಾರೆ. ಅವರ ಪಾಡಿಗೆ ಅವರು ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡು ಹೋಗ್ತಿದ್ರು. ದರ್ಶನ್ ಅವರು ಅವರಾಗಿಯೇ ಏನೂ ಮಾಡೋಕೆ ಹೋಗಲ್ಲ, ಮಾಡೋದು ಇಲ್ಲ. ಅವರು ಏನೂಂತ ನಮಗೆ ಗೊತ್ತು, ಯಾರಿಗೆ ನೋವಾದ್ರೂನು ಅದನ್ನು ಫಾಲೋ ಮಾಡಿ ಕ್ಲಿಯರ್ ಆಗೋವರೂ ಬಿಡಲ್ಲ ಎಂದು ಹೇಳಿದ್ದಾರೆ. 

ನಟ ದರ್ಶನ್‌ಗೆ ರಾಜಾತಿಥ್ಯ ಕೊಡುತ್ತಿಲ್ಲ: ಸಚಿವ ಪರಮೇಶ್ವರ್‌

ದರ್ಶನ್ ಕ್ಲೀನ್ ಚಿಟ್ ತೆಗೆದುಕೊಂಡು ಶೀಘ್ರದಲ್ಲಿ ಹೊರ ಬರ್ತಾರೆ. ಫ್ಯಾನ್ಸ್‌ಗಳಿಗೆ ಒಳ್ಳೇ ಸಿನಿಮಾ ಮಾಡ್ತಾರೆ, ಜನಸೇವೆ ಕೂಡಾ ಮಾಡ್ತಾರೆ. ಉಳಿದವರ ಮಾತು ದರ್ಶನ್ ಹೆಚ್ಚಾಗಿ ಕೇಳೋಕೆ ಹೋಗಲ್ಲ. ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ, ಇಲ್ಲವೇ ಎಂದು ನ್ಯಾಯಾಲಯ ತೀರ್ಮಾನ ಮಾಡ್ತದೆ. ಅಲ್ಲಿಯವರೆಗೆ ಅಭಿಮಾನಿಗಳು ಶಾಂತವಾಗಿರಿ, ಅವರು ಶೀಘ್ರದಲ್ಲಿ ಹೊರ ಬರ್ತಾರೆ, ಅದಕ್ಕೆ ಕಾಯೋಣ. ದರ್ಶನ್ ತುಂಬಾ ಕೂಲ್ ಪರ್ಸನ್, ತಮಾಷೆ ಮಾಡಿಕೊಂಡು ಇರ್ತಾರೆ, ಕೋಪಿಷ್ಠ ಅಲ್ಲ. ಆದಷ್ಟು ಬೇಗ ಅವರು ಹೊರಬರಬೇಕು, ಫ್ಯಾನ್ಸ್‌ಗಳಿಗೆ ಉತ್ತಮ ಸಿನಿಮಾ ಮಾಡ್ಬೇಕು, ಮಾದರಿಯಾಗಿರಬೇಕು. ಜನಸೇವೆ ಮಾಡ್ತಿದ್ರು, ಅದನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ. 

ದರ್ಶನ್‌ ಪ್ರಕರಣದಿಂದ ಮುಕ್ತರಾಗಬೇಕೆಂದು ಅವರ ಭಾವ ಮಂಜುನಾಥ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೈಗಾ ವಸತಿ ಸಂಕೀರ್ಣದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮಂಜುನಾಥ ಅವರು ದರ್ಶನ್ ಹೆಸರಿನಲ್ಲಿ ಶನೈಶ್ವರ ಹಾಗೂ ಆಂಜನೇಯ ದೇವರಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಮಂಜುನಾಥ ಅವರು ಶೀಘ್ರದಲ್ಲಿ ದರ್ಶನ್ ಆರೋಪದಿಂದ ಮುಕ್ತರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. 

ಸದ್ಯಕ್ಕೆ ದರ್ಶನ್‌ ಗ್ರಹ ಗತಿ ಸರಿಯಿಲ್ಲ:  

ಸದ್ಯಕ್ಕೆ ಚಿತ್ರ ನಟ ದರ್ಶನ್‌ ಗ್ರಹ ಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ. ಹಾಗಾಗಿ ಅವರ ಭಾವ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೈಗಾದ ಪುರಾತನ ಮಂದಿರವಾದ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಕೈಗಾ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಪಾದ ಭಟ್ ಹೇಳಿದ್ದಾರೆ. 

ದರ್ಶನ್ ನನ್ನ ಶಿಷ್ಯ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗ್ತಿದೆ: ಅಡ್ಡಂಡ ಸಿ ಕಾರ್ಯಪ್ಪ ಟೀಕೆ

ಇಂದು ಬೆಳಿಗ್ಗೆ ದೇವರ ದರ್ಶನದ ಜತೆ ಅರ್ಚನೆ ಹಾಗೂ ಅಭಿಷೇಕ ಮಾಡಿಸಲಾಗಿದೆ. ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಹೊರ ಬರುವಂತೆ ಹಾಗೂ ದರ್ಶನ್ ಮೇಲಿರುವ ದುಷ್ಟ ಶಕ್ತಿಗಳ ನಿವಾರಣೆ ಆದಷ್ಟು ಬೇಗ ಆಗಲಿ ಎಂದು ಪ್ರಾರ್ಥಿಸಲಾಗಿದೆ ಎಂದು ತಿಳಿಸಿದ್ದಾರೆ. 

ಮನುಷ್ಯನಿಗೆ ಜೀವತಾವಧಿಯಲ್ಲಿ ಶನಿ ಪೀಡೆ ಅಂತಾ ಬರುತ್ತೆ. ಅಂತ ದೋಷಗಳಿದ್ದಾಗ ಆದಷ್ಟು ಬೇಗ ನಿವಾರಣೆ ಆಗಲೇಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದರ್ಶನ್ ಆಗಾಗ ಕೈಗಾದಲ್ಲಿರುವ ಸಹೋದರಿಯ ಮನೆಗೆ ಬಂದು ಹೋಗುತ್ತಿದ್ದರು. ದೇವರ ಆಶೀರ್ವಾದ ಪಡೆಯಲು ಕ್ಷೇತ್ರಕ್ಕೆ ಕೂಡ ಬಂದಿದ್ರು. ಅವರನ್ನು ನಾನು ಬಹಳಷ್ಟು ಬಾರಿ ಕೈಗಾ ಪ್ರದೇಶದಲ್ಲಿ ನೋಡಿದ್ದೇನೆ. ದೇವಸ್ಥಾನಕ್ಕೆ ಯಾರೇ ಬಂದ್ರೂ ಅವರಿಗೆ ಆಶೀರ್ವಾದ ಮಾಡುವುದಷ್ಟೇ ನಮ್ಮ ಕೆಲಸ. ಇಲ್ಲಿ ಬರುವವರ ಯಾರ ವೈಯಕ್ತಿಕ ವಿಚಾರವಾಗಿಯೂ ನಾವು ಬಹಿರಂಗವಾಗಿ ಹೇಳುವುದಿಲ್ಲ. ದರ್ಶನ್‌ ಇವತ್ತಿನ ಪ್ರಕರಣದ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ ಎಂದ ಅರ್ಚಕರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios