Gadag: ನಟ ಚೇತನ್ ಕ್ರಿಕೆಟ್ ಮೀಸಲಾತಿ ಚರ್ಚೆ ಪ್ರಚಾರಕ್ಕೆ ಸೀಮಿತ : ಸಚಿವ ಹಾಲಪ್ಪ ಆಚಾರ್ ಕಿಡಿ
ಯಾವುದೇ ವ್ಯಕ್ತಿಯಲ್ಲಿ ಪ್ರತಿಭೆ ಇದ್ದರೆ ಅದಕ್ಕೆ ತಕ್ಕಂತೆ ಶ್ರಮಪಟ್ಟಲ್ಲಿ ಸಂಬಂಧಪಟ್ಟಂತಹ ಕ್ರೀಡೆಗೆ ಆಯ್ಕೆಯಾಗುತ್ತಾರೆ. ಆದರೆ, ಯಾರೊಬ್ಬರೂ ಜಾತಿ ನೋಡಿ ಕ್ರೀಡಾ ತಂಡಕ್ಕೆ ಸದಸ್ಯರನ್ನು ಸೆಲೆಕ್ಟ್ ಮಾಡುವುದಿಲ್ಲ. ಆದರೆ, ನಟ ಚೇತನ್ ಪ್ರಚಾರ ಪಡೆದುಕೊಳ್ಳುವ ದೃಷ್ಟಿಯಿಂದಲೇ ಕ್ರಿಕೆಟ್‌ನಲ್ಲಿ ಮೀಸಲಾತಿ ಕಲ್ಪಿಸುವಂತೆ ಹೇಳುತ್ತಿದ್ಧಾರೆ ಎಂದು ಸಚಿವ ಹಾಲಪ್ಪ ಆಚಾರ್ ಆಕ್ರೋಶ ವ್ಯಕ್ತಪಡಿಸಿದರು.
ಗದಗ (ಡಿ.5) : ವ್ಯಕ್ತಿಯಲ್ಲಿನ ಪ್ರತಿಭೆಗೆ ಜಾತಿ ಬೇಧವಿಲ್ಲ. ಪ್ರತಿಭೆ ಇದ್ದವರು ಕ್ರಿಕೆಟ್ ಮತ್ತು ಇತರೆ ಕ್ರೀಡೆಗಳಿಗೆ ಬರುತ್ತಾರೆ. ಸಂಬಂಧಪಟ್ಟ ಕ್ರೀಡೆಯಲ್ಲಿ ಹಾರ್ಡ್ ವರ್ಕ್ ಮಾಡಿ ಮುಂದೆ ಬಂದವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಗಲನ್ನು ಆಡುವ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ, ಯಾರೊಬ್ಬರೂ ಜಾತಿ ನೋಡಿ ಸೆಲೆಕ್ಟ್ ಮಾಡುವುದಿಲ್ಲ. ನಟ ಚೇತನ್ ಪ್ರಚಾರ ಪಡೆದುಕೊಳ್ಳುವ ದೃಷ್ಟಿಯಿಂದಲೇ ಇಂತಹ ಅಸಂಬಂಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಆಕ್ರೋಶ ವ್ಯಕ್ತಪಡಿಸಿದರು.
ನಟ ಚೇತನ್ ಅವರು ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಕರಿಯರಿಗೆ ಮೀಸಲಾತಿ ನೀಡಲಾಗಿದೆ. 2016ರಿಂದ 6 ಮಂದಿ ಕರಿಯರಿಗೆ ಅವಕಾಶ ನೀಲಾಗುತ್ತದೆ. ಇದೇ ರೀತಿ ಭಾರತದಲ್ಲಿ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ನೀಡಬೇಕು. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದ್ದು, ಮೀಸಲಾತಿಯನ್ನು ಜಾರಿಗೊಳಿಸಿದರೆ ಭಾರತೀಯ ಕ್ರಿಕೆಟ್ ವೈಶಾಲ್ಯತೆ ಶ್ರೀಮಂತವಾಗುತ್ತದೆ ಎಂದು ಚೇತನ್ ಹೇಳಿಕೆ ನೀಡಿದ್ದರು. ಆದರೆ, ಅವರು ನೀಡಿರುವ ಕೇವಲ ಪ್ರಚಾರ ಪಡೆಯಲು ಮಾತ್ರ ಸೀಮಿತವಾಗಿದೆ. ಇದು ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಗೆ ತಂಡದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಸಮಂಜಸವಾಗಿಕಾಣಿಸುವುದಿಲ್ಲ ಎಂದು ಸಚಿವ ಹಾಲಪ್ಪ ಬಸಪ್ಪ ಆಚಾರ್ ತಿಳಿಸಿದರು.
ಟೀಂ ಇಂಡಿಯಾದಲ್ಲಿ ತುಂಬಿಕೊಂಡಿದೆ ಮೇಲ್ಜಾತಿ, ಬೇಕಿದೆ ಮೀಸಲಾತಿ; ನಟ ಚೇತನ್!
ಧರ್ಮ ದಂಗಲ್ ಪ್ರಚಾರಕ್ಕೆ ಸೀಮಿತ: ರಾಜ್ಯದಲ್ಲಿ ಹನುಮ ಮಾಲೆ ಹಾಕಿಕೊಂಡು ಪೂಜೆ, ವ್ರತ ಮಾಡುವುದು ಇಂದು, ನಿನ್ನೆಯ ಪದ್ದತಿಯಲ್ಲ. ಅದರಲ್ಲಿ ಹೊಸದೇನೂ ಇಲ್ಲ. ಇನ್ನು ಅಂಜನಾದ್ರಿ ಬೆಟ್ಟಕ್ಕೆ ಹೋಗುವುದು ಕೂಡ ಸಾಮಾನ್ಯವಾಗಿದೆ. ಮತ್ತೊಂದೆಡೆ ಎಲ್ಲ ಸ್ಥಳಗಳಲ್ಲಿ ಹಿಂದು ಮತ್ತು ಮುಸ್ಲಿಂ ಕುಟುಂಬಗಳು ತಮ್ಮ ಧರ್ಮದ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ಈಗ ಯಾಕೆ ಧರ್ಮದಂಗಲ್ ಯಾಕೆ ಆಗುತ್ತದೆ. ಇಲ್ಲಿ ಕೆಲವರು ಬೇಕಂತಲೇ ಧರ್ಮ ದಂಗಲ್ ಅನ್ನೋ ಹೇಳಿಕೆ ಕೊಟ್ಟು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಹಾರಾಷ್ಟ್ರ ಸಚಿವರ ಆಗಮನಕ್ಕೆ ವಿರೋಧವಿಲ್ಲ: ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ನಾವು ಅಲ್ಲಿಗೆ ಹೋಗುತ್ತೇವೆ. ಅವರು ಕೂಡ ಸಾಮಾನ್ಯವಾಗಿ ಇಲ್ಲಿಗೆ ಬರುತ್ತಾರೆ. ಆದರೆ, ಅನಾವಶ್ಯಕವಾಗಿ ಗಡಿ ಅಥವಾ ಇನ್ಯಾವುದೇ ವಿಚಾರದಲ್ಲಿ ಪ್ರಚೋದನೆ ನೀಡಿದರೆ ಎಲ್ಲರೂ ರೊಚ್ಚಿಗೇಳುತ್ತಾರೆ. ಮಹಾರಾಷ್ಟ್ರದವರು ತಮ್ಮ ಅಭಿಮಾನ ತಾವು ಇಟ್ಟುಕೊಳ್ಳಲಿ. ಕನ್ನಡದರಾದ ನಮಗೆ ಅಭಿಮಾನ ಇರುವುದಿಲ್ಲವೇ? ಅನಾವಶ್ಯಕವಾಗಿ ಗಡಿ ವಿಉಚಾರ ಪ್ರಸ್ತಾಪಿಸಿ ಜನರ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಅನ್ಯ ಧರ್ಮೀಯರಿಗೆ ವ್ಯಾಪಾರ: ಬಿಜೆಪಿ ಶಾಸಕನ ವಿರುದ್ಧ ಭಜರಂಗದಳ ಕಿಡಿ
ಪ್ರಚೋದನಕಾರಿ ಹೇಳಿಕೆ ಸಹಿಸೊಲ್ಲ: ಎಲ್ಲಿಯೋ ಕುಳಿತು ಸುಮ್ಮನೆ ಪ್ರಚೋದನಕಾರಿ ಹೇಳಿಕೆ ನೀಡೋದು ಎಷ್ಟರ ಮಟ್ಟಿಗೆ ಸರಿ. ಅವರ ಮಾತುಗಳಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣ ಸೂಕ್ಷ್ಮತೆಗಳಿಲ್ಲ. ಕರ್ನಾಟಕದವರು ಶಾಂತಿ ಪ್ರಿಯರಾಗಿದ್ದು, ಒಟ್ಟಿಗೆ ಹೋಗುವ ಮನಸ್ಥಿತಿ ಉಳ್ಳವರು. ಇಲ್ಲಿಗೆ ಯಾರೊಬ್ಬರು ಬಂದು- ಹೋಗೋದಕ್ಕೆ ಅಭ್ಯಂತರ ಇಲ್ಲ. ಆದರೆ, ಬಂದ ಸಂದರ್ಭದಲ್ಲಿ ಪ್ರಚೋದನ ಹೇಳಿಕೆ ನೀಡಬಾರದು. ಅನಗತ್ಯವಾಗಿ ಸ್ವಾಭಿಮಾನ ಕೆಣಕುವುದು ಯಾರಿಗೂ ಸಹಿಸಲಾಗಲ್ಲ ಎಂದು ಗಣಿ, ಮಹಿಳಾ ಮತ್ತು ಮಕ್ಕಳ ಸಚಿವ ಹಾಲಪ್ಪ ಆಚಾರ ಹೇಳಿದರು.